4ರಂದು ಶಿವಕುಮಾರ ಸ್ವಾಮೀಜಿ ಪ್ರತಿಮೆ ಅನಾವರಣ

Contributed bysavinasha46@gmail.com|Vijaya Karnataka

ತಿ.ನರಸೀಪುರದಲ್ಲಿ ಮೇ 4ರಂದು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ಅನಾವರಣಗೊಳ್ಳಲಿದೆ. 119ನೇ ಜಯಂತ್ಯುತ್ಸವ ಮತ್ತು ವಿಶ್ವಗುರು ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಸೇವಾ ಟ್ರಸ್ಟ್ ಆಯೋಜಿಸಿದೆ. ಶ್ರೀ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಹಲವು ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

shivakumar swamiji statue unveiling model event on 4th

4ರಂದು ಶಿವಕುಮಾರ ಸ್ವಾಮೀಜಿ

ಪ್ರತಿಮೆ ಅನಾವರಣ

ವಿಕ ಸುದ್ದಿಲೋಕ ತಿ.ನರಸೀಪುರ

ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ಅನಾವರಣ ಹಾಗೂ 119ನೇ ಜಯಂತ್ಯುತ್ಸವ ಮತ್ತು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಸೇವಾ ಟ್ರಸ್ಟ್ ವತಿಯಿಂದ ಮೇ 4ರಂದು ಆಯೋಜನೆ ಮಾಡಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಶಿವಕುಮಾರ ಸ್ವಾಮೀಜಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಹೆಳವಹುಂಡಿ ಸಿದ್ದಪ್ಪ ತಿಳಿಸಿದರು.

ಪಟ್ಟಣದ ವಿದ್ಯೋದಯ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘‘ಮೇ 4ರಂದು ಬೆಳಗ್ಗೆ 10ಕ್ಕೆ ವಿದ್ಯೋದಯ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿಶ್ರೀ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿಕಾರ್ಯಕ್ರಮ ನೆರವೇರಲಿದೆ. ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಡ್ರಳ್ಳಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಎಂ.ಎಲ….ಹುಂಡಿ ವಿರಕ್ತಮಠ ಶ್ರೀ ಗೌರಿಶಂಕರ ಸ್ವಾಮೀಜಿ, ಹಲವಾರ ಮುಡುಕುನಪುರ ಮಠ ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಸರಗೂರು ಹೊಸಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿಕುಂದೂರು ಮಠದ ಡಾ.ಶರತ್ ಚಂದ್ರ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಲಿದ್ದಾರೆ,’’ ಎಂದರು.

ಶ್ರೀ ಶಿವಕುಮಾರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಬಜ್ಜಿ ನಿಂಗಪ್ಪ, ಉಪಾಧ್ಯಕ್ಷ ಮಾವಿನಹಳ್ಳಿ ಸೋಮಣ್ಣ, ಖಜಾಂಚಿ ಕೆಬ್ಬೆಹುಂಡಿ ಮಾಯಪ್ಪ, ನಿರ್ದೇಶಕ ಕೇಬಲ್ ರಾಜಶೇಖರ್ , ಗೌರವ ಸಲಹೆಗಾರ ಹೆಳವರಹುಂಡಿ ಮೂರ್ತಿ, ಮೂಗೂರು ಗುರುಸಿದ್ದಪ್ಪ, ಅಗರ ಪರಶಿವಮೂರ್ತಿ ಇತರರಿದ್ದರು.