ಬಾಟಮ್ ಗೆ ಕಿರುತೆರೆ

Contributed bybabitha.salian@timesgroup.com|Vijaya Karnataka

ನಟಿ ತನುಜಾ ವೆಂಕಟೇಶ್‌ 'ಮೂಗುತಿ ಮಲ್ಲಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಿಂದ ಕಿರುತೆರೆಗೆ ಬಂದಿರುವ ಅವರು, ಅವಕಾಶ ಮುಖ್ಯ ಎಂದಿದ್ದಾರೆ. ಗ್ರಾಮೀಣ ಹಿನ್ನೆಲೆಯ ತೆಲುಗು ಚಿತ್ರವೊಂದರಲ್ಲಿಯೂ ನಟಿಸಿದ್ದಾರೆ. ರಂಗಭೂಮಿ ಕಲಾವಿದೆಯಾಗಿರುವ ತನುಜಾ, ಕಿರುತೆರೆಯಲ್ಲಿ ಮತ್ತಷ್ಟು ಸಾಧನೆ ಮಾಡಲು ಬಯಸಿದ್ದಾರೆ.

new opportunities in the acting world with tanuja venkatesh

ಕಲಾವಿದರಿಗೆ ಅವಕಾಶ ದೊಡ್ಡದು ಎಂದ ತನುಜಾ

ಇಂಟ್ರೊ

ಧನಂಜಯ ಅಭಿನಯದ ‘ಕೋಟಿ’ ಸಿನಿಮಾದಲ್ಲಿತಂಗಿ ಪಾತ್ರದಲ್ಲಿದ್ದ ನಟಿ ತನುಜಾ ವೆಂಕಟೇಶ್ ಪ್ರಸ್ತುತ ‘ ಮೂಗುತಿ ಮಲ್ಲಿ ’ ಧಾರಾವಾಹಿಯಲ್ಲಿನಾಯಕಿಯಾಗಿ ಮಿಂಚುತ್ತಿದ್ದಾರೆ. ರಂಗಭೂಮಿ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಅವರು ತಮ್ಮ ನಟನಾ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

ನೇತ್ರಾವತಿ ಕೃಷ್ಣಮೂರ್ತಿ

ಕನ್ನಡ ಕಿರುತೆರೆಯ ‘ಮೂಗುತಿ ಮಲ್ಲಿ’ ಧಾರಾವಾಹಿ ತೆಲುಗಿನಲ್ಲಿ‘ಮುಕ್ಕೇರ ಮೀನಾಕ್ಷಿ’ ಹೆಸರಿನಲ್ಲಿಪ್ರಸಾರವಾಗುತ್ತಿದೆ. ಮಲ್ಲಿಮತ್ತು ಮೀನಾಕ್ಷಿಯಾಗಿ ಇವೆರಡೂ ಧಾರಾವಾಹಿಗಳಲ್ಲಿಲೀಡ್ ರೋಲ್ ನಲ್ಲಿಅಭಿನಯಿಸುವ ಮೂಲಕ ನಟಿ ತನುಜಾ ವೆಂಕಟೇಶ್ ಕನ್ನಡದ ಜತೆಗೆ ತೆಲುಗು ಕಿರುತೆರೆ ಲೋಕಕ್ಕೂ ಪದಾರ್ಪಣೆ ಮಾಡಿದ್ದಾರೆ. ಈ ಹೊಸ ಅನುಭವ ಹಂಚಿಕೊಂಡಿರುವ ಅವರು, ‘ಮಧ್ಯಮ ಕುಟುಂಬದ ಹುಡುಗಿ ಮಲ್ಲಿಪಾತ್ರ ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ. ಆಕೆ ತುಂಬಾ ಸಾಫ್ಟ್ ಮತ್ತು ಬೋಲ್ಡ್ . ಒಂದು ಪಾತ್ರದ ಮೂಲಕ ಜೀವನದಲ್ಲಿಏನಾದರೂ ಅಳವಡಿಸಿಕೊಳ್ಳಬಹುದು ಎಂಬುದಕ್ಕೆ ಮಲ್ಲಿಕ್ಯಾರೆಕ್ಟರ್ ಉತ್ತಮ ಉದಾಹರಣೆ. ಈ ಪಾತ್ರದಿಂದ ವೈಯಕ್ತಿಕವಾಗಿ ಬಹಳಷ್ಟು ಕಲಿಯುತ್ತಿದ್ದೇನೆ. ಎರಡೂ ಭಾಷೆಗಳಲ್ಲೂಏಕಕಾಲದಲ್ಲಿಈ ಸಿನಿಮಾ ಚಿತ್ರೀಕರಣವಾಗುತ್ತಿದೆ. ನನಗೆ ತೆಲುಗು ಭಾಷೆ ಗೊತ್ತಿರುವ ಕಾರಣ ಶೂಟಿಂಗ್ ಸರಾಗ ಅನಿಸುತ್ತಿದೆ’ ಎಂದಿದ್ದಾರೆ.

