ಶಾಸಕ ರಾಜಾಸಿಂಗ್ ಪ್ರವೇಶಕ್ಕೆ ನಿರ್ಬಂಧ
ವಿಕ ಸುದ್ದಿಲೋಕ ಯಾದಗಿರಿ
ನಗರದಲ್ಲಿಮೇ 21ರಂದು ಹಮ್ಮಿಕೊಂಡಿರುವ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರ ಹಾಗೂ ತೆಲಂಗಾಣ ರಾಜ್ಯದ ಶಾಸಕ ರಾಜಾಸಿಂಗ್ ಠಾಕೂರ ಅವರನ್ನು ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಆದೇಶ ಹೊರಡಿಸಿದ್ದಾರೆ.
ಜೈ ಛತ್ರಪತಿ ಶಿವಾಜಿ ಮಹಾರಾಜ ಸೇನಾ ಹಾಗೂ ವೀರ. ಸಾವರ್ಕರ್ ಸೇನಾ ವತಿಯಿಂದ ಜಯಂತಿ ಅಂಗವಾಗಿ 21ರಂದು ಶೋಭಾಯಾತ್ರೆ ಹಾಗೂ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ, ರಾಜಾಸಿಂಗ್ ಠಾಕೂರ ಅವರು ಉದ್ರೇಕಕಾರಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಂಭವವಿರುವುದರಿಂದ ಮೇ 21 ರಿಂದ ಒಂದು ತಿಂಗಳವರೆಗೆ ಯಾದಗಿರಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧಿಸಿ ಆದೇಶಿಸಲಾಗಿದೆ.

