ಆಟಟೊ ರರಿವ್ಯä್ಯ

Contributed byvidyarashmi.bhat@timesgroup.com|Vijaya Karnataka

ವಿನ್‌ಫಸ್ಟ್‌ ಕಂಪನಿಯು 'ವಿಎಫ್‌ ಎಂಪಿವಿ-7' ಹೆಸರಿನ ಹೊಸ 7-ಸೀಟರ್‌ ಎಲೆಕ್ಟ್ರಿಕ್‌ ಎಂಪಿವಿ ಕಾರನ್ನು ಪರಿಚಯಿಸಿದೆ. ಈ ಕಾರು 571 ಕಿ.ಮೀ. ದೂರವನ್ನು ಒಂದೇ ಚಾರ್ಜ್‌ನಲ್ಲಿ ಕ್ರಮಿಸುತ್ತದೆ. 30 ನಿಮಿಷಗಳಲ್ಲಿ ಶೇ. 70 ರಷ್ಟು ಚಾರ್ಜ್ ಆಗುವ ಸಾಮರ್ಥ್ಯ ಹೊಂದಿದೆ. ಕಂಪನಿಯು ಉಚಿತ ನಿರ್ವಹಣೆ, ಬ್ಯಾಟರಿ ಮತ್ತು ವಾಹನಕ್ಕೆ ವಾರಂಟಿ ನೀಡುತ್ತಿದೆ. ಆಕರ್ಷಕ ವಿನ್ಯಾಸ, 4 ಏರ್‌ಬ್ಯಾಗ್‌ಗಳೊಂದಿಗೆ 24.49 ಲಕ್ಷ ರೂ. ಎಕ್ಸ್‌ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

winfirst vf mpv 7 hits the market introduction to new ev cars

ಎಂಪಿವಿ ಕಾರುಗಳ ಮಾರುಕಟ್ಟೆಗೆ ಲಗ್ಗೆ ಇಟ್ಟ ವಿನ್ ಫಸ್ಟ್ ಇವಿ

---

ದæೕವರಾಜ್ ಕನಕಪುರ

--

ಇಂದು ಎಲೆಕ್ಟ್ರಿಕಲ್ ವೆಹಿಕಲ್ (ಇವಿ)ಗಳದ್ದೇ ಜಮಾನ. ಬೈಕ್ ಗಳ ನಂತರ ಇವಿ ಕಾರುಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಲೇ ಇದೆ. ಮೊದಲಿಗೆ ಇವಿ ಸಾಮಾನ್ಯ ಕಾರುಗಳಿಂದ ಆರಂಭವಾದ ಮಾಡೆಲ್ ಗಳು ಆನಂತರದಲ್ಲಿಎಸ್ ಯುವಿ ಇದೀಗ ಎಂಪಿವಿವರೆಗೆ ಬೆಳೆದಿದೆ.

ವಿನ್ ಫಸ್ಟ್ ಎಂಬ ಕಾರು ಉತ್ಪಾದನಾ ಕಂಪನಿಯು ಇದೀಗ ‘ವಿಎಫ್ ಎಂಪಿವಿ-7’ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಬಹುಬಳಕೆಯ ವಾಹನ(ಎಂಪಿವಿ) ಆಗಿದ್ದು, ಆರಾಮವಾಗಿ ಏಳು ಮಂದಿ ಪ್ರಯಾಣಿಸಬಹುದಾಗಿದೆ.

ಈ ವಿನ್ ಫಸ್ಟ್ ಕಂಪನಿಯು ಭಾರತಕ್ಕೆ ಪರಿಚಯಿಸುತ್ತಿರುವ ಮೂರನೇ ಕಾರು ಇದಾಗಿದೆ. ಭಾರತದ ಜನಸಂಖ್ಯೆ ಹಾಗೂ ಆಪೇಕ್ಷೆಯನ್ನು ಗುರಿಯಾಗಿಟ್ಟುಕೊಂಡು ತಯಾರಿಸಿದ ಕಾರು ಇದಾಗಿದೆ. ಇದರಲ್ಲಿ60.13 ಕಿ.ಲೋ.ವ್ಯಾಟ್ ಲಿಥೇನಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಲಾಗಿದೆ. ಫುಲ್ ಚಾಜ್ ರ್ ನಲ್ಲಿ571 ಕಿ.ಮೀ. ಸಂಚಾರ ಮಾಡಬಹುದಾಗಿದೆ. ಹೀಗಾಗಿ ದೂರ ಪ್ರಯಾಣದ ವೇಳೆ ಚಾರ್ಜರ್ ಸ್ಟೇಷನ್ ಗಾಗಿ ಹುಡುಕಾಟ ನಡೆಸುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಶೇ.10ರಿಂದ 70 ಬ್ಯಾಟರಿ ಚಾರ್ಚ್ ಕೇವಲ 30 ನಿಮಿಷದಲ್ಲಿಆಗಲಿದೆ. ಹೀಗಾಗಿ ಚಾಜ್ ರ್ ಗಾಗಿ ಹೆಚ್ಚಿನ ಸಮಯ ಕಾಯ್ದು ಕುಳಿತುಕೊಳ್ಳುವ ಕಿರಿ-ಕಿರಿ ಇರುವುದಿಲ್ಲ.

