ಚಿತ್ರ:25ಬಿಕೆ2
ಬಸವಕಲ್ಯಾಣದ ಎಸ್ .ಎಸ್ .ಕೆ. ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿಬಿಸಿಎ ಕೋರ್ಸ್ ನ 6ನೇ ಸೆಮ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
* ಹಿರಿಯ ಸಿವಿಲ್ ಹಿರಿಯ ನ್ಯಾಯಾಧೀಶ ಮಹೇಶ ನಾಗರಾಳೆ ಅಭಿಮತ
ತಂತ್ರಜ್ಞಾನ ಆಧುನಿಕ ಶಿಕ್ಷಣದ ಅವಿಭಾಜ್ಯ ಅಂಗ
ವಿಕ ಸುದ್ದಿಲೋಕ ಬಸವಕಲ್ಯಾಣ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಕೃತಕ ಬುದ್ಧಿಮತ್ತೆ (ಎಐ) ಮತ್ತು ತಂತ್ರಜ್ಞಾನ ಆಧುನಿಕ ಶಿಕ್ಷಣದ ಅವಿಭಾಜ್ಯ ಅಂಗಗಳಾಗಿವೆ ಎಂದು ವಿಜಯಪುರ ಹಿರಿಯ ಸಿವಿಲ್ ಹಿರಿಯ ನ್ಯಾಯಾಧೀಶ ಮಹೇಶ ನಾಗರಾಳೆ ಹೇಳಿದರು.
ನಗರದ ಎಸ್ .ಎಸ್ .ಕೆ. ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿಬಿಸಿಎ ಕೋರ್ಸ್ ನ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 2ನೇ ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿಕೇವಲ ಪುಸ್ತಕದ ಜ್ಞಾನ ಸಾಕಾಗುವುದಿಲ್ಲ. ಎಐ ತಂತ್ರಜ್ಞಾನವು ವಿದ್ಯಾರ್ಥಿಗಳಿಗೆ ವೈಯಕ್ತಿಕ ಗೊಳಿಸಿದ ಕಲಿಕೆಯನ್ನು ನೀಡುತ್ತದೆ. ಡಿಜಿಟಲ್ ಕ್ಲಾಸ್ ರೂಮ್ ಗಳು, ಆನ್ ಲೈನ್ ಕೋರ್ಸ್ ಗಳು ಮತ್ತು ಶೈಕ್ಷಣಿಕ ಆ್ಯಪ್ ಗಳು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಅತ್ಯುತ್ತಮ ಶಿಕ್ಷಣ ವಿದ್ಯಾರ್ಥಿಗಳ ಕೈಗೆಟುಕುವಂತೆ ಮಾಡಿವೆ. ತಂತ್ರಜ್ಞಾನ ಆಧಾರಿತ ಶಿಕ್ಷಣ ಜತೆಗೆ ಕೃತಕ ಬುದ್ಧಿಮತ್ತೆ ಹೆಚ್ಚಿನ ಮೌಲ್ಯ ಹೊಂದಿದೆ ಎಂದು ಹೇಳಿದರು.
ಭೌತಶಾಸ್ತ್ರದ ವಿಭಾಗದ ನಿವೃತ್ತ ಪ್ರಾಧ್ಯಾಪಕ ಆರ್ .ಡಿ.ಬಾಲಿಕೀಲೆ ಮಾತನಾಡಿ, ಕೇವಲ ಪದವಿ ಮುಗಿದ ಮೇಲೆ ತನಗೆ ಉದ್ಯೋಗ ಲಭಿಸಲು ಕೌಶಲ್ಯ ಇದ್ದಾಗ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿಬಹಳಷ್ಟು ಸ್ಪರ್ಧೆ ಇರುವುದರಿಂದ ವಿದ್ಯಾರ್ಥಿಗಳು ಅತ್ಯುತ್ತಮ ಕೌಶಲ್ಯ ಬೆಳೆಸಿಕೊಂಡು ಸಮಾಜದಲ್ಲಿಗೌರವಯುತವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಬಿಸಿಎ ಮುಖ್ಯಸ್ಥ ಶಶಿಧರ್ ಪಾಟೀಲ್ , ಸುರೇಶ್ ಎಚ್ .ಆರ್ ., ವಿಠೋಬಾ ಡೊಣ್ಣೆಗೌಡರ, ಮಹಾದೇವ ದೇಗಾಂವ, ಡಾ.ಮಲ್ಲಿಕಾರ್ಜುನ, ದೀಪಕ್ ಕಾಡಾದಿ, ಜ್ಯೋತಿ ಎಂ., ಸಾಕ್ಷಿ ಬಾಲಕಿಲೆ, ವಿವೇಕ್ , ಇಂದ್ರಜಿತ್ ರೆಡ್ಡಿ, ಶಿವಶಂಕರ್ , ಪಾರ್ವತಿ ಸೇರಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭಾಗ್ಯಶ್ರೀ ಸ್ವಾಗತಿಸಿದರು. ಸೋನಾಲಿ, ಪ್ರೀತಿ ನಿರೂಪಿಸಿದರು. ಋುತಿಕಾ ವಂದಿಸಿದರು.