ಸಿನಿಮಾದಿಂದ ಕಿರುತೆರೆ

ಕೋಟಿ ಸಿನಿಮಾ ಮೂಲಕ ಕನ್ನಡ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿರುವ ತನುಜಾ ಕಿರುತೆರೆಗೆ ಬರಲು ಮುಖ್ಯ ಕಾರಣ ಅವಕಾಶ. ‘ಕಲಾವಿದರಿಗೆ ವೇದಿಕೆ ಯಾವುದಾದರೂ ಸರಿ ಅವಕಾಶ ಮುಖ್ಯ. ಎಲ್ಲಿಉತ್ತಮ ಅವಕಾಶ ಸಿಗುತ್ತದೆಯೋ ಅದನ್ನು ಬಳಸಿಕೊಳ್ಳಬೇಕು. ‘ಕೋಟಿ’ ಚಿತ್ರದ ನಂತರ ನನಗೆ ಸಾಕಷ್ಟು ಸಿನಿಮಾಗಳ ಅವಕಾಶ ಬಂದವು. ಆದರೆ ಪಾತ್ರಗಳು ನನ್ನ ಮನಸ್ಸಿಗೆ ಹತ್ತಿರವಾಗಲಿಲ್ಲ. ಈ ನಡುವೆ ಬಂದ ಅವಕಾಶವೇ ಮಲ್ಲಿಪಾತ್ರ. ಕಿರುತೆರೆ ಕ್ಷೇತ್ರ ಕೂಡ ಬಹಳ ದೊಡ್ಡದು. ಇಲ್ಲಿಕೂಡ ಕಲಿಯುವುದು ಸಾಕಷ್ಟು ಇರುತ್ತದೆ. ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಯಾವುದಾದರೂ ಸರಿ ಎಂದು ನಿರ್ಧರಿಸಿ ಕಿರುತೆರೆಗೆ ಬಂದೆ’ ಎನ್ನುತ್ತಾರೆ ಅವರು.

ಸಿನಿಮಾದಲ್ಲೂಬಿಝಿ

ತೆಲುಗಿನ ಹೊಸ ಚಿತ್ರವೊಂದರಲ್ಲಿಅಭಿನಯಿಸಿರುವ ತನುಜಾ, ‘ಈ ಸಿನಿಮಾ ತೆಲುಗು ಭಾಷೆಯಾದರೂ ನಾನು ಸೇರಿದಂತೆ ಕನ್ನಡದವರೇ ಹೆಚ್ಚಿರುವ ಹೊಸ ತಂಡ. ಗ್ರಾಮೀಣ ಹಿನ್ನೆಲೆಯ ಕಥೆಯಿರುವ ಈ ಚಿತ್ರದಲ್ಲಿಹಳ್ಳಿ ಹುಡುಗಿ ಪಾತ್ರದಲ್ಲಿದ್ದೇನೆ. ಇದರ ಜತೆಗೆ ತಮಿಳಿನ ಶಾರ್ಟ್ ಫಿಲ್ಮ್ ಒಂದರಲ್ಲಿಅಭಿನಯಿಸಿದ್ದೇನೆ. ಸದ್ಯದಲ್ಲೇ ಅದು ಬಿಡುಗಡೆಯಾಗಲಿದೆ’ ಎಂದು ಹೇಳಿದ್ದಾರೆ.

