1ನಿಜಗುಣಿ2
ಆಗಸ್ಟ್ ದಲ್ಲಿವಿಶೇಷ ಲೋಕ ಅದಾಲತ್
ವಿಕ ಸುದ್ದಿಲೋಕ ಧಾರವಾಡ
ಸುಪ್ರೀಂ ಕೋರ್ಟ್ ನಲ್ಲಿವಿಚಾರಣೆ ಬಾಕಿ ಇರುವ ರಾಜಿ ಆಗಬಹುದಾದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಜಿಲ್ಲಾಮತ್ತು ತಾಲೂಕು ಕೋರ್ಟ್ ಗಳಲ್ಲಿಆಗಸ್ಟ್ 21, 22 ಮತ್ತು 23ರಂದು ವಿಶೇಷ ಲೋಕ ಅದಾಲತ್ ನಡೆಯಲಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಜಿಲ್ಲಾಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ, ಬ್ಯಾಂಕಿಂಗ್ ಮತ್ತು ವಿಮೆ, ಮೋಟಾರು ವಾಹನ ಅಪಘಾತ ಪರಿಹಾರ, ವರ್ಗಾವಣೆ ಅರ್ಜಿ, ಬಾಡಿಗೆ, ಆಸ್ತಿ ತೆರಿಗೆ, ಕೌಟುಂಬಿಕ ವಿವಾದ ಮೊದಲಾದ ಪ್ರಕರಣಗಳನ್ನು ಇಲ್ಲಿಇತ್ಯರ್ಥ ಪಡಿಸಿಕೊಳ್ಳಬಹುದು ಎಂದರು.
ಸುಪ್ರೀಂ ಕೋರ್ಟ್ ನಲ್ಲಿವಿಚಾರಣೆ ಬಾಕಿ ಇರುವ ಧಾರವಾಡ ಜಿಲ್ಲೆಯ ಪ್ರಕರಣಗಳನ್ನು ಇಲ್ಲಿಇತ್ಯರ್ಥ ಪಡಿಸಿಕೊಳ್ಳಬಹುದು. ಪಕ್ಷಗಾರರು ಖುದ್ದು ಅಥವಾ ವಿಡಿಯೊ ಕಾನ್ಫರೆನ್ಸ್ ಮೂಲಕ ಅದಾಲತ್ ನಲ್ಲಿಭಾಗವಹಿಸಲು ಅವಕಾಶ ಇದೆ ಎಂದರು.
ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವವರಿಗೆ ಪಕ್ಷಗಾರರು ಈಗಾಗಲೇ ಪಾವತಿಸಿರುವ ಕೋರ್ಟ್ ಶುಲ್ಕವನ್ನು ವಾಪಸ್ ನೀಡಲಾಗುವುದು ಎಂದು ತಿಳಿಸಿದರು.

