ಸುಮೋಟೊ ಎಂಬುದು ಲ್ಯಾಟಿನ್ ಭಾಷೆಯ ಕಾನೂನು ಪದ. ‘ಸ್ವಯಂ ಪ್ರೇರಿತ’ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು
ಅಧಿಕೃತವಾಗಿ ದೂರು ಅಥವಾ ಅರ್ಜಿ ಸಲ್ಲಿಸದಿದ್ದರೂ, ನ್ಯಾಯಾಲಯ, ಸರಕಾರಿ ನಿಯಂತ್ರಕ ಸಂಸ್ಥೆ ಯಾವುದೇ ಒಂದು ವಿಷಯ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದನ್ನು ಇದು ಸೂಚಿಸುತ್ತದೆ. ಸಾಮಾನ್ಯವಾಗಿ ನೊಂದ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋದ ಬಳಿಕವಷ್ಟೇ ಕಾನೂನು ಪ್ರಕ್ರಿಯೆ ಆರಂಭ ವಾಗುತ್ತದೆ. ಆದರೆ, ಆಡಳಿ
ತಾ ತ್ಮಕ ವಿಳಂಬವನ್ನು ತಪ್ಪಿಸಲು ಮತ್ತು ಘೋರ ಅನ್ಯಾಯಗಳನ್ನು ತಡೆಯಲು ಉನ್ನತ ನ್ಯಾಯಾಲಯ ಗಳು (ಸರ್ವೋಚ್ಚ ನ್ಯಾಯಾಲಯ ಅಥವಾ ಹೈಕೋರ್ಟ್ ) ಈ ವಿಶೇಷ ಅಧಿಕಾರವನ್ನು
ಬಳಸು ತ್ತವೆ. ಮಾಧ್ಯಮ ವರದಿ ಗಳು, ಪತ್ರಗಳು ಅಥವಾ ಸಾರ್ವಜನಿಕ ಸಮಸ್ಯೆಗಳ ಆಧಾರದ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ಅಥವಾ ವ್ಯವಸ್ಥಿತ ವೈಫಲ್ಯ ಕಂಡುಬಂದಾಗ ನ್ಯಾಯಾಧೀಶರು ಈ ಕ್ರಮ ಕೈಗೊಳ್ಳಬಹುದಾಗಿದೆ. ಸಾರ್ವಜನಿಕ ಹಿತಾಸಕ್ತಿ ಕಾಯುವಲ್ಲಿಸುಮೋಟೊ ಪ್ರಮುಖ ಪಾತ್ರ ವಹಿಸುತ್ತದೆ.
ಕೋರ್ಟ್ ಗೆ ಬರಲು ಅಶಕ್ತರಾದ ಶೋಷಿತರ ಪರವಾಗಿ ನ್ಯಾಯಾಲಯವೇ ಧ್ವನಿಯಾಗಲು ಸುಮೋಟೊ ದಾರಿ ಮಾಡಿಕೊಡುತ್ತದೆ.

