ದೇಹದಾಢ್ರ್ಯಕ್ಕೆ ಸ್ಟೀರಾಯ್ಡ… ಅವಶ್ಯಕವೇ?
ಡಾ.ಲಕ್ಷ್ಮಣ ವಿ ಎ.
ನನ್ನ ಮಗ ಅಪಾಟ್ರ್ಮೆಂಟ್ ನ ಜಿಮ್ ನೊಳಗೆ ಕಸರತ್ತು ಮಾಡುತ್ತಿರುವುದು ಇತ್ತೀಚಿಗೆ ನನ್ನ ಗಮನಕ್ಕೆ ಬಂದಾಗ ನನಗೆ ಬಹಳ ಅಚ್ಚರಿಯಾಗಿತ್ತು. ಎಷ್ಟಾದರೂ ಇವನು ಜೆನ್ ಜೀ ಪೀಳಿಗೆಯ ತುಣುಕು. ಈ ಥಳಕು ಬೆಳಕಿನ ತೋರು ಲೋಕದ ಒಂದು ಝಲಕು. ಹಳ್ಳಿಗಳಲ್ಲಿಗರಡಿ ಮನೆಗಳು ಬಿದ್ದು ಈಗ ಅದರ ಜಾಗದಲ್ಲಿಜಿಮ್ ಗಳು ಹುಟ್ಟಿಕೊಂಡು ದಶಕವೇ ಆಯಿತು.
ಇಂದಿನ ಕಾಲದಲ್ಲಿಜಿಮ್ ಎಂಬುದು ಕೇವಲ ವ್ಯಾಯಾಮ ಮಾಡುವ ಸ್ಥಳವಾಗಿಲ್ಲ. ಅದು ವ್ಯಕ್ತಿತ್ವವನ್ನು ಪ್ರದರ್ಶಿಸುವ ಒಂದು ರಂಗಭೂಮಿ.ಅದರ ಹೊಳಪಿನ ಕನ್ನಡಿಗಳು ಈಗ ದೇಹವನ್ನು ಮಾತ್ರವಲ್ಲ, ವ್ಯಕ್ತಿಯ ಆತ್ಮವಿಶ್ವಾಸವನ್ನೂ ಅಳೆಯುವ ಮಾಪಕಗಳು. ಹೊರಗೆ ನೋಡಲು ಫಿಟ್ ಆಗಿದ್ದವರಲ್ಲೇ ಹೃದಯಾಘಾತ ಅಥವಾ ಕಾರ್ಡಿಯಾಕ್ ಅರೆಸ್ಟ್ ಸಂಭವಿಸುವುದು. ಅಪಾಯಕಾರಿ ಸ್ಟಿರಾಯ್ಡ್ ದೀರ್ಘಕಾಲದ ಬಳಕೆಯಿಂದ.ಲಿವರ್ ಹಾನಿ, ಹಾರ್ಮೋನ್ ಅಸ್ತವ್ಯಸ್ತತೆ, ಮಾನಸಿಕ ಅಸ್ವಸ್ಥತೆಗಳು ಕಾಣಿಸಿಕೊಳ್ಳುವುದು. ಇವರಲ್ಲಿಬಹುತೇಕರು ಹೊರಗೆ ನೋಡಲು ಅತ್ಯಂತ ಆರೋಗ್ಯವಂತರಂತೆ ಕಾಣುತ್ತಿರುತ್ತಾರೆ.ಕೆಲವರ ದೇಹವಂತೂ ಸಮಾಜ ಮೆಚ್ಚುವಂತಹ ಪರಿಪೂರ್ಣ ಮಾಂಸಖಂಡಗಳ ಪರ್ಫೆಕ್ಟ್ ಸಿP್ಸ… ಪ್ಯಾಕ್ ಮಾದರಿಯಂತಿರುತ್ತದೆ.ಆದರೆ ದೇಹದ ಆಕಾರ ಮತ್ತು ಆರೋಗ್ಯ ಒಂದೇ ಅಲ್ಲ. ಗಟ್ಟಿಯಾದ ಸ್ನಾಯುಗಳು ಇದ್ದರೆ ಹೃದಯವೂ ಗಟ್ಟಿಯೇ ಎಂದು ಹೇಳಲಾಗುವುದಿಲ್ಲ. ಎದೆಮೇಲೆ ಮೂಡಿದ ಸಿಕ್ಸ್ ಪ್ಯಾಕ್ ಹೊಟ್ಟೆಯೊಳಗಿನ ಲಿವರ್ , ಕಿಡ್ನಿ ಅಥವಾ ಹಾರ್ಮೋನ್ ಸ್ಥಿತಿಯನ್ನು ಬಿಂಬಿಸುವುದಿಲ್ಲ.
