ಹಕ್ಕುಪತ್ರ ನೀಡಲು ಒತ್ತಾಯ
ವಿಕ ಸುದ್ದಿಲೋಕ ಸಿಂಧನೂರು
‘‘ತಾಲೂಕಿನ ತುರುವಿಹಾಳ ಪಟ್ಟಣದ ವಾರ್ಡ್ ನಂ.10ರಲ್ಲಿವಾಸವಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು,’’ ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದಿಂದ ಗುರುವಾರ ಪ್ರತಿಭಟನೆ ನಡೆಸಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪಟ್ಟಣದ ವಾರ್ಡ್ ನಂ.10ರಲ್ಲಿ20 ವರ್ಷಗಳಿಂದ ಕೃಷಿ ಕೂಲಿಕಾರರು ವಾಸಿಸುತ್ತಿದ್ದಾರೆ. ವಾಸಿಸುವ ಜನರಿಗೆ ಪಟ್ಟಾ ನೀಡುವಂತೆ ಹಲವು ಬಾರಿ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರಿಸಿಲ್ಲ. ವಾರ್ಡಿಗೆ ಸಿಮೆಂಟ್ ರಸ್ತೆ, ನಳದ ಸಂಪರ್ಕ, ಶೌಚಾಲಯ ಸೇರಿ ಯಾವುದೇ ಸೌಲಭ್ಯವೂ ಇಲ್ಲ. ಈ ಬಗ್ಗೆ ಕೂಡಲೇ ಗಮನಹರಿಸಬೇಕು. ಹಕ್ಕುಪತ್ರ ಸೇರಿ ಎಲ್ಲಬೇಡಿಕೆ ಈಡೇರಿಸಬೇಕು,’’ ಎಂದು ಒತ್ತಾಯಿಸಿದರು.
ಪಕ್ಷದ ತಾಲೂಕು ಕಾರ್ಯದರ್ಶಿ ಬಸವಂತರಾಯಗೌಡ ಕಲ್ಲೂರು, ಶಾಖೆ ಕಾರ್ಯದರ್ಶಿ ಇಬ್ರಾಹಿಂಸಾಬ್ , ಕುಂಬಾರ ಮರಿಯಪ್ಪ, ನರಸಣ್ಣ ನಾಯಕ, ಎಸ್ .ದೇವೇಂದ್ರಗೌಡ, ಎಂ.ಗೋಪಾಲಕೃಷ್ಣ, ವೀರೇಶ, ಹನುಮಂತ, ನಾಗರತ್ನಮ್ಮ, ಮಲ್ಲಮ್ಮ, ಹೊನ್ನಮ್ಮ ಇದ್ದರು.
---
ಆರ್ ಸಿಎಚ್ 30ಎಸ್ ಎನ್ ಡಿ9:
ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣದ ವಾರ್ಡ್ ನ.10ರ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಗುರುವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

