ಡ್ರæ್ರೖವವ್ ಲಲೀಡಡ್

Contributed byvidyarashmi.bhat@timesgroup.com|Vijaya Karnataka

2027 ರಿಂದ ಬಿಎಸ್ 7 ನಿಯಮ ಜಾರಿಯಾಗಲಿದೆ. ಇದು ವಾಹನಗಳ ಬಿಡಿಭಾಗಗಳ ವಿನ್ಯಾಸ ಮತ್ತು ಮಾರಾಟ ಬೆಲೆಯ ಮೇಲೆ ಪರಿಣಾಮ ಬೀರಲಿದೆ. ಡೀಸೆಲ್ ವಾಹನಗಳ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳುವುದಿಲ್ಲ. ಎಸ್‍ಯುವಿಗಳಲ್ಲಿ ಡೀಸೆಲ್ ಎಂಜಿನ್ ಗಳು ಮುಂದುವರೆಯಲಿವೆ. ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಬಳಕೆ ಹೆಚ್ಚಾಗಲಿದೆ. ಇದು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.

impact of bs 7 regulation on future of diesel vehicles

ಬಿಎಸ್ 7ನಿಂದ ಡೀಸೆಲ್ ವಾಹನಗಳ ಅಂತ್ಯ?

----

ವಾಹನೋದ್ಯಮದಲ್ಲಿಮತ್ತೊಂದು ಸ್ಥಿತ್ಯಂತರ ಸನಿಹವಾಗಿದೆ. 2027ರಲ್ಲಿಜಾರಿಯಾಗಲಿರುವ ಬಿಎಸ್ 7 ನಿಯಮದಿಂದಾಗಿ ವಾಹನದ ಬಿಡಿ ಭಾಗಗಳ ವಿನ್ಯಾಸದಿಂದ ತೊಡಗಿ ಹೊಸ ವಾಹನಗಳ ಮಾರಾಟ ಬೆಲೆಯವರೆಗೆ ಪರಿಣಾಮವಾಗಲಿದೆ.

--

ಸುಶಾಂತ್ ಬನಾರಿ

--

ವಾಹನಗಳಿಂದಾಗುವ ಮಾಲಿನ್ಯ ನಿಯಂತ್ರಣಕ್ಕಾಗಿ 2000ನೇ ಇಸವಿಯಲ್ಲಿಭಾರತ್ ಸ್ಟೇಜ್ (ಬಿಎಸ್ ) ನಿಯಮಗಳನ್ನು ಮೊದಲ ಹಂತದಲ್ಲಿಜಾರಿಗೆ ತರಲಾಯಿತು. ಹಂತ ಹಂತವಾಗಿ ಜಾರಿಯಾದ ಬಿಎಸ್ 6 ನಿಯಮ ಪ್ರಸ್ತುತ ಚಾಲ್ತಿಯಲ್ಲಿದ್ದು, 2027ರಲ್ಲಿಬಿಎಸ್ 7 ನಿಯಮಾವಳಿಗಳು ಜಾರಿಯಾಗಲಿದ್ದು ವಾಹನೋದ್ಯಮದಲ್ಲಿಮತ್ತೊಂದು ಸ್ಥಿತ್ಯಂತರ ಸನಿಹವಾಗಿದೆ.

ವಾಹನಗಳಿಂದ ಹೊರಸೂಸುವ ಇಂಗಾಲದ ಡೈಆಕ್ಸೆತ್ರೖಡ್ , ಸಾರಜನಕ ಡೈಆಕ್ಸೆತ್ರೖಡ್ ಹಾಗೂ ಮಸಿ (ಪಾರ್ಟಿಕ್ಯುಲೇಟ್ ಮ್ಯಾಟರ್ ) ಪ್ರಮಾಣದಲ್ಲಿಮತ್ತಷ್ಟು ಇಳಿಕೆಯಾಗಬೇಕು. ಜತೆಗೆ ಟೈರ್ ಗಳ ಸವೆಯುವಿಕೆಯಿಂದ ಉಂಟಾಗುವ ಮಾಲಿನ್ಯ ಮತ್ತು ಬ್ರೇಕ್ ಪ್ಯಾಡ್ ಗಳ ಸವೆಯುವಿಕೆಯಿಂದಾಗುವ ಮಾಲಿನ್ಯದಲ್ಲೂನಿಯಂತ್ರಣಗಳಾಗಬೇಕು. ಅಲ್ಲದೆ ಕಾಲಕಾಲಕ್ಕೆ ಹೊಗೆ ತಪಾಸಣೆ ಮಾಡಿಸುವ ಬದಲು ವಾಹನಗಳ ಡಿಸ್ಪೆ$್ಲೕಯಲ್ಲೇ ನೇರವಾಗಿ ಮಾಲಿನ್ಯ ಪ್ರಮಾಣ ಕಾಣಿಸಬೇಕು.ಅಂದರೆ ಇಂಜಿನ್ ಒಳಗೊಂಡಂತೆ ವಾಹನದ ಬಿಡಿ ಭಾಗಗಳ ವಿನ್ಯಾಸ ಮತ್ತು ತಯಾರಿಯಲ್ಲಿಮೂಲದಲ್ಲೇ ವ್ಯತ್ಯಾಸಗಳಾಗಬೇಕು. ಇವೆಲ್ಲದರ ಪರಿಣಾಮ ಹೊಸ ವಾಹನಗಳ ಮಾರಾಟ ಬೆಲೆಯಲ್ಲಿತುಸು ಏರಿಕೆ ಖಚಿತ.

ಬಿಎಸ್ 6 ನಿಯಮ ಜಾರಿಯಾದ ಮೇಲೆ ಸಣ್ಣ ಡೀಸೆಲ್ ಎಂಜಿನ್ ಗಳ ತಯಾರಿಯನ್ನು ಎಲ್ಲಾವಾಹನ ಕಂಪನಿಗಳೂ ಸ್ಥಗಿತಗೊಳಿಸಿ ಪೆಟ್ರೋಲ್ ಹಾಗೂ ಸಿಎನ್ ಜಿಯತ್ತ ವಾಲಿದವು. ವಿನ್ಯಾಸ ಬದಲಾವಣೆ ಸೇರಿದಂತೆ ಹೊಸ ಉಪಕರಣಗಳ ಜೋಡಣೆಗಾಗಿ ತಗಲುವ ವೆಚ್ಚ ಸಣ್ಣ ಕಾರುಗಳ ಬೆಲೆಗೆ ಹೋಲಿಸಿದರೆ ಭಾರೀ ಏರಿಕೆ ಅನಿಸುತ್ತದೆ. ಆ ಕಾರಣದಿಂದ ಗ್ರಾಹಕರೇ ಅವುಗಳನ್ನು ಆಯ್ಕೆ ಮಾಡುವ ಸಂಭವ ಕಡಿಮೆ ಎಂಬ ಕಾರಣಕ್ಕೆ ತಯಾರಕರು ಡೀಸೆಲ್ ಎಂಜಿನ್ ಗಾಗಿ ಮರುಹೂಡಿಕೆಗೆ ಹಿಂದೇಟು ಹಾಕಿದರು.

ಇದರಿಂದ ಹೊಸ ಡೀಸೆಲ್ ವಾಹನಗಳ ಮಾರಾಟ ಪ್ರಮಾಣ ಶೇ. 18.1ಕ್ಕೆ ಕುಸಿದು ಸಿಎನ್ ಜಿ ಪಾಲು ಶೇ. 22ಕ್ಕೆ ಹೆಚ್ಚಳವಾಗಿದೆ.

ಡೀಸೆಲ್ ಎಂಜಿನ್ ಗಳು ಸಂಪೂರ್ಣ ಸ್ಥಗಿತವಾಗುತ್ತವೆಯೇ?

