5ಕ್ಕೆ ಮಾದಾಪುರ ಕೊಡವ ಭವನ ಉದ್ಘಾಟನೆ

Contributed bynasirmnkodagu@gmail.com|Vijaya Karnataka

ಮಾದಾಪುರದಲ್ಲಿ ನಿರ್ಮಾಣಗೊಂಡಿರುವ ಕೊಡವ ಸಮುದಾಯ ಭವನ ಮೇ 5ರಂದು ಲೋಕಾರ್ಪಣೆಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭವನವನ್ನು ಉದ್ಘಾಟಿಸಲಿದ್ದಾರೆ. 4.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಭವನ 700 ಆಸನಗಳ ಸಾಮರ್ಥ್ಯ ಹೊಂದಿದೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

madaapur kodava bhavan inauguration a new community key for 450 crore cost

*4.50 ಕೋಟಿ ರೂ. ವೆಚ್ಚದಲ್ಲಿನಿರ್ಮಾಣ | ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆ

ವಿಕ ಸುದ್ದಿಲೋಕ ಮಡಿಕೇರಿ

ಮಾದಾಪುರದ ಕೊಡವ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನೆ ಮೇ 5ರಂದು ನಡೆಯಲಿದ್ದು, ಹಾವೇರಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನು ಮೇದಪ್ಪ ತಿಳಿಸಿದ್ದಾರೆ.

ನಗರದಲ್ಲಿಸುದ್ದಿಗೋಷ್ಟಿಯಲ್ಲಿಮಾತನಾಡಿದ ಅವರು, ‘‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಈ ಪೈಕಿ 75 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 25 ಲಕ್ಷ ರೂ. ಅನುದಾನ ಬರಬೇಕಾಗಿದೆ,’’ ಎಂದರು.

‘‘ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅವರ ವಿಶೇಷ ಪ್ರಯತ್ನದಿಂದ ಹಾಗೂ ಮಾಜಿ ಸಂಸದ, ಮಾಜಿ ಶಾಸಕರ ಪ್ರಯತ್ನದಿಂದ ಸೂಕ್ತ ಅನುದಾನ ಒದಗಿಸಲಾಗಿತ್ತು. ಅನೇಕ ದಾನಿಗಳಿಂದಲೂ ಆರ್ಥಿಕ ಸಂಪನ್ಮೂಲ ಸಂಗ್ರಹವಾಗಿದೆ. ಹಾಲಿ ಶಾಸಕ ಡಾ.ಮಂತರ್ ಗೌಡ ಅವರು 10 ಲಕ್ಷ ರೂ. ವೆಚ್ಚದಲ್ಲಿಸಮುದಾಯ ಭವನದ ರಸ್ತೆ ನಿರ್ಮಿಸಲು ಒಪ್ಪಿದ್ದಾರೆ,’’ ಎಂದು ತಿಳಿಸಿದರು.

‘‘ಕೊಡವ ಸಮುದಾಯ ಭವನವು 4.50 ಕೋಟಿ ರೂ. ವೆಚ್ಚದಲ್ಲಿನಿರ್ಮಾಣವಾಗಿದ್ದು, ಈವರೆಗೆ 3.50 ಕೋಟಿ ರೂ. ವೆಚ್ಚದಷ್ಟು ಕಾಮಗಾರಿ ಕಾರ್ಯಗಳು ನಡೆದಿವೆ. ಇನ್ನೂ 1 ಕೋಟಿ ರೂ. ಮೌಲ್ಯದ ಕಾಮಗಾರಿ ಬಾಕಿಯಿದೆ. ಸಮುದಾಯ ಭವನಕ್ಕಾಗಿ 5 ಎಕರೆ ಜಾಗವನ್ನು ಮಾದಾಪುರ ಕೊಡವ ಸಮಾಜದಿಂದ ಖರೀದಿಸಲಾಗಿದ್ದು, ಇಲ್ಲಿ1 ಸಾವಿರ ವಾಹನಗಳ ನಿಲುಗಡೆಗೆ ಅವಕಾಶವಿದೆ. ಸಮುದಾಯ ಭವನದಲ್ಲಿ700 ಆಸನಗಳ ಸಾಮರ್ಥ್ಯವಿದ್ದು, ಅಂದಾಜು 2 ಸಾವಿರ ಜನರು ಪಾಲ್ಗೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿದೆ,’’ ಎಂದು ವಿವರಿಸಿದರು.

ಕಾರ್ಯಕ್ರಮಕ್ಕೆ ಜಿಲ್ಲಾಉಸ್ತುವಾರಿ ಸಚಿವ ಎನ್ .ಎಸ್ .ಬೋಸರಾಜು, ಶಾಸಕರಾದ ಎ.ಎಸ್ .ಪೊನ್ನಣ್ಣ, ಡಾ.ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್ , ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎಸ್ .ಅಶ್ವಥನಾರಾಯಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ , ಮಾಜಿ ಸಚಿವ ಎಂ.ಸಿ.ನಾಣಯ್ಯ, ವಿಧಾನಸಭೆಯ ಮಾಜಿ ಸಭಾಪತಿ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಬಿ.ಎ.ಜೀವಿಜಯ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮಾದಾಪುರ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಐಚೆಟ್ಟಿರ ನಂಜಪ್ಪ, ನಿರ್ದೇಶಕರಾದ ನಾಪಂಡ ಉಮೇಶ್ ಉತ್ತಪ್ಪ, ಮಳೆಯಂಡ ಜೋಯಪ್ಪ ಉಪಸ್ಥಿತರಿದ್ದರು.

ಫೋಟೊ: ಒಆಏ01ಓ- ಒಂಆಂPWಖಂ ಏಔಆಂಗಿಂ Tಂಒಂಎಂ Pಒ

ಕ್ಯಾಪ್ಷನ್ : ಮಾದಾಪುರದ ಕೊಡವ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನೆ ಸಂಬಂಧ ಸಮಾಜದ ಪ್ರಮುಖರು ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು.