ಬಕ್ರೀದ್ ನಿಮಿತ್ತ ಹಲವು ಕಡೆ ಚೆಕ್ ಪೋಸ್ಟ್ ನಿರ್ಮಾಣ | ವಾಹನ ತಪಾಸಣೆ ಜತೆಗೆ ಸಂಚಾರ ಜಾಗೃತಿ
ಸಂಚಾರ ನಿಯಮ: ಸಿವಿಲ್ ಪೊಲೀಸರಿಂದ ದಂಡ ವಸೂಲಿ
ವಿಕ ಸುದ್ದಿಲೋಕ ಕಲಬುರಗಿ
ಬಕ್ರೀದ್ ಹಿನ್ನೆಲೆಯಲ್ಲಿನಗರ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿಪಶು ಸಂಗೋಪನಾ ಇಲಾಖೆ, ಮಹಾನಗರ ಪಾಲಿಕೆ ಮತ್ತು ನಗರ ಪೊಲೀಸರಿಂದ ಚೆಕ್ ಪೋಸ್ಟ್ ಗಳನ್ನು ಅಳವಡಿಸಿ, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸಂಚಾರ ನಿಯಮ ಪಾಲಿಸದ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯ ಸಿವಿಲ್ ಪೊಲೀಸರು ಆರಂಭಿಸಿದ್ದಾರೆ.
ನಗರದಿಂದ ಹೊರ ಹೋಗುವ ಎಲ್ಲದ್ವಿಚಕ್ರ, ತ್ರಿಚಕ್ರ ಸೇರಿ ಎಲ್ಲರೀತಿಯ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಇದರ ಜತೆಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಸಂಚಾರ ನಿಯಮ ಪಾಲನೆ ಮಾಡದಿರುವುದು ಕಂಡು ಬಂದರೆ, ದಂಡ ವಿಧಿಸುವ ಕೆಲಸ ಆರಂಭಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸಿ, ದಂಡ ವಿಧಿಸುತ್ತಿದ್ದರು. ಆದರೀಗ ಸಿವಿಲ್ ಪೊಲೀಸರು ವಾಹನಗಳ ತಪಾಸಣೆ ಮಾಡಿ, ರಸೀದಿ ಸಹಿತ ದಂಡ ವಸೂಲಿ ಮಾಡುತ್ತಿದ್ದಾರೆ. ಇನ್ನು ಹಲವು ಕಡೆ ಜನರಿಂದ ಪ್ರತಿರೋಧ ಕೂಡ ವ್ಯಕ್ತವಾಗುತ್ತಿದೆ.
=====
ಮೊಬೈಲ್ ಹ್ಯಾಕ್ ಮಾಡಿ 2.58 ಲಕ್ಷ ವಂಚನೆ
ಕಲಬುರಗಿ: ಮೊಬೈಲ್ ಗೆ ಬಂದ ಎಪಿಕೆ ಆ್ಯಪ್ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರಿಂದ ಮೊಬೈಲ್ ಹ್ಯಾಕ್ ಮಾಡಿ, 2.58 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.
ಮಹೇಂದ್ರ ಫೈನಾನ್ಸ್ ಕಂಪನಿಯ ಅಕೌಂಟೇಂಟ್ , ದುಬೈ ಕಾಲನಿ ನಿವಾಸಿ ರಾಜು ದೈಫುಲೆ ವಂಚನೆಗೆ ಒಳಗಾದವರು. ಮೇ 13ರಂದು ಮೊಬೈಲ್ ಗೆ ಆರ್ ಟಿಒ ಇ-ಚಲನ್ ಆ್ಯಪ್ ಲಿಂಕ್ ಸಂದೇಶ ಬಂದಿದ್ದು, ಅದರ ಮೇಲೆ ಕ್ಲಿಕ್ ಮಾಡಿದ್ದು, ತಕ್ಷಣ ಮೊಬೈಲ್ ಹ್ಯಾಕ್ ಆಗಿ, ವಾಟ್ಸ್ ಪ್ ಸಂಖ್ಯೆಯೂ ಹ್ಯಾಕ್ ಆಗಿದೆ. ಸುಮಾರು ಒಂದು ಗಂಟೆ ಮೊಬೈಲ್ ಬಳಸದಂತೆ ಹ್ಯಾಕ್ ಆಗಿದ್ದು, ರಾಜು ಅವರ ಕ್ರೆಡಿಟ್ ಕಾರ್ಡ್ ನಿಂದ ಹಂತ ಹಂತವಾಗಿ 2.58 ಲಕ್ಷ ರೂ. ಕಡಿತವಾಗಿದೆ. ಸಂದೇಶ ಪರಿಶೀಲಿಸಿದಾಗ ಬಿಹಾರದ ರಾಜೇಶ ಮಿಶ್ರಾ ಸಿಂಗ್ ಎಂಬಾತ ಮೂರು ಮೊಬೈಲ್ ಗಳನ್ನು ಖರೀದಿಸಿ, ತನ್ನ ವಿಳಾಸಕ್ಕೆ ತರಿಸಿಕೊಂಡಿದ್ದಾನೆ ಎಂಬುದು ತಿಳಿದಿದೆ. ಈ ಕುರಿತು ಸೆನ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
====
ಎಂಟು ಗೋವುಗಳ ರಕ್ಷಣೆ
ಕಲಬುರಗಿ: ಅಕ್ರಮವಾಗಿ ಸಾಗಿಸುತ್ತಿದ್ದ ಎಂಟು ಗೋವುಗಳನ್ನು ಸಬ್ ಅರ್ಬನ್ ಪೊಲೀಸ್ ಠಾಣೆ ಪೊಲೀಸರು ರಕ್ಷಿಸಿದ್ದಾರೆ.
ಆಳಂದ ಚೆಕ್ ಪೋಸ್ಟ್ ಹತ್ತಿರ ಅಕ್ರಮವಾಗಿ ಬುಲೆರೋ ಪಿಕ್ ಪ್ ವಾಹನದಲ್ಲಿಅಕ್ರಮವಾಗಿ ಗೋವುಗಳನ್ನು ಇಟ್ಟಿರುವ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿದ ಸಬ್ ಅರ್ಬನ್ ಪಿಎಸ್ ಐ ಶಶಿಕಲಾ ಅವರ ತಂಡ ಪರಿಶೀಲಿಸಿದ್ದಾರೆ. ಚಾಲಕ ರಾಣೇಶ್ವರ ಪೀರ್ ದರ್ಗಾದ ಮಹ್ಮದ್ ಅಮೇರ್ ಗಫೂರ್ ಗೆ ವಿಚಾರಣೆ ನಡೆಸಿದಾಗ ದಾಖಲೆ ನೀಡದೆ ಓಡಿ ಹೋಗಿದ್ದಾನೆ. ನಂತರ ವಾಹನ ಸಮೇತ ಎರಡು ಕೆಂಪು ಕರು, ಎರಡು ಜೆರ್ಸಿ ಕರು, ನಾಲ್ಕು ಬಿಳಿ ಬಣ್ಣದ ಕರುಗಳನ್ನು ರಕ್ಷಿಸಿ, ಸ್ವಾಮಿ ಸಮರ್ಥ ಗೋಶಾಲೆಯಲ್ಲಿಬಿಡಲಾಗಿದೆ. ಈ ಕುರಿತು ಸಬ್ ಸರ್ಬನ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

