ಶೀ-ಮಾರ್ಟ್
ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೊಸದಾಗಿ ಪ್ರಾರಂಭಿಸಲಾದ ಖಏಉ-ಋಅ್ಕT ಉಪಕ್ರಮದ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲು ಒಡಿಶಾದ ಭುವನೇಶ್ವರದಲ್ಲಿಉನ್ನತ ಮಟ್ಟದ ರಾಷ್ಟ್ರೀಯ ಸಮಾಲೋಚನೆಯನ್ನು ಕರೆದಿದೆ.
ಖಏಉ-ಋಅ್ಕT (ಖಛ್ಝ್ಛಿ ಏಛ್ಝಿp ಉ್ಞಠ್ಟಿಛಿp್ಟಛ್ಞಿಛ್ಠ್ಟಿs ್ಫ ಋa್ಟkಛಿಠಿಜ್ಞಿಜ ಅvಛ್ಞ್ಠಿಛಿs ್ಛಟ್ಟ ್ಕ್ಠ್ಟa್ಝ T್ಟa್ಞs್ಛಟ್ಟಞaಠಿಜಿಟ್ಞ) ಎನ್ನುವುದು ಗ್ರಾಮೀಣ ಭಾರತದ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣವನ್ನು ಬದಲಾಯಿಸಲು ರೂಪಿಸಲಾದ ಒಂದು ಕ್ರಾಂತಿಕಾರಿ ಉಪಕ್ರಮವಾಗಿದೆ. ಇದು ಕೇವಲ ಮಹಿಳೆಯರಿಗೆ ಸಾಲ ನೀಡುವ ಸಾಂಪ್ರದಾಯಿಕ ಸೂಕ್ಷ್ಮ-ಸಾಲ ವ್ಯವಸ್ಥೆಯಿಂದ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಉದ್ದಿಮೆದಾರರಾಗಿ ಮತ್ತು ಮಾರುಕಟ್ಟೆಯ ಮಾಲೀಕರಾಗಿ ಬೆಳೆಯಲು ನೆರವಾಗುತ್ತದೆ. ಮಹಿಳಾ ನೇತೃತ್ವದ ಗ್ರಾಮೀಣ ಮಾರುಕಟ್ಟೆ ಮತ್ತು ಪೂರೈಕೆ ಸರಪಳಿ ಜಾಲವನ್ನು ನಿರ್ಮಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಮುಖ್ಯ ಉದ್ದೇಶ
ಗ್ರಾಮೀಣ ಭಾಗದ ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಮಾರುಕಟ್ಟೆಯ ಕೊರತೆ. ಶೀ-ಮಾರ್ಟ್ ಈ ಕೊರತೆಯನ್ನು ವ್ಯವಸ್ಥಿತವಾಗಿ ನೀಗಿಸಲು ಶ್ರಮಿಸುತ್ತದೆ. ಉತ್ಪಾದನೆಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವುದು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ನೇರ ಆದಾಯ ತಂದುಕೊಡುವುದು, ಗ್ರಾಮೀಣ ಉತ್ಪನ್ನಗಳಿಗೆ ಪ್ರಾದೇಶಿಕ ಮಟ್ಟದಲ್ಲಿಮಾರುಕಟ್ಟೆ ಮೌಲ್ಯ ಮತ್ತು ಬ್ರ್ಯಾಂಡ್ ಮೌಲ್ಯ ಸೃಷ್ಟಿಸುವುದು ಹಾಗೂ 2029ರ ವೇಳೆಗೆ ದೇಶದಲ್ಲಿಹೆಚ್ಚುವರಿಯಾಗಿ ಮೂರು ಕೋಟಿ ‘ಲಖ್ ಪತಿ ದೀದಿ’ಯರನ್ನು ( ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಆದಾಯ ಹೊಂದಿರುವ ಮಹಿಳೆಯರು) ಸೃಷ್ಟಿಸುವ ರಾಷ್ಟ್ರೀಯ ಗುರಿಗೆ ಬಲ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಪ್ರಮುಖ ವೈಶಿಷ್ಟ್ಯಗಳು
ಸಮುದಾಯದ ಒಡೆತನದ ಮಳಿಗೆಗಳು: ಯೋಜನೆಯಡಿ ಸ್ಥಳೀಯ ಸ್ವಸಹಾಯ ಸಂಘಗಳ ಒಕ್ಕೂಟಗಳೇ ಮುನ್ನಡೆಸುವ ಮತ್ತು ನಿರ್ವಹಿಸುವ ಚಿಲ್ಲರೆ ವ್ಯಾಪಾರ ಮಳಿಗೆಗಳು ಹಾಗೂ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಅರ್ಹ ಸ್ವಸಹಾಯ ಸಂಘಗಳಿಗೆ ಬೆಂಬಲ: ಈಗಾಗಲೇ ಸ್ಥಿರವಾದ ವಾರ್ಷಿಕ ಆದಾಯ ಹೊಂದಿರುವ ಪ್ರಬುದ್ಧ ಸ್ವಸಹಾಯ ಸಂಘಗಳನ್ನು ಗುರುತಿಸಿ, ಅವರ ಗ್ರಾಮೀಣ ಉದ್ಯಮಗಳನ್ನು ಮತ್ತಷ್ಟು ವಿಸ್ತರಿಸಲು ವಿಶೇಷ ಆದ್ಯತೆ ನೀಡಲಾಗುತ್ತದೆ.