ಒಂದೇ ಪದದಲ್ಲಿಉತ್ತರಿಸುವುದಾದರೆ ಇಲ್ಲ. ಡೀಸೆಲ್ ಎಂಜಿನ್ ತಯಾರಿ ಸಂಪೂರ್ಣ ಸ್ಥಗಿತವಾಗುವುದಿಲ್ಲ. ಡೀಸೆಲ್ ಎಂಜಿನ್ ಗಳು ಉತ್ಪಾದಿಸುವ ಟಾರ್ಕ್ ಅಧಿಕವಾದ ಕಾರಣ ಎಸ್ ಯುವಿಗಳಂಥ ದೊಡ್ಡ ವಾಹನಗಳಲ್ಲಿಡೀಸೆಲ್ ಎಂಜಿನ್ ಗಳೇ ಉತ್ತಮ ಚಾಲನಾ ಅನುಭವ ನೀಡಲು ಯೋಗ್ಯವಾಗಿವೆ.

ಬಿಎಸ್ 7 ನಿಯಮಾವಳಿ ಜಾರಿಯಾಗುವಾಗ ಡೀಸೆಲ್ ಎಂಜಿನ್ ವೆಚ್ಚ ಮತ್ತಷ್ಟು ಹೆಚ್ಚಳವಾಗುತ್ತದೆ ನಿಜ. ಆದರೆ ಎಸ್ ಯುವಿಗಳ ಬೆಲೆ ಈಗಾಗಲೇ ಅಧಿಕವಿರುವ ಕಾರಣ ಶೇಕಡಾವಾರು ಲೆಕ್ಕದಲ್ಲಿಆಗುವ ಬೆಲೆ ಏರಿಕೆ ಗ್ರಾಹಕನ ದೃಷ್ಟಿಯಲ್ಲಿವಿಪರೀತ ಅನಿಸುವುದಿಲ್ಲ. ಅಲ್ಲದೆ ಅದೇ ಪ್ರಮಾಣದ ಶಕ್ತಿ ನೀಡುವ ಪೆಟ್ರೋಲ್ ಅಥವಾ ಸಿಎನ್ ಜಿ ಎಂಜಿನ್ ಗಳು ಡೀಸೆಲ್ ಗಿಂತ ಗಣನೀಯ ಪ್ರಮಾಣದಲ್ಲಿಕಡಿಮೆ ಮೈಲೇಜ್ ನೀಡುತ್ತವೆ.

ಹೀಗಿರುವಾಗ ವಾಸ್ತವದಲ್ಲಿಬರಲಿರುವ ಬದಲಾವಣೆ ಎಂದರೆ ಇಲೆಕ್ಟ್ರಿಕ್ ವಾಹನ (ಇವಿ) ಹಾಗೂ ಬ್ಯಾಟರಿ ಮತ್ತು ಎಂಜಿನ್ ಎರಡನ್ನೂ ಹೊಂದಿರುವ ಹೈಬ್ರಿಡ್ ವ್ಯವಸ್ಥೆ. ಇಲೆಕ್ಟ್ರಿಕ್ ಮೋಟಾರ್ ಗಳಲ್ಲಿಟಾರ್ಕ್ ಪ್ರಮಾಣ ಡೀಸೆಲ್ ಗಿಂತಲೂ ಅಧಿಕವಿರುವ ಕಾರಣ ಚಾಲನಾ ಅನುಭವದ ದೃಷ್ಟಿಯಲ್ಲಿಡೀಸೆಲ್ ಗೆ ಇವಿಗಳೇ ಪರ್ಯಾಯ. ಆದರೆ ಇವಿಗಳಿಗೆ ಅವುಗಳದ್ದೇ ಮಿತಿಗಳಿವೆ. ಹಾಗಾಗಿ ಬಿಎಸ್ 7 ಜಾರಿಯಾದ ಮೇಲೆ ಹೆಚ್ಚೆಚ್ಚು ಹೈಬ್ರಿಡ್ ವಾಹನಗಳನ್ನು ಕಾಣಬಹುದು.

