ಜಿಲ್ಲಾಆರೋಗ್ಯ ಅಭಿಯಾನ ಸಭೆಯಲ್ಲಿಡಿಸಿ ಸೂಚನೆ
ಮಿಷನ್ ಏಡ್ಸ್ ಅಭಿಯಾನ ಅನುಷ್ಠಾನಗೊಳಿಸಿ
ವಿಕ ಸುದ್ದಿಲೋಕ ರಾಯಚೂರು
‘‘ಮೊಬೈಲ್ ನಲ್ಲಿಎಚ್ ಐವಿ ಸ್ಥಿತಿಗತಿ ಪರಿಶೀಲನೆಗೆ ಒಳಪಡಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿಮಿಷನ್ ಏಡ್ಸ್ ಸುರಕ್ಷಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು,’’ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಬುಧವಾರ ನಡೆದ ಜಿಲ್ಲಾಆರೋಗ್ಯ ಅಭಿಯಾನ ಸಭೆಯಲ್ಲಿಅವರು ಮಾತನಾಡಿದರು.
‘‘ಎಚ್ ಐವಿ ಸೋಂಕನ್ನು ಆರಂಭದಲ್ಲಿಯೇ ಗುರುತಿಸಲು ಸರಳ ವಿಧಾನವಾದ ಕ್ಯೂಆರ್ ಕೋಡ್ ಸ್ಕ್ಯಾ ನ್ ಮಾಡಿ, ವೈಯಕ್ತಿಕ ಸ್ಥಿತಿ ತಿಳಿಯಲು ಜಿಲ್ಲಾದ್ಯಂತ ವ್ಯಾಪಕ ಜಾಗೃತಿ ಮೂಡಿಸಬೇಕು. ಗೌಪ್ಯತೆಯೊಂದಿಗೆ ಸ್ವಯಂ ಪರೀಕ್ಷೆ ಮಾಡಿಕೊಳ್ಳಲು ಸಹಾಯಕವಾದ ಕ್ಯೂಆರ್ ಕೋಡ್ ಸ್ಕ್ಯಾ ನ್ ಮಾಡಿ ಪ್ರಶ್ನೋತ್ತರದಲ್ಲಿಸ್ವಯಂ ಉತ್ತರಗಳಿಂದ, ಸೋಂಕು ಹರಡಬಹುದಾದ ಸಾಧ್ಯತೆಗಳಿದ್ದಲ್ಲಿಕನಿಷ್ಠ ಶೇ.95ರಷ್ಟು ಜನ ತಪಾಸಣೆ ಮಾಡಿಸಿಕೊಳ್ಳಲು, ಖಚಿತಪಟ್ಟ ಸೋಂಕಿತರಲ್ಲಿಶೇ.95 ರಷ್ಟು ಜನರನ್ನು ಎಆರ್ ಟಿ ಕೇಂದ್ರಗಳಿಗೆ ಚಿಕಿತ್ಸೆಗೆ ಬರುವಂತೆ ಮಾಡಲು ಹಾಗೂ ಸೋಂಕಿತರಾಗಿ ಎಆರ್ ಟಿ ಚಿಕಿತ್ಸೆ ಪಡೆಯುವರಲ್ಲಿಶೇ.95 ರಷ್ಟು ಜನರನ್ನು ಸದಾ ನಿಗಾವಣೆ, ಆಪ್ತ ಸಮಾಲೋಚನೆ, ಜಾಗೃತಿ ಮೂಲಕ ಚಿಕಿತ್ಸೆ ಬಿಡದಂತೆ, ವೈರಲ್ ಲೋಡ್ ಹೆಚ್ಚಾಗದಂತೆ ಹಾಗೂ ಹೈರಿಸ್ಕ್ ನಲ್ಲಿರುವ ಜನತೆಗೆ ಮೂಲ ಉದ್ದೇಶ ತಲುಪಿಸಬೇಕು,’’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಿಬಿರ ಆಯೋಜನೆಗೆ ಸೂಚನೆ:
‘‘ರಾಯಚೂರು ಮತ್ತು ಸಿಂಧನೂರಿನಲ್ಲಿರುವ ಬ್ಲಡ್ ಬ್ಯಾಂಕ್ ಗಳಲ್ಲಿಪ್ರತಿ ತಿಂಗಳು ಶಿಬಿರ ಏರ್ಪಡಿಸಿ, ರಕ್ತದ ಕೊರತೆಯಾಗದಂತೆ ನೋಡಬೇಕು. ಸಂಗ್ರಹಣೆಯ ಶೇ.25ರಷ್ಟು ರಿಮ್ಸ… ಬ್ಲಡ್ ಬ್ಯಾಂಕ್ ಗೆ ನೀಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. 100 ದಿನಗಳ ಕ್ಷಯಮುಕ್ತ ಅಭಿಯಾನದಡಿ ಕ್ಷಯರೋಗ ನಿರ್ಮೂಲನೆಗೆ ಅಗತ್ಯ ಕ್ರಮ ವಹಿಸಬೇಕು. 2030ರೊಳಗೆ ಕ್ಷಯರೋಗ ಮುಕ್ತ ಭಾರತದ ಗುರಿ ತಲುಪಲು ನಾನಾ ಇಲಾಖೆಗಳ ಸಹಕಾರ ಪಡೆದು ಯಶಸ್ವಿಗೊಳಿಸಬೇಕು. ಯಾವುದೇ ಪರಿಕರ, ಉಪಕರಣಗಳ ಅಗತ್ಯವಿದ್ದರೆ ನಿಯಮಾನುಸಾರ ಬೇಡಿಕೆ ಸಲ್ಲಿಸಬೇಕು,’’ ಎಂದು ಅಧಿಕಾರಿಗಳಿಗೆ ಹೇಳಿದರು.
ಡಿಎಚ್ ಒ ಡಾ.ಸುರೇಂದ್ರ ಬಾಬು, ಜಿಲ್ಲಾಶಸ್ತ್ರ ಚಿಕಿತ್ಸಕ ಡಾ.ವಿಜಯ ಶಂಕರ, ಡಿಪಿಡಿಒ ಡಾ.ಚಂದ್ರಶೇಖರಯ್ಯ ಸ್ವಾಮಿ, ಆರ್ ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್ ., ಡಿಎಸ್ ಒ ಡಾ.ಗಣೇಶ್ ಕೆ., ಡಿಟಿಒ ಡಾ.ಮಹಮ್ಮದ್ ಶಾಕೀರ್ ಮೊಹಿಯುದ್ದೀನ್ , ಏಡ್ಸ್ ನಿರ್ಮೂಲನೆಗೆ ಕೆಲಸ ಮಾಡುತ್ತಿರುವ ಸಂಘಟನೆಗಳ ಪದಾಧಿಕಾರಿಗಳು, ಡ್ಯಾಪ್ಕೊ ಸಿಬ್ಬಂದಿ ಇದ್ದರು.
---
30ಎಂಎಸ್ 06
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಬುಧವಾರ ನಡೆದ ಜಿಲ್ಲಾಆರೋಗ್ಯ ಅಭಿಯಾನದಲ್ಲಿಮಿಷನ್ ಏಡ್ಸ್ ಸುರಕ್ಷಾ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

