ಹಳಿಯಾಳ ಇಂದೇ

Contributed bymanjunatha012@yahoo.co.in|Vijaya Karnataka

ಹಳಿಯಾಳದ ಪ್ರಾಕ್ಸೀನ್‌ ಟೆಕ್‌ ಕಂಪನಿಗೆ ಕೆಎಲ್‌ಎಸ್‌ ವಿಡಿಐಟಿ ಎಂಜಿನಿಯರಿಂಗ್‌ ಕಾಲೇಜಿನ 4ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಭೇಟಿ ನೀಡಿದರು. ಐಟಿ, ಬಿಟಿ ಕ್ಷೇತ್ರದ ಸೇವೆಗಳ ಬಗ್ಗೆ ಮಾಹಿತಿ ಪಡೆದರು. ಕಂಪನಿಯು ಜಾಗತಿಕ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ತಿಳಿದುಕೊಂಡರು. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಯುವಕರಿಗೆ ಉದ್ಯೋಗ ನೀಡುತ್ತಿರುವ ಬಗ್ಗೆ ತಿಳಿದರು. ಮಾಲೀಕರು ಕಂಪನಿಯ ಕಾರ್ಯವೈಖರಿ ವಿವರಿಸಿದರು.

engineering students visit proxeen tech company in haliyala

ಪ್ರಾಕ್ಸೀನ್ ಟೆಕ್ ಕಂಪನಿಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಭೇಟಿ

ಐಟಿ, ಬಿಟಿ ಕ್ಷೇತ್ರದ ಸೇವೆ ಮಾಹಿತಿ

ವಿಕ ಸುದ್ದಿಲೋಕ ಹಳಿಯಾಳ

ಪಟ್ಟಣದಲ್ಲಿಕಳೆದ ಒಂದು ದಶಕದಿಂದ ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿಸೇವೆ ಸಲ್ಲಿಸುತ್ತಿರುವ ಪ್ರಾಕ್ಸೀನ್ ಟೆಕ್ ಕಂಪನಿಯ ಕಚೇರಿಗೆ ಇಲ್ಲಿಯ ಕೆಎಲ್ ಎಸ್ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿನ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಸೋಮವಾರ ಭೇಟಿ ನೀಡಿ ತಂತ್ರಜ್ಞಾನ ಮಾಹಿತಿ ಪಡೆದರು.

ಕೈಗಾರಿಕಾ ಅಧ್ಯಯನದ ಭಾಗವಾಗಿ ಪ್ರಾಕ್ಸೀನ್ ಟೆಕ್ ಕಂಪನಿಯ ಕಚೇರಿಗೆ ಭೇಟಿ ನೀಡಿದ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಹಳಿಯಾಳದಂತಹ ಚಿಕ್ಕ ನಗರದಿಂದ ದೂರದ ಅಮೆರಿಕ, ಜಪಾನ್ , ರಷ್ಯಾ, ದಕ್ಷಿಣ ಆಫ್ರಿಕಾ, ಯುರೋಪ್ , ಸೌಧಿ ಅರೇಬಿಯಾ, ಚೀನಾ, ಇಂಗ್ಲೆಂಡ್ ಸೇರಿದಂತೆ ಜಾಗತಿಕ ಮಟ್ಟದ ಮಹಾನಗರಗಳಿಗೆ ಸಾಫ್ಟ್ ವೇರ್ ಮತ್ತು ಮಾಹಿತಿ ಕ್ಷೇತ್ರದ ಸೇವೆ ಸಲ್ಲಿಸುವುದನ್ನು ತಿಳಿದುಕೊಂಡರು.

ದೇಶದ ರಾಜಧಾನಿಗಳಲ್ಲಿರುವ ಸಾಫ್ಟ್ ವೇರ್ ಕೇಂದ್ರಗಳಂತೆಯೇ ಕಾರ್ಯನಿರ್ವಹಿಸುವುದರ ಜೊತೆಗೆ ಜಾಗತಿಕ ಗ್ರಾಹಕರಿಗಾಗಿ ಗುಣಮಟ್ಟದ ಹಾಗೂ ಅತ್ಯಾಧುನಿಕ ಸೇವೆ ನೀಡುತ್ತಿರುವುದರ ಕುರಿತು ಹಾಗೂ ಗ್ರಾಮೀಣ ಸೇರಿದಂತೆ ಪಟ್ಟಣ ಪ್ರದೇಶದ ನೂರಾರು ಯುವ ಜನರಿಗೆ ಉದ್ಯೋಗ ನೀಡುತ್ತಿರುವ ಪ್ರಾಕ್ಸೀನ್ ಟೆಕ್ ಕಂಪನಿಯ ಕುರಿತು ತಿಳಿದುಕೊಂಡರು.

ಪ್ರಾಕ್ಸೀನ್ ಟೆಕ್ ಕಂಪನಿಯ ಮಾಲೀಕರು ಮತ್ತು ಉದ್ಯಮಿಗಳಾದ ನಾರಾಯಣ ಠೊಸೂರ ಅವರು ವಿದ್ಯಾರ್ಥಿಗಳಿಗೆ ಕಂಪನಿಯ ಕುರಿತು ಮಾಹಿತಿ ನೀಡಿ, ಅಮೆರಿಕದಲ್ಲಿಯೂ ಕಚೇರಿ ಹೊಂದಿದೆ. ಜಾಗತಿಕ ಕೆಲ ಕಂಪನಿಗಳೊಂದಿಗೆ ಕೈಜೋಡಿಸಿದ್ದು, ವಿದೇಶಿ ಮತ್ತು ದೇಶಿಯ ಕಂಪನಿಗಳು ಹಾಗೂ ಗ್ರಾಹಕರೊಂದಿಗೆ ವ್ಯವಹಾರ, ತಂತ್ರಜ್ಞಾನ ಕೌಶಲ ಸೇರಿದಂತೆ ಅತ್ಯುತ್ತಮ ಸೇವೆ ನೀಡುವುದರ ಕುರಿತು ಮಾಹಿತಿ ನೀಡಿದರು. ಪ್ರಾಕ್ಸೀನ್ ಟೀಮ್ ಸದಸ್ಯರಾದ ರಾಘವೇಂದ್ರ ಸಾಂಬ್ರೇಕರ, ಕಲ್ಲಯ್ಯಾ ಪೂಜಾರಿ, ಮಣಿಕಂಠ ಸಾಂಬ್ರಾಣಿ, ನಯನಾ ಗೌಡಪ್ಪನವರ, ಅವಿನಾಶ ಘೋಟ್ನೆಕರ,ವಸುಂಧರಾ ನಾಯ್ಕ ಅವರು ಪ್ರಾಯೋಗಿಕ ವಿಚಾರಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಗೌರಿ ಎಸ್ .ಎಸ್ ., ನಿರ್ಮಲಾ ಜಿ., ಸಂತೋಷ ಎಸ್ . ಮತ್ತು ರಜತ್ ಇದ್ದರು.

25 ಎಚ್ ಎಲ್ ವೈ 1

ಹಳಿಯಾಳದ ಪ್ರಾಕ್ಸೀನ್ ಟೆಕ್ ಕಂಪನಿಗೆ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡಿದರು.