ಬೆಂಗಳೂರು ವಂದೇ ಭಾರತ್ , ಶತಾಬ್ಧಿ, ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಬದಲಾವಣೆ, ನಿಲುಗಡೆ ರದ್ದು

Contributed byshiva.rama@timesgroup.com|Vijaya Karnataka

ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ ನಡುವೆ ನಡೆಯಲಿರುವ ಎಂಜಿನಿಯರಿಂಗ್ ಕಾಮಗಾರಿಗಳಿಂದಾಗಿ ಬೆಂಗಳೂರು ಮೂಲಕ ಸಂಚರಿಸುವ ವಂದೇ ಭಾರತ್, ಶತಾಬ್ದಿ ಮತ್ತು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಜೂನ್ 7 ಮತ್ತು 8 ರಂದು ಪ್ರಯಾಣಿಕರು ಮಾರ್ಗ ಬದಲಾವಣೆ, ನಿಲುಗಡೆ ರದ್ದು ಮತ್ತು ವಿಳಂಬವನ್ನು ಎದುರಿಸಬೇಕಾಗುತ್ತದೆ. ಕೆಲವು ರೈಲುಗಳ ನಿಲುಗಡೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ಅವುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

bengaluru train service updates shivaji national express vande bharat trains on route change

ವಿಕ ಸುದ್ದಿಲೋಕ ಬೆಂಗಳೂರು

ನೈಋುತ್ಯ ರೈಲ್ವೆ ವ್ಯಾಪ್ತಿಯ ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ… ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿಬೆಂಗಳೂರು ಮೂಲಕ ಸಂಚಾರ ನಡೆಸುವ ಜನಶತಾಬ್ದಿ ಹಾಗೂ ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿಬದಲಾವಣೆ ಮಾಡಲಾಗಿದೆ.

ಜೂನ್ 7 ಮತ್ತು 8 ರಂದು ಈ ಎರಡು ರೈಲುಗಳ ಪ್ರಯಾಣಿಕರಿಗೆ ಮಾರ್ಗ ಬದಲಾವಣೆ, ನಿಲುಗಡೆ ರದ್ದು, ವಿಳಂಬ ಸಮಸ್ಯೆ ಎದುರಾಗಲಿದೆ. ಜೂನ್ 7 ರಂದು ರಾತ್ರಿ 8:10ಕ್ಕೆ ಕೆಎಸ್ ಆರ್ ಬೆಂಗಳೂರಿನಿಂದ ಹೊರಡಬೇಕಿದ್ದ ಕೆಎಸ್ ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲು (16526) ಬೆಂಗಳೂರು ಕಂಟೋನ್ಮೆಂಟ್ , ಬೈಯಪ್ಪನಹಳ್ಳಿ, ಹೊಸೂರು, ಧರ್ಮಾವರಂ ಮತ್ತು ಸೇಲಂ ಮೂಲಕ ಸಾಗಲಿದೆ. ಇದರ ನಿಲುಗಡೆಯನ್ನು ಕೃಷ್ಣರಾಜಪುರ, ವೈಟ್ ಫೀಲ್ಡ…, ಮಾಲೂರು, ಬಂಗಾರಪೇಟೆ, ಕುಪ್ಪಂ ಮತ್ತು ತಿರುಪತ್ತೂರಿನಲ್ಲಿರದ್ದುಗೊಳಿಸಲಾಗಿದೆ.

ಜೂನ್ 7 ರಂದು ಮಧ್ಯಾಹ್ನ 3:50ಕ್ಕೆ ಚಾಮರಾಜನಗರದಿಂದ ಹೊರಡುವ ಚಾಮರಾಜನಗರ-ತಿರುಪತಿ ಎಕ್ಸ್ ಪ್ರೆಸ್ ರೈಲು (16219) ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ಹಿಂದೂಪುರ, ಧರ್ಮಾವರಂ, ಪಾಕಲ ಮತ್ತು ತಿರುಪತಿ ಮಾರ್ಗಕ್ಕೆ ಬದಲಾಯಿಸಲಾಗಿದೆ. ಈ ರೈಲು ಕೃಷ್ಣರಾಜಪುರ, ವೈಟ್ ಫೀಲ್ಡ…, ಬಂಗಾರಪೇಟೆ, ಕುಪ್ಪಂ, ಜೋಲಾರಪೇಟೆ, ಕಾಟ್ಪಾಡಿ ಮತ್ತು ಚಿತ್ತೂರು ನಿಲ್ದಾಣಗಳಿಗೆ ನಿಲುಗಡೆ ನೀಡದೇ ಸಾಗಲಿದೆ.

ಎರ್ನಾಕುಲಂ ಜಂಕ್ಷನ್ ನಿಂದ ಹೊರಡುವ ಎರ್ನಾಕುಲಂ ಜಂಕ್ಷನ್ -ಕೆಎಸ್ ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು (26652) ಜೂನ್ 7 ರಂದು ಮಧ್ಯಾಹ್ನ 2:20ಕ್ಕೆ ಸೇಲಂ, ಓಮಲೂರು, ಹೊಸೂರು, ಬಿಚ್ಚುಪಲ್ಲಿಮತ್ತು ಬೈಯಪ್ಪನಹಳ್ಳಿ ಮಾರ್ಗವಾಗಿ ಸಂಚರಿಸಲಿದ್ದು, ಕೃಷ್ಣರಾಜಪುರದಲ್ಲಿನಿಲುಗಡೆ ಮಾಡದೆ ಸಂಚರಿಸಲಿದೆ.

ಇನ್ನು, ಕೊಯಮತ್ತೂರು-ನಿಜಾಮುದ್ದೀನ್ ಕೊಂಗು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು (12647) 4:30ಕ್ಕೆ ಹೊರಡಲಿದೆ. ಈ ರೈಲು ಸೇಲಂ, ತಿರುಪತ್ತೂರು, ಜೋಲಾರಪೇಟೆ, ರೇಣಿಗುಂಟ ಮತ್ತು ಧೋನೆ ಮೂಲಕ ಸಾಗುವಂತೆ ಮಾರ್ಗ ಬದಲಾಯಿಸಲಾಗಿದೆ. ಹೀಗಾಗಿ, ಕೃಷ್ಣರಾಜಪುರ, ಯಲಹಂಕ, ಹಿಂದೂಪುರ, ಧರ್ಮಾವರಂ ಮತ್ತು ಅನಂತಪುರ ನಿಲುಗಡೆ ರದ್ದುಪಡಿಸಲಾಗಿದೆ.