ಇವಿ/ಹೈಬ್ರಿಡ್ ಗಳೇ ವಾಸ್ತವಿಕ ಪರ್ಯಾಯ

ಹೈಬ್ರಿಡ್ ವಾಹನಗಳು ಇವಿಗಳಂತೆ ಬ್ಯಾಟರಿಯಿಂದಲೇ ಓಡುವಂಥವು. ಆದರೆ ಚಾಜ್ ರ್ ಮಾಡದೆಯೂ ಬ್ಯಾಟರಿಗೆ ಶಕ್ತಿ ತುಂಬಲು ಜನರೇಟರ್ ರೀತಿ ಕೆಲಸ ಮಾಡುವ ಸಣ್ಣ ಎಂಜಿನ್ ಅಳವಡಿಸಲಾಗುತ್ತದೆ. ಇದರಿಂದ ಒಂದೇ ಬಾರಿ ಚಾಜ್ ರ್ ಮಾಡಿ ಹೆಚ್ಚಿನ ದೂರ ಕ್ರಮಿಸಲು ಸಾಧ್ಯ. ಅಲ್ಲದೆ ಇವಿಗಳಲ್ಲಿವೇಗ ತಗ್ಗಿಸಲು ಸಂಪೂರ್ಣ ಬ್ರೇಕ್ ಮೇಲೆಯೇ ಅವಲಂಬಿತವಾಗುವ ಬದಲು ಇವಿ ಮೋಟಾರ್ ಗಳೇ ಬ್ರೇಕಿಂಗ್ ಕೆಲಸ ಮಾಡುವ ರೀಜನರೇಟಿವ್ ಬ್ರೇಕಿಂಗ್ ವ್ಯವಸ್ಥೆ ಬ್ರೇಕ್ ಪ್ಯಾಡ್ ಗಳಿಂದಾಗುವ ಮಾಲಿನ್ಯ ನಿಯಂತ್ರಿಸಲೂ ಸಹಕಾರಿ. ಇಳಿಜಾರುಗಳಲ್ಲಿವೇಗ ನಿಯಂತ್ರಣದ ಜೊತೆಗೆ ಬ್ಯಾಟರಿಯೂ ಚಾಜ್ ರ್ ಆಗುತ್ತದೆ.

ಬಿಎಸ್ 7 ನಿಯಮಾವಳಿ ಇವಿಗಳಿಗೂ ಅನ್ವಯಿಸಲಿದೆ. ಬ್ಯಾಟರಿಯ ಸಾಮರ್ಥ್ಯ ಮಾತ್ರವಲ್ಲದೆ ಬ್ಯಾಟರಿಗಳ ಒಟ್ಟಾರೆ ಬಾಳಿಕೆಯ ಮೇಲೆಯೂ ತಯಾರಕರು ಖಾತರಿ ನೀಡಬೇಕಾಗುತ್ತದೆ. ಹಾಗಾಗಿ ಬ್ಯಾಟರಿಗಳ ಬಾಳಿಕೆ ಹೆಚ್ಚಾಗಲಿದೆ. ಬ್ಯಾಟರಿ ಬಾಳಿಕೆಯ ಆತಂಕ ಕಡಿಮೆಯಾಗುವ ಕಾರಣ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿಇವಿಗಳ ಮೇಲಿನ ವಿಶ್ವಾಸ ಹೆಚ್ಚಾಗುವುದು ನಿಸ್ಸಂದೇಹ.

ಒಟ್ಟಾರೆಯಾಗಿ ಬಿಎಸ್ 7 ನಿಯಮ ಎಂದರೆ ಹೊಗೆಯಿಂದ ಮಾತ್ರ ಉಂಟಾಗುವ ವಾಯು ಮಾಲಿನ್ಯವಲ್ಲದೆ ಇ-ವೇಸ್ಟ್ ಸಹಿತವಾಗಿ ಇಡೀ ಉತ್ಪಾದನಾ ಪ್ರಕ್ರಿಯೆಯಿಂದ ಒಟ್ಟಾರೆ ಪರಿಸರದ ಮೇಲೆ ಆಗುವ ಮಾಲಿನ್ಯ ನಿಯಂತ್ರಣದ ವ್ಯವಸ್ಥೆ ಎನ್ನಬಹುದು.