ಗುಣಮಟ್ಟದ ಕಾಮಗಾರಿ ಕೈಗೊಳ್ಳಿ

Contributed byvkkonanur@gmail.com|Vijaya Karnataka

ಕೊಣನೂರು ಹೋಬಳಿಯ ವೆಂಕಟೇಗೌಡನ ಕೊಪ್ಪಲು ಗ್ರಾಮದಲ್ಲಿ 15 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಮಂಜು ಭೂಮಿ ಪೂಜೆ ನೆರವೇರಿಸಿದರು. ಅಧಿಕಾರಿಗಳು ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು. ಸ್ಥಳೀಯರು ಕಾಮಗಾರಿ ನಡೆಯುವಾಗ ಗಮನಹರಿಸಬೇಕು. 20 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಹೆಚ್ಚುವರಿಯಾಗಿ 5 ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿದರು.

quality road work mla e manju launched groundbreaking ceremony

15 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಎ.ಮಂಜು ಭೂಮಿಪೂಜೆ

ವಿಕ ಸುದ್ದಿಲೋಕ ಕೊಣನೂರು

ಸರಕಾರದ ಯಾವುದೇ ಕಾಮಗಾರಿಯನ್ನು ಅಧಿಕಾರಿಗಳು ಗುತ್ತಿಗೆದಾರರಿಂದ ಗುಣಮಟ್ಟದಲ್ಲಿಮಾಡಿಸಿಕೊಳ್ಳಬೇಕು ಹಾಗೂ ಸ್ಥಳೀಯರು ಕಾಮಗಾರಿ ನಡೆಯುವ ಸಂದರ್ಭ ಸ್ಥಳದಲ್ಲಿದ್ದು ಗುಣಮಟ್ಟದ ಬಗ್ಗೆ ಗಮನಹರಿಸಬೇಕು ಎಂದು ಶಾಸಕ ಎ.ಮಂಜು ತಿಳಿಸಿದರು.

ಹೋಬಳಿಯ ವೆಂಕಟೇಗೌಡನ ಕೊಪ್ಪಲು ಗ್ರಾಮದಲ್ಲಿ15 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮಸ್ಥರ ಮನವಿಯಂತೆ ಗುದ್ದಲಿ ಪೂಜೆ ಕಾರ ್ಯ ನೆರವೇರಿಸಿದ್ದು, ಹೆಚ್ಚುವರಿಯಾಗಿ ಇನ್ನು 5 ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿ ದೇವಸ್ಥಾನದವರೆಗೂ ರಸ್ತೆ ಪೂರ್ಣಗೊಳಿಸಲು ತಿಳಿಸಿದರು. 20 ದಿನದಲ್ಲಿಕಾಮಗಾರಿಯನ್ನು ಗುಣಮಟ್ಟದಲ್ಲಿಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಮುಖಂಡರಾದ ರವಿ, ಮಂಜು, ಪುಟ್ಟರಾಜು, ಯಜಮಾನ್ ಮಂಜೇಗೌಡ್ರು, ತಿಮ್ಮೇಗೌಡ್ರು, ರಂಗೇಗೌಡ್ರು, ಪ್ರಕಾಶ್ , ರಾಮೇಗೌಡ, ಗಣೇಶ್ , ಗ್ರಾಮದ ಎಲ್ಲಾಹಿರಿಯರು, ಮುಖಂಡರು, ಪಕ್ಷದ ಕಾರ ್ಯಕರ್ತರು ಉಪಸಿತರಿದ್ದರು.

ಏಖN1ಓN್ಕ1-2 ಧಿ ಕೊಣನೂರು ಹೋಬಳಿಯ ವೆಂಕಟೇಗೌಡನ ಕೊಪ್ಪಲು ಗ್ರಾಮದಲ್ಲಿ15 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಮಂಜು ಭೂಮಿ ಪೂಜೆ ನೆರವೇರಿಸಿದರು.