ಭಾಗವತ ಸಪ್ತಾಹ ಮಂಗಲೋತ್ಸವ

Contributed bymaheshbadiger05@gmail.com|Vijaya Karnataka

ಧಾರವಾಡದ ಸತ್ತೂರಿನಲ್ಲಿ ನಾರಾಯಣ ಪಾರಾಯಣ ಬಳಗವು ಮೊದಲನೇ ಭಾಗವತ ಸಪ್ತಾಹದ ಮಂಗಲೋತ್ಸವವನ್ನು ಆಯೋಜಿಸಿತ್ತು. ಹಿರಿಯ ವಿದ್ವಾಂಸ ಡಾ. ಪಂ. ನಾರಾಯಣ ಆಚಾರ್ಯ ಧೂಳ್ಕೇಡ ಅವರು ಶ್ರೀಮದ್‌ ಭಾಗವತ ಗ್ರಂಥದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಅಧಿಕ ಮಾಸದಲ್ಲಿ ಈ ಗ್ರಂಥದ ಪಠಣ, ಪಾರಾಯಣ, ಶ್ರವಣಗಳಿಗೆ ಮಹತ್ತರವಾದ ಫಲವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ತೋತ್ರ ಪಾರಾಯಣ ಮತ್ತು ದಾಸವಾಣಿ ಕಾರ್ಯಕ್ರಮಗಳು ನಡೆದವು.

bhagavata saptaaha mangalotsava importance of scriptures of the divine

25ಮಹೇಶ2

ಭಾಗವತ ಸಪ್ತಾಹ ಮಂಗಲೋತ್ಸವ

ವಿಕ ಸುದ್ದಿಲೋಕ ಧಾರವಾಡ

ಭಗವಂತನಿಗೆ ಸಂಬಂಧಿಸಿದ ವಿಷಯಗಳನ್ನು ಸಮಗ್ರವಾಗಿ ಸುಂದರವಾಗಿ ನಿರೂಪಿಸುವ ಗ್ರಂಥ ಶ್ರೀಮದ್ ಭಾಗವತ ಎಂದು ಹಿರಿಯ ವಿದ್ವಾಂಸ ಡಾ. ಪಂ. ನಾರಾಯಣ ಆಚಾರ್ಯ ಧೂಳ್ಕೇಡ ಹೇಳಿದರು.

ನಗರದ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿಜರುಗಿದ ಮೊದಲನೇ ಭಾಗವತ ಸಪ್ತಾಹದ ಮಂಗಲೋತ್ಸವದಲ್ಲಿಮಾತನಾಡಿದರು.

ಶ್ರೀಕೃಷ್ಣನ ಪ್ರತಿಮಾ ರೂಪ, ಪ್ರಥಮ, ದ್ವಿತೀಯ ಸ್ಕಂದಗಳು ಭಗವಂತನ ಚರಣಗಳು, ಮೂರು ನಾಲ್ಕನೇ ಸ್ಕಂದಗಳು ತೊಡೆಗಳಿದ್ದಂತೆ, ಐದನೇ ಸ್ಕಂದ ಅವನ ನಾಭಿ, ಆರನೇ ಕಂದ ಹೃದಯ, 7,8ನೇ ಸ್ಕಂದಗಳು ಅವನ ಎರಡು ಬಾಹುಗಳು, 9ನೇ ಸ್ಕಂದ ಅವನ ಕಂಠ, 10ನೇ ಸ್ಕಂದ ಮುಖ, 11ನೇ ಸ್ಕಂದ ಹಣೆ, 12ನೇ ಸ್ಕಂದ ಶಿಖೆ ಎಂದು ಹೇಳಲ್ಪಟ್ಟಿದೆ ಎಂದರು.

ಅಧಿಕ ಮಾಸದಲ್ಲಿಈ ಗ್ರಂಥದ ಪಠಣ, ಪಾರಾಯಣ, ಶ್ರವಣಗಳಿಗೆ ಮಹತ್ತರವಾದ ಫಲವಿದೆ ಎಂದು ಮಾಸ ಮಹಾತ್ಮೆಯಲ್ಲಿಹೇಳಲಾಗಿದೆ. ಈ ಗ್ರಂಥದ ಶ್ರವಣದಿಂದ ನಮ್ಮ ಬದುಕಿನ ಮಹಾಭಾಗ್ಯ ತೆರೆಯುತ್ತದೆ ಎಂದರು.

ಕಾರ್ಯಕ್ರಮದ ಪೂರ್ವದಲ್ಲಿಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಸ್ತೋತ್ರ ಪಾರಾಯಣ ಮತ್ತು ಶ್ರೀ ಪಾಂಡುರಂಗ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು.

ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಶ್ರೀನಿವಾಸ ಪಟ್ಟಣಕೋಡಿ, ಎಲ್ .ವಿ. ಜೋಶಿ, ಡಾ. ರವಿ ದುಮ್ಮವಾಡ, ಡಾ. ಗಿರೀಶ ಕುಲಕರ್ಣಿ, ಧೀರೇಂದ್ರ ತಂಗೋಡ, ಪ್ರಕಾಶ ದೇಸಾಯಿ, ಪ್ರಶಾಂತ ದೇಶಪಾಂಡೆ, ಸಂಜೀವ ಜೋಶಿ, ವಿಠ್ಠಲ ಅಂಬೇಕರ, ಆನಂದ ದೇಶಪಾಂಡೆ, ಲಕ್ಷ್ಮೇಶ್ವರ ಬಹದ್ದೂರ್ ದೇಸಾಯಿ, ಗುರುನಾಥ ಸರ್ದೇಶ್ಮುಖ ಇತರರು ಇದ್ದರು.

ಫೋಟೊ: 25ಮಹೇಶ2

ಧಾರವಾಡ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿಮೊದಲನೇ ಭಾಗವತ ಸಪ್ತಾಹದ ಮಂಗಲೋತ್ಸವದಲ್ಲಿಕಾರ್ಯಕ್ರಮ ಜರುಗಿತು.