ಅನಾಬಾಲಿಕ್ ಸ್ಟಿರಾಯ್ಡ್ ಗಳು ಮೂಲತಃ ವೈದ್ಯಕೀಯ ಉದ್ದೇಶಕ್ಕಾಗಿ ಕಂಡುಹಿಡಿಯಲ್ಪಟ್ಟವು. ಕೆಲವು ನಿರ್ದಿಷ್ಟ ಕಾಯಿಲೆಗಳಲ್ಲಿವೈದ್ಯರ ಮೇಲ್ವಿಚಾರಣೆಯಲ್ಲಿಅವು ಬಳಸಲಾಗಬಹುದು. ಆದರೆ ಇಂದು ಅವು ವೈದ್ಯಕೀಯ ವಲಯದ ಗಡಿಯನ್ನು ದಾಟಿ ಜಿಮ್ ಸಂಸ್ಕೃತಿಯ ಭಾಗ. ಒಮ್ಮೆ ಬಾಡಿಬಿಲ್ಡಿಂಗ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದ ಸ್ಟಿರಾಯ್ಡ… ಬಳಕೆ ಈಗ ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್ ವೇರ್ ಉದ್ಯೋಗಿಗಳು, ಕಿಶೋರರು ಮತ್ತು ಸಾಮಾನ್ಯ ಜಿಮ್ ಗಳಿಗೆ ಹೋಗುವ ಯುವಕರವರೆಗೂ ವ್ಯಾಪಿಸಿದೆ. ಇದಕ್ಕೆ ಕಾರಣ ಕೇವಲ ದೇಹ ಕಟ್ಟಿಕೊಳ್ಳುವ ಆಸೆಯಲ್ಲ. ಇದರ ಹಿಂದೆ ಆಳವಾದ ಸಾಮಾಜಿಕ ಮತ್ತು ಮಾನಸಿಕ ಒತ್ತಡಗಳಿವೆ.
ಕೆಲವೊಮ್ಮೆ ಜಿಮ್ ಟ್ರೇನರ್ ಗಳ ಒತ್ತಡ, ಸಪ್ಲಿಮೆಂಟ್ ಜಾಹೀರಾತುಗಳು, ಗೆಳೆಯರ ಹೋಲಿಕೆ ಇವೆಲ್ಲಸೇರಿ ಯುವ ಮನಸ್ಸಿನ ಮೇಲೆ ಅಪಾಯಕಾರಿ ಒತ್ತಡವನ್ನು ನಿರ್ಮಿಸುತ್ತಿವೆ. ಆದರೆ ಜೀವಶಾಸ್ತ್ರಕ್ಕೆ ಜಾಹೀರಾತುಗಳ ಭಾಷೆ ಅರ್ಥವಾಗುವುದಿಲ್ಲ. ಸ್ಟಿರಾಯ್ಡ್ ಗಳು ಹೃದಯದ ಮೇಲೆ ಭಾರಿ ಒತ್ತಡ ಉಂಟುಮಾಡುತ್ತವೆ. ಅವು ಹೃದಯದ ಸ್ನಾಯುಗಳನ್ನು ಅಸಹಜವಾಗಿ ದಪ್ಪಗೊಳಿಸಬಹುದು. ಹೃದಯದ ವಿದ್ಯುತ್ ಚಟುವಟಿಕೆಯನ್ನು ಅಸ್ತವ್ಯಸ್ತಗೊಳಿಸಬಹುದು ಮತ್ತು ರಕ್ತದೊತ್ತಡ ಹೆಚ್ಚಿಸಬಹುದು. ದೀರ್ಘಕಾಲದಲ್ಲಿಇದು ಹೃದಯ ಬಡಿತದ ಏರುಪೇರು ಕಾರ್ಡಿಯೊಮಯೋಪತಿ ರಕ್ತಹೆಪ್ಪುಗಟ್ಟುವಿಕೆಗೆ ಕಾರಣವಾಗಿ ಏಕಾಏಕಿ ಸಾವಿನವರೆಗೂ ಕೊಂಡೊಯ್ಯಬಹುದು.
ಹಾರ್ಮೋನ್ ಮೇಲೆ ಪ್ರಭಾವ
ಆತಂಕಕಾರಿ ವಿಷಯವೆಂದರೆ ಹಾರ್ಮೋನ್ ದೇಹದ ವ್ಯವಸ್ಥೆಯ ಮೇಲೆ ಆಗುವ ಪರಿಣಾಮ. ಕೃತಕ ಟೆಸ್ಟೋಸ್ಟೆರೋನ್ ಬಳಕೆಯಿಂದ ದೇಹದ ಸಹಜ ಹಾರ್ಮೋನ್ ಉತ್ಪಾದನೆ ಕುಗ್ಗುತ್ತದೆ. ಇದರಿಂದ ಬಂಜೆತನ, ಲೈಂಗಿಕ ದೌರ್ಬಲ್ಯ, ವೃಷಣಗಳ ಕುಗ್ಗುವಿಕೆ ಮುಂತಾದ ಸಮಸ್ಯೆಗಳು ಕಾಣಿಸಬಹುದು. ಮಹಿಳೆಯರಲ್ಲಿಧ್ವನಿ ಗಟ್ಟಿಯಾಗುವುದು, ಮಾಸಿಕ ಚಕ್ರದ ಅಸ್ತವ್ಯಸ್ತತೆ ಮುಂತಾದ ಬದಲಾವಣೆಗಳು ಉಂಟಾಗಬಹುದು. ಅತಿಯಾದ ಪ್ರೊಟೀನ್ ಬಳಕೆ, ಕಳಪೆ ಗುಣಮಟ್ಟದ ಸ್ಟಿರಾಯ್ಡ್ ಇವೆಲ್ಲದೇಹದೊಳಗೆ ವಿಷಕಾರಿ ಪರಿಸ್ಥಿತಿಯನ್ನು ನಿರ್ಮಿಸುತ್ತವೆ. ಅನೇಕರು ತಾವು ಸೇವಿಸುತ್ತಿರುವ ಪುಡಿಗಳೊಳಗೆ ನಿಜವಾಗಿ ಏನಿದೆ ಎಂಬುದೇ ತಿಳಿದಿರುವುದಿಲ್ಲ.
