ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನ
ಸೃಷ್ಟಿಯ ಅಪಾರ ವಿಸ್ಮಯಗಳ ನಡುವೆ ಪ್ರತಿಯೊಂದು ಜೀವಿಯೂ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಸೂಕ್ಷ್ಮಜೀವಿಗಳಿಂದ ಬೃಹತ್ ಪ್ರಾಣಿಗಳವರೆಗೆ, ಸಣ್ಣ ಹುಲ್ಲಿನ ಕಡ್ಡಿಯಿಂದ ದೈತ್ಯ ವೃಕ್ಷಗಳವರೆಗೆ ಇರುವ ಈ ವೈವಿಧ್ಯತೆಯನ್ನೇ ನಾವು ‘ಜೀವವೈವಿಧ್ಯತೆ’ ಎನ್ನುತ್ತೇವೆ. ಈ ಜೈವಿಕ ಸಂಪತ್ತಿನ ಮಹತ್ವವನ್ನು ಜಗತ್ತಿಗೆ ಸಾರಲು ಮತ್ತು ಅದರ ಸಂರಕ್ಷಣೆಯ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 22ರಂದು ವಿಶ್ವದಾದ್ಯಂತ ‘ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನ‘ವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು ಅಧಿಕೃತವಾಗಿ ಘೋಷಿಸಿದ ಈ ದಿನವು, ಭೂಮಿಯ ಮೇಲಿನ ಜೀವಜಾಲದ ಸಮತೋಲನವನ್ನು ಕಾಯ್ದುಕೊಳ್ಳುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ.
ಶುರುವಾಗಿದ್ದು ಯಾವಾಗ?: ವಿಶ್ವ ಜೀವ ವೈವಿಧ್ಯ ದಿನವನ್ನು ಮೊದಲ ಬಾರಿಗೆ 1993ರಲ್ಲಿಆರಂಭಿಸಲಾಯಿತು. ಆಗ ಜೀವ ವೈವಿಧ್ಯತೆಯ ಪ್ರಾಮುಖ್ಯತೆ ಬಗ್ಗೆ ಜನರಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸಲು ಡಿಸೆಂಬರ್ 29ರ ದಿನವನ್ನು ಮೀಸಲಿಡಲಾಯಿತು. ಆದರೆ ಡಿಸೆಂಬರ್ ನಲ್ಲಿಅತಿ ಹೆಚ್ಚು ಚಳಿಗಾಲದ ರಜಾ ದಿನವಿರುವುದರಿಂದ ಅರ್ಥಪೂರ್ಣವಾಗಿ ಆಚರಿಸಲು ಕಷ್ಟವಾಗುತ್ತಿತ್ತು. ಹೀಗಾಗಿ 2000ನೇ ವರ್ಷದಲ್ಲಿಈ ದಿನದಲ್ಲಿಕೊಂಚಬದಲಾವಣೆ ಮಾಡಿ ಮೇ 22ರಂದು ಆಚರಿಸಲು ನಿರ್ಧರಿಸಲಾಯಿತು. 2006ರಲ್ಲಿನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 61ನೇ ಅಧಿಧಿ ವೇಶನದಲ್ಲಿ2010ರಿಂದ ವಿಶ್ವ ಜೀವವೈವಿಧ್ಯ ದಿನವನ್ನು ಆಚರಿಸಲು ಆರಂಭಿಸಲಾಯಿñು.
ಇಂದಿನ ಆಧುನಿಕ ಜೀವನಶೈಲಿ, ನಗರೀಕರಣ, ಅರಣ್ಯ ನಾಶ ಮತ್ತು ಹೆಚ್ಚುತ್ತಿರುವ ಮಾಲಿನ್ಯದ ಕಾರಣದಿಂದಾಗಿ ಲಕ್ಷಾಂತರ ಜೀವಪ್ರಭೇದಗಳು ಅಳಿವಿನ ಅಂಚಿಗೆ ಬಂದು ನಿಂತಿವೆ. ಜೀವ ವೈವಿಧ್ಯತೆಯು ಕೇವಲ ಪ್ರಾಣಿ-ಪಕ್ಷಿಗಳಿಗೆ ಸೀಮಿತವಾಗಿರದೆ, ನಮಗೆ ಸಿಗುವ ಶುದ್ಧ ಗಾಳಿ, ಕುಡಿಯುವ ನೀರು, ಆಹಾರ ಹಾಗೂ ಔಷಧೀಯ ಸಸ್ಯಗಳಿಗೂ ಮೂಲಾಧಾರವಾಗಿದೆ. ಪ್ರಕೃತಿಯ ಈ ಜಾಲದಲ್ಲಿಒಂದು ಕೊಂಡಿ ಕಳಚಿದರೂ ಅದರ ನೇರ ಪರಿಣಾಮ ಇಡೀ ಮಾನವಕುಲದ ಮೇಲಾಗುತ್ತದೆ ಎಂಬುದನ್ನು ನೆನಪಿಸಲು ಈ ದಿನದ ಆಚರಣೆ ಅತ್ಯಂತ ಪ್ರಸ್ತುತವಾಗಿದೆ.