ಮಾಲೀಕರಿಗೆ ಲಾಭ: ಕಂಪನಿಯು ಮೂರು ವರ್ಷಗಳ ಉಚಿತ ನಿರ್ವಹಣೆ, 10 ವರ್ಷಗಳ ಬ್ಯಾಟರಿ ವಾರಂಟಿ, 7 ವರ್ಷಗಳ ವೆಹಿಕಲ್ ವಾರಂಟಿ, 5 ವರ್ಷಗಳ ಸಸ್ಪೆನ್ಷನ್ ವಾರಂಟಿ, 7 ವರ್ಷಗಳ ಕಾರಿನ ಬಣ್ಣದ ವಾರಂಟಿ ಹಾಗೂ 7 ವರ್ಷಗಳ ರೋಡ್ ಸೈಡ್ ಅಸಿಸ್ಟೆನ್ಸ್ ಅನ್ನು ಕಾರಿನ ಮಾಲೀಕರಿಗೆ ನೀಡುತ್ತಿದೆ.

ಕಾರಿನ ಫೀಚರ್ಸ್ : ಇನ್ನೂ ಎಂಪಿವಿ ಎಂದಾಕ್ಷಣ ಕಾರಿನ ಲುಕ್ ಬಗ್ಗೆ ಎಲ್ಲರೂ ಥಿಂಕ್ ಮಾಡುವುದು ಸಹಜ. ಬಹಳ ಸುಂದರವಾಗಿ ಹೆಚ್ಚು ಆಕರ್ಷಕವಾಗಿ ರೂಪಿಸಲಾಗಿದೆ. ‘ವಿ’ ಎಲ್ ಇಡಿ ಲೈಟ್ ನೀಡಲಾಗಿದೆ. ಲಾಂಗ್ ವೀಲ್ ಬೇಸ್ ನೀಡಿರುವುದಿಂದ ಕಾರಿನ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಡ್ಯೂಯಲ್ ಫಂಕ್ಷನ್ ಡಿಎಲ್ ಆರ್ ಎಲ್ ಇಡಿ ಇಂಡಿಕೇಟರ್ ಗಳಿವೆ. ವಿಶಾಲವಾದ ಕಿಟಿಕಿ ನೀಡಿರುವುದರಿಂದ ಪ್ರಯಾಣಿಕರು ರಸ್ತೆ ಬದಿಯ ಸೌಂದರ್ಯವನ್ನು ಕಣ್ಣುತುಂಬಿಕೊಳ್ಳಬಹುದು. ಕಾರಿಗೆ ಸ್ಪೋಟ್ಸ್ ಲುಕ್ ನೀಡುವ ಉದ್ದೇಶದಿಂದ ಸ್ಪಾಯ್ಲರ್ ನೀಡಿದೆ. ಉಳಿದಂತೆ ಇತರೆ ಕಾರಿಗಳಲ್ಲಿಲಭ್ಯವಿರುವ ಸಾಮಾನ್ಯ ಫೀಚರ್ ಗಳು ಇದರಲ್ಲೂಲಭ್ಯವಿದೆ.

ಟೆಲಿಸ್ಕೋಪಿಕ್ ಡಿ-ಕಟ್ ಲೆದರ್ ಹೊಂದಿರುವ ಸ್ಟೇರಿಂಗ್ ನೀಡಿದ್ದು, ಕಾರಿನ ಡ್ರೆತ್ರೖವ್ ಗೆ ಬಹಳ ಅನುಕೂಲವಾಗಲಿದೆ. ಒಳಾಂಗಣ ವಿನ್ಯಾಸಕ್ಕೆ ಹೆಚ್ಚು ಲೆದರ್ ಬಳಕೆ ಮಾಡಲಾಗಿದೆ. 7 ಸೀಟರ್ ಎಂದಾಕ್ಷಣ ಕೊನೆ ಬದಿಯ ಸೀಟು ಮಕ್ಕಳಿಗೆ ವಿನ್ಯಾಸ ಮಾಡಲಾಗಿರುತ್ತದೆ ಎಂಬ ಕಲ್ಪನೆ ಎಲ್ಲರಲ್ಲೂಇದೆ. ಆದರೆ, ಇಲ್ಲಿಮಧ್ಯವಯಸ್ಕರು ಸಹ ಆರಾಮಾಗಿ ಕುಳಿತುಕೊಳ್ಳುವ ರೀತಿಯಲ್ಲಿವಿನ್ಯಾಸಗೊಳಿಸಲಾಗಿದೆ. 126 ಲೀಟರ್ ಗಳ ಬೂಟ್ ಸ್ಪೇಸ್ ಅನ್ನು ನೀಡಲಾಗಿದೆ. 25.65 ಸೆಂ.ಮೀ. ಇನ್ಫೋಟೈನ್ಮೆಂಟ್ ಸ್ಕ್ರೀನ್ ನೀಡಲಾಗಿದೆ. ಪ್ರತಿ ಡೋರ್ ನಲ್ಲಿಸ್ಪೀಕರ್ ನೀಡಲಾಗಿದೆ. ಸುರಕ್ಷತೆಗಾಗಿ ನಾಲ್ಕು ಏರ್ ಬ್ಯಾಗ್ ಗಳನ್ನು ನೀಡಲಾಗಿದೆ. ಸದ್ಯ ಎಕ್ಸ್ ಶೋರೂಂ ಬೆಲೆ 24.49 ಲಕ್ಷ ರೂ. ಇದೆ.

--

ಹೈಲೈಟ್ಸ್

- 571 ಕಿ.ಮೀ.ರೇಂಜ್ ಮೈಲೇಜ್

- 7 ಸೀಟರ್ ಕಾರು

- 4 ಏರ್ ಬ್ಯಾಗ್

- ಬೆಲೆ 24.49 ಲಕ್ಷ ರೂ.