ಗಡುವಿಗೂ ಮುನ್ನ ದೇಶ ನಕ್ಸಲ್ ಮುಕ್ತ
- ಕೇಂದ್ರ ಗೃಹ ಸಚಿವ ಅಮಿತ್ ಶಾ
ಭದ್ರತಾ ಪಡೆಗಳ ಧೈರ್ಯ, ಶೌರ್ಯ ಮತ್ತು ತ್ಯಾಗದ ಫಲವಾಗಿ ಮಾರ್ಚ್ 31ರ ಗಡುವಿಗೂ ಮುನ್ನವೇ ದೇಶವು ನಕ್ಸಲ್ ಮುಕ್ತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ‘‘ನಕ್ಸಲ್ ಮುಕ್ತ ಅಭಿಯಾನದಲ್ಲಿಕೆಲವು ದಿನಾಂಕಗಳು ಐತಿಹಾಸಿಕ ಮಹತ್ವವನ್ನು ಹೊಂದಿವೆ. 2023ರ ಡಿ.13ರಂದು ಛತ್ತೀಸಗಢದಲ್ಲಿಬಿಜೆಪಿ ಸರಕಾರ ಸ್ಥಾಪನೆಯಾದಾಗ ನಕ್ಸಲ್ ವಾದದ ನಿರ್ಮೂಲನೆಗೆ ಅಭಿಯಾನ ಆರಂಭಿಸಲಾಯಿತು’’ ಎಂದರು.
‘‘2024ರ ಆಗಸ್ಟ್ 24ರಂದು ಎಲ್ಲಾ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ ಸಭೆ ಸೇರಿ 2026ರ ಮಾರ್ಚ್ 31ರ ಒಳಗಾಗಿ ದೇಶವನ್ನು ನಕ್ಸಲ್ ಮುಕ್ತ ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಮಾರ್ಚ್ 31ರ ಗಡುವಿಗೂ ಮುನ್ನವೇ ಭದ್ರತಾ ಪಡೆಗಳ ಧೈರ್ಯ, ಶೌರ್ಯ, ತ್ಯಾಗದ ಪರಿಣಾವಾಗಿ ದೇಶದಲ್ಲಿನಕ್ಸಲ್ ವಾದವು ಸಂಪೂರ್ಣವಾಗಿ ನಿರ್ನಾಮವಾಗಿದೆ’’ ಎಂದರು.
‘‘ಬಿಜೆಪಿ ಅಧಿಕಾರದಲ್ಲಿಇಲ್ಲದ ಹಲವು ರಾಜ್ಯಗಳ ಸರಕಾರಗಳು ನಕ್ಸಲ್ ಮುಕ್ತ ಭಾರತಕ್ಕಾಗಿ ಬೆಂಬಲ ನೀಡಿದ್ದವು ಎಂದು ಯಾವುದೇ ಹಿಂಜರಿಕೆ ಇಲ್ಲದೆ ಹೇಳುತ್ತೇನೆ. ಆದರೆ ಈ ಹಿಂದಿನ ಛತ್ತೀಸಗಢ ಸರಕಾರ ಮಾತ್ರ ಬೆಂಬಲ ನೀಡಿರಲಿಲ್ಲ’’ ಎಂದು ಹೇಳಿದರು.