ಮಾನಸಿಕ ಆರೋಗ್ಯಕ್ಕೆ ಮಾರಕ
ಕೋಪ, ಆತಂಕ, ಹಿಂಸಾತ್ಮಕ ವರ್ತನೆ, ಅಮಲುಗಳಂತಹ ಅವಲಂಬನೆ ಇವೆಲ್ಲದೀರ್ಘಕಾಲದ ಬಳಕೆದಾರರಲ್ಲಿಕಾಣಿಸಿಕೊಳ್ಳುತ್ತಿವೆ. ಕೆಲವರು ಮಸಲ್ ಡಿಸ್ಮಾರ್ಫಿಯಾ ಎಂಬ ಮನೋಸ್ಥಿತಿಗೆ ಒಳಗಾಗುತ್ತಾರೆ. ಎಷ್ಟು ಸ್ನಾಯುಗಳು ಬೆಳೆದರೂ ತಮ್ಮ ದೇಹಕ್ಕೆ ಇದು ಸಾಲದು ಎಂಬ ಭಾವನೆ ಅವರನ್ನು ಕಾಡುತ್ತಿರುತ್ತದೆ. ಇಂದು ನಾವು ಆರೋಗ್ಯಕ್ಕಿಂತ ಬಾಹ್ಯದ ಅಂದಗಾಣುವಿಕೆಗೆ ಹೆಚ್ಚಿನ ಮಹತ್ವ ನೀಡುವ ಸಮಾಜವನ್ನು ನಿರ್ಮಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿಮಾನವನ ಅಸುರಕ್ಷತೆ ಕೂಡ ವ್ಯಾಪಾರವಾಗುತ್ತದೆ. ಯುವಕರಿಗೆ ತಮ್ಮ ಸಹಜ ಬಡಕಲು ದೇಹವೇ ಸಾಲದು ಎಂಬ ಭಾವನೆ ಹುಟ್ಟಿಸುವ ಮೂಲಕ ಅನೇಕ ಉದ್ಯಮಗಳು ಲಾಭ ಮಾಡಿಕೊಳ್ಳುತ್ತಿವೆ.
ಆರೋಗ್ಯದ ಗುಟ್ಟು
ಶಾರ್ಟ್ ಕಟ್ ಗಳು ಒಂದಿಲ್ಲಒಂದು ದಿನ ನಮ್ಮ ದೇಹಗಳನ್ನೇ ಬಲಿ ಪಡೆಯಬಹುದು. ಆದರೆ ನಿಜವಾದ ಆರೋಗ್ಯ ನಿಧಾನವಾಗಿ ಬೆಳೆಯುತ್ತದೆ. ಸಮರ್ಪಕ ನಿದ್ರೆ, ಸಮತೋಲಿತ ಆಹಾರ, ಮಾನಸಿಕ ಸಮತೋಲನ, ನಿಯಮಿತ ವ್ಯಾಯಾಮ ಮತ್ತು ಸಹನೆಯ ಮೂಲಕ ಅದು ರೂಪುಗೊಳ್ಳುತ್ತದೆ. ನಿಜವಾದ ಶಕ್ತಿ ಹೃದಯವನ್ನು ರಕ್ಷಿಸುತ್ತದೆ; ಅದನ್ನು ಶಿಕ್ಷಿಸುವುದಿಲ್ಲ. ಬದುಕನ್ನು ದೀರ್ಘವಾಗಿಸುತ್ತದೆ; ಕಡಿಮೆ ಮಾಡುವುದಲ್ಲ. ಆರೋಗ್ಯಕರವಾಗಿ, ಬಲಿಷ್ಠವಾಗಿ ಕಾಣಬೇಕೆಂಬ ಆಸೆಯಲ್ಲಿತಪ್ಪೇನಿಲ್ಲ. ವ್ಯಾಯಾಮವು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಅಗತ್ಯ.

