ಎಗ್ ರೈಸ್ ಅಂಗಡಿ ಮೇಲೆ ಪೊಲೀಸ್ ದಾಳಿ

Contributed byshreekanta.akki@timesofindia.com|Vijaya Karnataka

ಕೊಪ್ಪಳ ನಗರದ ಜೆಪಿ ಮಾರ್ಕೆಟ್‌ ಬಳಿ ಎಗ್‌ ರೈಸ್‌ ಬಂಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು. ಈ ಹಿನ್ನೆಲೆಯಲ್ಲಿ ಭಾನುವಾರ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಮದ್ಯದ ಟೆಟ್ರಾ ಪ್ಯಾಕೇಟ್‌ಗಳು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

police raid on egg rice shop for suspected illegal liquor sale

ಎಗ್ ರೈಸ್ ಅಂಗಡಿ ಮೇಲೆ ಪೊಲೀಸ್ ದಾಳಿ

ವಿಕ ಸುದ್ದಿಲೋಕ ಕೊಪ್ಪಳ

ನಗರದ ಸಲಾರ್ ಜಂಗ್ ರಸ್ತೆಯ ಜೆಪಿ ಮಾರ್ಕೆಟ್ ಸಮೀಪದ ಎಗ್ ರೈಸ್ ಬಂಡಿಯಲ್ಲಿಮದ್ಯ ಮಾರಾಟ ಮಾಡುತ್ತಿರುವ ಆರೋಪ ಆಧರಿಸಿ, ಭಾನುವಾರ ಪೊಲೀಸರು ದಾಳಿ ನಡೆಸಿದರು.

ಬಸವೇಶ್ವರ ನಗರ ನಿವಾಸಿ ಕೃಷ್ಣ ಕೂಳಿಹಾಳ ಈ ಅಂಗಡಿ ಮಾಲೀಕ. ಮದ್ಯದ ಟೆಟ್ರಾ ಪ್ಯಾಕೇಟ್ ಗಳು ಹಾಗೂ ನಗದು ಸೇರಿ ಒಟ್ಟು 8,290 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.