ಜೀವವೈವಿಧ್ಯದ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಭೂಮಿಯ ಮೇಲಿನ ಶೇಕಡಾ 80ರಷ್ಟು ಮಾನವರ ಆಹಾರದ ಅಗತ್ಯವನ್ನು ಸಸ್ಯಗಳೇ ಪೂರೈಸುತ್ತವೆ ಮತ್ತು ಗ್ರಾಮೀಣ ಭಾಗದ ಬಹುತೇಕ ಜನಸಂಖ್ಯೆಯು ಪ್ರಾಥಮಿಕ ಆರೋಗ್ಯಕ್ಕಾಗಿ ನೈಸರ್ಗಿಕ ಔಷಧೀಯ ಸಸ್ಯಗಳನ್ನೇ ಅವಲಂಬಿಸಿದೆ. ಆದರೆ, ಮನುಷ್ಯರ ದುರಾಸೆಯ ಕಾರಣದಿಂದಾಗಿ ನಿಸರ್ಗದ ಸಮತೋಲನ ಏರುಪೇರಾಗುತ್ತಿದ್ದು, ಹವಾಮಾನ ವೈಪರೀತ್ಯ ಹಾಗೂ ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ಇದು ಕಾರಣವಾಗುತ್ತಿದೆ. ಕಾಡುಗಳನ್ನು ಉಳಿಸುವುದು, ವನ್ಯಜೀವಿಗಳ ಆವಾಸಸ್ಥಾನಗಳನ್ನು ರಕ್ಷಿಸುವುದು ಕೇವಲ ಸರಕಾರದ ಕೆಲಸವಲ್ಲ; ಅದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ.
ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವುದು, ಜಲಮೂಲಗಳನ್ನು ಕಲುಷಿತಗೊಳಿಸದಿರುವುದು ಮತ್ತು ಪರಿಸರಸ್ನೇಹಿ ಉತ್ಪನ್ನಗಳಿಗೆ ಆದ್ಯತೆ ನೀಡುವುದು ನಮ್ಮ ದಿನನಿತ್ಯದ ಬದುಕಿನ ಭಾಗವಾಗಬೇಕು. ಮುಂದಿನ ಪೀಳಿಗೆಗೆ ಸುಂದರವಾದ ಮತ್ತು ಜೀವಂತಿಕೆಯಿಂದ ಕೂಡಿದ ಭೂಮಿಯನ್ನು ಹಸ್ತಾಂತರಿಸಬೇಕಾದರೆ, ಇಂದಿನಿಂದಲೇ ಸ್ಥಳೀಯ ಮಟ್ಟದಲ್ಲಿಪ್ರಕೃತಿ ಸಂರಕ್ಷಣೆಯ ಕೆಲಸಗಳು ಆರಂಭವಾಗಬೇಕಿದೆ. ಪರಿಸರ ಉಳಿದರೆ ಮಾತ್ರ ಮಾನವಕುಲದ ಉಳಿವು ಸಾಧ್ಯ ಎಂಬ ಸತ್ಯವನ್ನು ಅರಿತು, ಈ ಜೈವಿಕ ವೈವಿಧ್ಯತೆ ದಿನದಂದು ಪ್ರಕೃತಿಯನ್ನು ಗೌರವಿಸುವ ಮತ್ತು ರಕ್ಷಿಸುವ ದೃಢ ಸಂಕಲ್ಪವನ್ನು ನಾವೆಲ್ಲರೂ ತೊಡಬೇಕಾಗಿದೆ.
ಬಾಕ್ಸ್
2026ರ ಥೀಮ್
ಅ್ಚಠಿಜ್ಞಿಜ ್ಝಟ್ಚa್ಝ್ಝy ್ಛಟ್ಟ ಜ್ಝಟಚಿa್ಝ ಜಿಞpa್ಚಠಿ

