ವಿಧಾನ ಪರಿಷತ್ ಸದಸ್ಯ ಎನ್ .ರವಿಕುಮಾರ್ ಆರೋಪ
ಇದ್ದೂ ಇಲ್ಲದಂತಿರುವ ಕಾಂಗ್ರೆಸ್ ಸರಕಾರ
ವಿಕ ಸುದ್ದಿಲೋಕ ರಾಯಚೂರು
‘‘ಸದ್ಯದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಇದ್ದೂ ಇಲ್ಲದಂತಿರುವ ಸರಕಾರವಾಗಿದೆ,’’ ಎಂದು ವಿಧಾನ ಪರಿಷತ್ ಸದಸ್ಯ ಎನ್ .ರವಿಕುಮಾರ್ ಆರೋಪಿಸಿದರು.
ನಗರದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಸಿಎಂ ಕುರ್ಚಿಗಾಗಿ ಹೋರಾಟ ನಡೆಯುತ್ತಿರುವುದರಿಂದ ಜನರ ಗೋಳು ಯಾರೂ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುರಹಂಕಾರ ಮೇರೆ ಮೀರಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಖಜಾನೆ ಖಾಲಿ ಆಗಿದೆ. ಒಳಮೀಸಲು ಜಾರಿ ವಿಚಾರವಾಗಿ ಯಾರೊಬ್ಬರೂ ಸಿಎಂ ಅವರನ್ನು ಸನ್ಮಾನಿಸದಿರುವುದು ಅಸಮಾಧಾನ ಉಂಟು ಮಾಡಿರುವುದಕ್ಕೆ ಸಾಕ್ಷಿಯಾಗಿದೆ. ನಿರುದ್ಯೋಗ, ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದ ಸಂದರ್ಭದಲ್ಲಿಕುರ್ಚಿ ಉಳಿಸಿಕೊಳ್ಳುವ ಕಸರತ್ತು ನಡೆಯುತ್ತಿದೆ,’’ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ ಮಾತನಾಡಿ, ‘‘ರಾಜ್ಯದಲ್ಲಿ2.84 ಲಕ್ಷ ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕದಲ್ಲಿ371 (ಜೆ) ಮೀಸಲಿನಡಿ ಖಾಲಿ ಹುದ್ದೆ ಭರ್ತಿ ಮಾಡಲು ಯಾವುದೇ ನಿರ್ಬಂಧ ಇಲ್ಲಎನ್ನುವ ಸರಕಾರ, ಮೂರು ವರ್ಷಗಳಿಂದ ಹುದ್ದೆ ಭರ್ತಿಗೆ ಮುಂದಾಗಿಲ್ಲ. ಈಗಾಗಲೇ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ಸರಕಾರ ಹೇಳಿದ್ದು, ಇದರಿಂದ ಶೇ.20ರಷ್ಟು ಮಾತ್ರ ನೇಮಕಾತಿ ಮಾಡಿಕೊಂಡಂತಾಗುತ್ತದೆ. ಒಟ್ಟಾರೆ, ಈ ಭಾಗದಲ್ಲಿಶೇ.100ರಷ್ಟು ಹುದ್ದೆ ಭರ್ತಿ ಮಾಡುವುದು ಅತ್ಯಗತ್ಯವಿದೆ,’’ ಎಂದು ಹೇಳಿದರು.
ಮಾಜಿ ಸಂಸದ ಬಿ.ವಿ.ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ , ಪ್ರತಾಪಗೌಡ ಪಾಟೀಲ್ , ಮುಖಂಡರಾದ ತ್ರಿವಿಕ್ರಮ ಜೋಷಿ, ಜಂಬಣ್ಣ ನಿಲೋಗಲ…, ಸಿದ್ದನಗೌಡ, ಸಂತೋಷ್ ರಾಜಗುರು ಇತರರಿದ್ದರು.
---
9ರಂದು ಅಭಿಮಾನೋತ್ಸವ
‘‘ಮೇ 9ರಂದು ಚಿತ್ರದುರ್ಗದಲ್ಲಿಮಾಜಿ ಸಿಎಂ ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲಾಗುತ್ತಿದೆ,’’ ಎಂದು ವಿಧಾನಪರಿಷತ್ ಸದಸ್ಯ ಎನ್ .ರವಿಕುಮಾರ್ ಹೇಳಿದರು. ‘‘ಒಂದು ವರ್ಗಕ್ಕೆ ಸೀಮಿತವಾಗಿದ್ದ ಪಕ್ಷದ ಬಗೆಗಿನ ಅಭಿಪ್ರಾಯ ಬದಲಿಸಿದ್ದು ಯಡಿಯೂರಪ್ಪ ಅವರು. ಕ್ಲಾಸ್ ನಿಂದ ಮಾಸ್ ಪಕ್ಷವಾಗಿ ಪರಿವರ್ತಿಸಿದ, ರೈತರು, ಕಾರ್ಮಿಕರ ಪಕ್ಷವನ್ನಾಗಿಸಿದ ಶ್ರೇಯಸ್ಸು ಬಿಎಸ್ ವೈಗೆ ಸಲ್ಲುತ್ತದೆ. ಹಾಗಾಗಿ, ಅವರ ಅಭಿಮಾನೋತ್ಸವ ಆಚರಿಸಲಾಗುತ್ತಿದ್ದು, ಕೇಂದ್ರ ಗೃಹಮಂತ್ರಿ ಅಮಿತ್ ಶಾ ಪಾಲ್ಗೊಳ್ಳುತ್ತಿದ್ದು, ಕೇಂದ್ರದ ನಾನಾ ಸಚಿವರು, ಸ್ವಾಮೀಜಿಗಳು, ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಈ ಸಮಾವೇಶ ಸಿದ್ದರಾಮೋತ್ಸವಕ್ಕೆ ಕೌಂಟರ್ ಅಲ್ಲ,’’ ಎಂದು ಸ್ಪಷ್ಟಪಡಿಸಿದರು.
---
30ಎಂಎಸ್ 01
ಎನ್ .ರವಿಕುಮಾರ್