ರಂಗಭೂಮಿ ಪ್ರತಿಭೆ

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿಮಾಸ್ಟರ್ ಆಫ್ ಥಿಯೇಟರ್ ಆರ್ಟ್ಸ್ ಮಾಡಿರುವ ತನುಜಾ ವೆಂಕಟೇಶ್ ರಂಗಭೂಮಿ ಪ್ರತಿಭೆಯೂ ಹೌದು. ಚಿಕ್ಕ ವಯಸ್ಸಿನಿಂದಲೂ ನೃತ್ಯ, ಸಂಗೀತ, ಕಲೆಯಲ್ಲಿಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದ ಅವರು ನಟನಾ ಸೆಳೆತಕ್ಕೆ ನಾಟಕವೇ ಕಾರಣ ಎಂದಿದ್ದಾರೆ. ‘ನಾನು ಬಿ.ಕಾಂ ಓದುವಾದ ಕ್ರಾಂತಿ ಎಂಬ ಕನ್ನಡ ತಂಡದ ಜತೆ ನಾಟಕಗಳಲ್ಲಿಅಭಿನಯಿಸಿದೆ. ನಂತರ ಅದರಲ್ಲಿಆಸಕ್ತಿ ಹೆಚ್ಚಾಗಿ ರಂಗಭೂಮಿಯಲ್ಲಿಹೆಚ್ಚು ಸಕ್ರಿಯಳಾದೆ. ದೊಡ್ಡ ದೊಡ್ಡ ರಂಗ ಕಲಾವಿದರು ಮತ್ತು ಮೆಂಟರ್ ಗಳ ಜತೆ ನಟನೆ ಕಲಿತು ಸಾಕಷ್ಟು ನಾಟಕಗಳಲ್ಲಿಅಭಿನಯಿಸುವ ಅವಕಾಶ ದೊರಕುತ್ತಿದ್ದಿದ್ದು ನನ್ನ ಅದೃಷ್ಟ. ‘ಕೋಟಿ’ ಸಿನಿಮಾ ನಂತರ ಕೂಡ ನಾನು ನಾಟಕದಲ್ಲಿಹೆಚ್ಚು ತೊಡಗಿಕೊಂಡಿದ್ದೆ. ಈಗ ನಾನು ಧಾರಾವಾಹಿಯಲ್ಲಿಬಿಝಿ ಇರುವ ಕಾರಣ ನಾಟಕಗಳಲ್ಲಿನಟಿಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಅವರು.

ಕೋಟ್

ನಟನೆ ಎಲ್ಲರಿಗೂ ಒಲಿಯುವುದಿಲ್ಲ. ನನಗೆ ಒಲಿರುವುದು ನನ್ನ ಅದೃಷ್ಟ. ಮಲ್ಲಿಯಂತಹ ಮನಸ್ಸಿಗೆ ಹತ್ತಿರವಾಗುವ, ಜನಮಾನಸದಲ್ಲಿಉಳಿಯುವಂತಹ ಮತ್ತಷ್ಟು ಪಾತ್ರಗಳ ಮೂಲಕ ಈ ಕ್ಷೇತ್ರದಲ್ಲಿಮತ್ತಷ್ಟು ಸಾಧನೆ ಮಾಡಬೇಕೆಂಬ ಹಂಬಲವಿದೆ.

ತನುಜಾ ವೆಂಕಟೇಶ್ | ನಟಿ