** ಕೃತಕ ಕಾಲು ವಿತರಣೆ ಫೋಟೋ ಕ್ಯಾಪ್ಶನ್ (ಮಂಗಳೂರು, ಪುತ್ತೂರು, ಉಡುಪಿ ಎಡಿಷನ್ ಗೆ)

Contributed bymahesha.gopalakrishna@timesgroup.com|Vijaya Karnataka

ಮಂಗಳೂರಿನಲ್ಲಿ ಕೃತಕ ಕಾಲು ವಿತರಣೆ ನಡೆಯಿತು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ, ಈಶ್ವರಾಂಬಾ ಟ್ರಸ್ಟ್‌ ಮತ್ತು ವೆನ್ಸಾಕ್‌ ಆಸ್ಪತ್ರೆಯ ಲಯನ್ಸ್‌ ಲಿಂಬ್‌ ಸೆಂಟರ್‌ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪುತ್ತೂರು, ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯ ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ನೀಡಲಾಯಿತು. ಒಟ್ಟು 113 ಮಂದಿಗೆ ಇದುವರೆಗೆ ಕೃತಕ ಕಾಲುಗಳನ್ನು ವಿತರಿಸಲಾಗಿದೆ. ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

distributing artificial limbs in mangalore district support for 113 individuals

ಮಂಗಳೂರಿನ ಮಣ್ಣಗುಡ್ಡ ಗಾಂಧಿನಗರ 3ನೇ ಕ್ರಾಸ್ ನಲ್ಲಿರುವ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ, ಈಶ್ವರಾಂಬಾ ಟ್ರಸ್ಟ್ ಹಾಗೂ ವೆನ್ಸಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ವತಿಯಿಂದ ಅರ್ಹ ಫಲಾನುಭವಿಗಳಾದ ಪುತ್ತೂರಿನ ಅನಿತಾ, ಬೆಳ್ತಂಗಡಿಯ ಸತೀಶ್ ಹಾಗೂ ಉಡುಪಿ ಜಿಲ್ಲೆಯ ಉಚ್ಚಿಲದ ಸುಲೈಮಾನ್ ಅವರಿಗೆ ಆರ್ಟಿಫಿಶಿಯಲ್ ಲಿಂಬ್ ( ಕೃತಕ ಕಾಲು )ಗಳನ್ನು ಬುಧವಾರ ವೆನ್ಸಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ನಲ್ಲಿವಿತರಿಸಲಾಯಿತು. ಇದರೊಂದಿಗೆ ಒಟ್ಟು 113 ಫಲಾನುಭವಿಗಳಿಗೆ ಆರ್ಟಿಫಿಶಿಯಲ್ ಲಿಂಬ್ ವಿತರಿಸಲಾಯಿತು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ರಾಜ್ಯಾಧ್ಯಕ್ಷ ಪಿ.ಪದ್ಮನಾಭ ಪೈ, ಮಹಿಳಾ ವಿಭಾಗದ ರಾಜ್ಯ ಸೇವಾ ಸಂಯೋಜಕಿ ಪ್ರಿಯಾ ಪಿ. ಪೈ, ಚಂದ್ರಶೇಖರ ನಾಯಕ್ , ನಿರಂಜನ್ ಹೆಬ್ಬಾರ್ , ಮಹೇಶ್ ಪಟ್ಟಾಜೆ, ಡಾ.ಅಮರನಾಥ್ , ವೆನ್ಸಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ನ ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಫೊಟೋ: 20ಎಂ-ಲಿಂಬ್