ಘ್ಕಿONಈಇ ಡಿಜಿಟಲ್ ಜೋಡಣೆ: ಮುಕ್ತ ಡಿಜಿಟಲ್ ವಾಣಿಜ್ಯ ಜಾಲದ (ONಈಇ) ಜೊತೆಗೆ ಇದನ್ನು ಸಂಯೋಜಿಸಲಾಗುತ್ತದೆ. ಇದರಿಂದಾಗಿ ಯಾವುದೇ ಕಮಿಷನ್ ಇಲ್ಲದೆ ಗ್ರಾಮೀಣ ಮಹಿಳೆಯರು ತಮ್ಮ ಉತ್ಪನ್ನಗಳನ್ನು ದೇಶಾದ್ಯಂತ ಆನ್ ಲೈನ್ ಮೂಲಕ ಮಾರಾಟ ಮಾಡಬಹುದು.
ಇಂಡಿಯಾ ಪೋಸ್ವ್ ಲಾಜಿಸ್ಟಿP್ಸ… ಬೆಂಬಲ: ಗ್ರಾಮೀಣ ಉತ್ಪನ್ನಗಳನ್ನು ಯಾವುದೇ ತೊಂದರೆಯಿಲ್ಲದೆ ನಗರ ಮಾರುಕಟ್ಟೆಗಳಿಗೆ ತಲುಪಿಸಲು ಭಾರತೀಯ ಅಂಚೆ ಇಲಾಖೆ ಜಾಲವನ್ನು ಬಳಸಿಕೊಳ್ಳಲಾಗುತ್ತದೆ.
ವೈವಿಧ್ಯಮಯ ಉತ್ಪನ್ನಗಳ ಪರಿಸರ ವ್ಯವಸ್ಥೆ: ಸಾವಯವ ಕೃಷಿ ಉತ್ಪನ್ನಗಳು, ಕೈಮಗ್ಗ, ಕರಕುಶಲ ವಸ್ತುಗಳು, ಸಂಸ್ಕರಿಸಿದ ಆಹಾರ ಪದಾರ್ಥಗಳು ಮತ್ತು ಆಯುರ್ವೇದ/ವೆಲ್ ನೆಸ್ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ.
ವೃತ್ತಿಪರ ಮಾರುಕಟ್ಟೆ ನಿರ್ವಹಣೆ: ಈ ಮಳಿಗೆಗಳಿಗೆ ಆಧುನಿಕ ಡಿಜಿಟಲ್ ದಾಸ್ತಾನು (ಐ್ಞvಛ್ಞಿಠಿಟ್ಟy) ವ್ಯವಸ್ಥೆ, ಪ್ರಮಾಣೀಕೃತ ಬಿಲ್ಲಿಂಗ್ , ಆಕರ್ಷಕ ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್ ಸೌಲಭ್ಯಗಳನ್ನು ಒದಗಿಸಿ ಮಾರುಕಟ್ಟೆಯಲ್ಲಿಸ್ಪರ್ಧಾತ್ಮಕ ಎದುರಿಸಲು ಸಜ್ಜುಗೊಳಿಸಲಾಗುತ್ತದೆ.

