ಚಿತ್ರ: ಲಾಲಬಾಷಾ
ವಾಡಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ | ಕಳ್ಳತನ ಪ್ರಕರಣದಲ್ಲಿಭಾಗಿಯಾಗಿದ್ದ ಆರೋಪಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ವಿಕ ಸುದ್ದಿಲೋಕ ಕಲಬುರಗಿ
ಜಿಲ್ಲೆಯ ವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಕಳೆದ 16 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ (ಜಂಕ್ಷನ್ ) ಪಟ್ಟಣದ ಸೋನಾಬಾಯಿ ಏರಿಯಾ ನಿವಾಸಿ, ಲಾಲಬಾಷ ಸೈಯದ ಹುಸೇನ್ (41) ಬಂಧಿತ ಆರೋಪಿ. ಈತನ ವಿರುದ್ಧ 2008 ರಲ್ಲಿವಾಡಿ ಪೊಲೀಸ್ ಠಾಣೆಯಲ್ಲಿಐಪಿಸಿ ಕಲಂ 457 ಹಾಗೂ 380 ರ ಅಡಿಯಲ್ಲಿಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ದಿನದಿಂದಲೂ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಮೇ 19ರಂದು ವಾಡಿ ಪಟ್ಟಣದಲ್ಲಿಯೇ ಸಂಚರಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ.
ವಾಡಿ ಪಿಎಸ್ ಐಗಳಾದ ತಿರುಮಲೇಶ್ ಹಾಗೂ ರೇಣುಕಾ ಅವರ ನೇತೃತ್ವದಲ್ಲಿಎಎಸ್ ಐ ಮೊಹ್ಮದ್ ಯೂಸೂಫ್ , ಸಿಬ್ಬಂದಿಗಳಾದ ಬಸಲಿಂಗಪ್ಪ, ಸಂಗಮೇಶ್ , ಆರೀಫ್ ಮತ್ತು ರವೀಂದ್ರ ಅವರ ವಿಶೇಷ ತಂಡ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

