ಗಾರ್ಡನ್ ಕಾಲಂ

Contributed byshubha.hegde@timesgroup.com|Vijaya Karnataka

ಮನೆಯಲ್ಲಿ ಸುಲಭವಾಗಿ ಬೆಳೆಯಬಹುದಾದ ಸೊಪ್ಪು ತರಕಾರಿಗಳ ಬಗ್ಗೆ ಈ ಲೇಖನ ತಿಳಿಸುತ್ತದೆ. ಪಾಲಕ್, ಮೆಂತ್ಯ, ದಂಟು, ಪುದೀನ ಮುಂತಾದ ಸೊಪ್ಪುಗಳನ್ನು ಸುಲಭವಾಗಿ ಬೆಳೆಯಬಹುದು. ಮೂಲಂಗಿ, ಟೊಮೆಟೊ, ಬದನೆಕಾಯಿ, ಮೆಣಸಿನಕಾಯಿ, ಬೆಂಡೆಕಾಯಿ ಕೂಡ ಸುಲಭವಾಗಿ ಬೆಳೆಯುವ ತರಕಾರಿಗಳಾಗಿವೆ. ಹೊಸದಾಗಿ ಗಾರ್ಡನಿಂಗ್ ಮಾಡುವವರು ಇವುಗಳಿಂದ ಆರಂಭಿಸಬಹುದು. ಮೊದಲು ಕೆಲವು ಸೊಪ್ಪು ತರಕಾರಿಗಳನ್ನು ಬೆಳೆಸಿ ಯಶಸ್ಸು ಪಡೆದ ನಂತರ ಇತರವುಗಳನ್ನು ಪ್ರಯತ್ನಿಸುವುದು ಉತ್ತಮ.

easy ways to grow garden vegetables at home and win hearts

ಸುಲಭದಲ್ಲಿಬೆಳೆಯುವ ಸೊಪ್ಪು ತರಕಾರಿಗಳು

ಬಹುತೇಕ ಮನೆಯಲ್ಲಿಸಾಮಾನ್ಯವಾಗಿ ಬಳಸುವ ಹಾಗೂ ತುಂಬಾ ಸುಲಭವಾಗಿ ಬೆಳೆಯುವ ಸಸ್ಯ ಪಾಲಕ್ ಸೊಪ್ಪು. ಹೊಸಬರು ಇದರಿಂದಲೇ ಶುರು ಮಾಡಬಹುದು. ಇದನ್ನು ಮೊಳಕೆ ಬರಿಸುವುದು ಕೂಡ ಸುಲಭ. ಬೀಜ ಮೊಳಕೆ ಬರಲು ನಾವು ಬಳಸುವ ಮಾಧ್ಯಮದ pಏ ಸರಿಯಾಗಿರಬೇಕು. ಅದರರ್ಥ ಮಾಧ್ಯಮ/ ಮಣ್ಣು ತುಂಬಾ ಕ್ಷಾರೀಯ ಅಥವಾ ಆಮ್ಲೀಯ ಇದ್ದರೆ ಬೀಜಗಳು ಸರಿಯಾಗಿ ಮೊಳಕೆ ಬರುವುದಿಲ್ಲ. ಅಂತಹ ಒಂದು ಪರೀಕ್ಷೆ ಮಾಡಲು ಕೂಡ ಪಾಲಕ್ ಸೊಪ್ಪಿನ ಬೀಜಗಳನ್ನು ಬಿತ್ತಿ ನೋಡಬಹುದು.

ಇನ್ನೊಂದು ಸುಲಭದ ಸೊಪ್ಪು ಮೆಂತ್ಯ. ಮನೆಯಲ್ಲಿಯೇ ಲಭ್ಯವಿರುವ ಬೀಜಗಳನ್ನು ಬಳಸಿ ಇದನ್ನು ಬೆಳೆಸಬಹುದು. ಇದು ಎರಡೇ ದಿನಗಳಲ್ಲಿಮೊಳಕೆ ಬರುತ್ತದೆ ಹಾಗೂ ಹೆಚ್ಚು ಆರೈಕೆ ಇಲ್ಲದೆ ಬೆಳೆಯುತ್ತದೆ. ಇವೆರಡರ ಜೊತೆಗೆ ಇನ್ನಿತರ ಸುಲಭದ ಸೊಪ್ಪುಗಳು ಎಂದರೆ ದಂಟು, ಪುದೀನ. ಕೊತ್ತಂಬರಿ ಕೂಡ ದಿನಬಳಕೆಯ ಸೊಪ್ಪಾದರೂ ಹೊಸಬರಿಗೆ ಇದನ್ನು ಬೆಳೆಸುವುದು ಸ್ವಲ್ಪ ಕಷ್ಟ. ಮೊಳಕೆ ಬರಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹಾಗೂ ಇದನ್ನು ಮೊಳಕೆ ಬರಿಸುವುದು ಕೂಡ ಅಷ್ಟು ಸುಲಭ ಅಲ್ಲ.

ಸೊಪ್ಪುಗಳ ಜೊತೆಗೆ ಸುಲಭವಾಗಿ ಬೆಳೆಯುವ ಇತರ ಕೆಲವು ತರಕಾರಿಗಳು ಮೂಲಂಗಿ, ಟೊಮೆಟೊ, ಬದನೆಕಾಯಿ, ಮೆಣಸಿನಕಾಯಿ ಹಾಗೂ ಬೆಂಡೆಕಾಯಿ. ಇವೆಲ್ಲಸೊಪ್ಪು ತರಕಾರಿಗಳ ಬೀಜಗಳು ಕೂಡ ಸುಲಭವಾಗಿ ಸಿಗುತ್ತವೆ. ಪಟ್ಟಿ ಇನ್ನೂ ತುಂಬಾ ದೊಡ್ಡದಿದ್ದರೂ ಹೊಸಬರು ಇವುಗಳಿಂದ ಆರಂಭಿಸಬಹುದು. ಹಾಗಂತ ಎಲ್ಲವನ್ನೂ ಪ್ರಯತ್ನಿಸುವ ಬದಲು ಎರಡು ಅಥವಾ ಮೂರು ಸೊಪ್ಪು ತರಕಾರಿಗಳನ್ನು ಮಾತ್ರ ಬೆಳೆಸಿ ಯಶಸ್ಸು ಸಿಕ್ಕ ನಂತರ ಬೇರೆಯವುಗಳನ್ನು ಪ್ರಯತ್ನಿಸುವುದು ಒಳ್ಳೆಯದು.