ವಿಕ ಸುದ್ದಿಲೋಕ ಕೋಲಾರ
ಕಾಲೇಜು ಎಂಬುದು ಗ್ರಾಮ ದೇವತೆಯ ತೇರು ಇದ್ದಂತೆ. ಆ ತೇರಿನ ಹಗ್ಗವನ್ನು ಒಟ್ಟಾಗಿ ಗಟ್ಟಿಯಾಗಿ ಹಿಡಿದು ಎಳೆದಾಗ, ಅದು ಇಡೀ ಊರೆಲ್ಲಾಮೆರವಣಿಗೆ ಮುಗಿಸಿ ಕೊನೆಗೆ ಹೇಗೆ ಅದೇ ಮೂಲ ಜಾಗಕ್ಕೆ ಬಂದು ನಿಲ್ಲುತ್ತದೆಯೋ, ಹಾಗೆಯೇ ವಿದ್ಯಾರ್ಥಿಗಳು ವಿದ್ಯೆ ಎನ್ನುವ ತೇರಿನ ಹಗ್ಗವನ್ನು ಮಧ್ಯದಲ್ಲಿಬಿಡದೇ ಅಂದುಕೊಂಡ ಗುರಿ ಮುಟ್ಟುವ ತನಕ ನಿಲ್ಲಬಾರದು ಎಂದು ಶಾಸಕ ಕೊತ್ತೂರು ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿಸೋಮವಾರ ಹಮ್ಮಿಕೊಂಡಿದ್ದ ಬಾಲಕರ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪುಸ್ತಕ ತಾಯಿ ಪೆನ್ನು ತಂದೆ, ಹೃದಯ ಗುರುಗಳು ಎನ್ನುವ ಧ್ಯೇಯವನ್ನಿಟ್ಟುಕೊಂಡಾಗ ಮಾತ್ರ ಯಶಸ್ಸಿ ಸಾಧ್ಯ. ಭಾರತದ ದೇಶದಲ್ಲಿವಿದ್ಯೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರೇ ಮಾರ್ಗದರ್ಶಕರು. ಅವರಂತೆ 32 ಡಿಗ್ರಿ ಮಾಡಲು ಸಾಧ್ಯವಾಗದಿದ್ದರೂ ಕನಿಷ್ಠ ಒಂದು ಅಥವಾ ಎರಡು ಪದವಿಯನ್ನು ಮಾಡಿ ಎಂದು ತಿಳಿಸಿದರು.
ವಿದ್ಯಾರ್ಥಿಯಾಗಿದ್ದ ಕಾಲದಲ್ಲಿಕಷ್ಟಗಳು ಏನು ಅನ್ನೋದನ್ನು ಅನುಭವಿಸಿದ್ದೇನೆ. ಈಗ ನಾನು ದುಡ್ಡು ಮಾಡಿರಬಹುದು, ರಾಜಕೀಯದಲ್ಲಿಹೆಸರು ಮಾಡಿರಬಹುದು. ಆದರೆ ದುಡ್ಡು ಎಲ್ಲಾಕಡೆ ಕೆಲಸ ಮಾಡೋದಿಲ್ಲ. ಗೌರವ ತುಂಬಾ ಮುಖ್ಯವಾಗುತ್ತದೆ ವಿದ್ಯೆಯೆಂಬ ಶಿಖರವನ್ನೆರಿದಾಗ ಮಾತ್ರ ಗೌರವ ತಾನಾಗಿಯೇ ಸಿಗುತ್ತದೆ ಎಂದರು.
ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗೆ ಸೀಮಿತವಾಗದೆ, ಉತ್ತಮ ಸಂಸ್ಕಾರ ಮತ್ತು ಜ್ಞಾನವನ್ನು ಮೈಗೂಡಿಸಿಕೊಂಡು ದೇಶದ ಜವಾಬ್ದಾರಿಯುತ ಪ್ರಜೆಗಳಾಗಬೇಕು. ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಮಾದರಿಯಾದ ನೂತನ ಕಟ್ಟಡ ಕಾಮಗಾರಿಯನ್ನು ವಿನ್ಯಾಸ ಮಾಡಲಾಗಿದ್ದು ಎಂಟು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಯನ್ನು ನಾವೇ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ ರವಿ ಮಾತನಾಡಿ, ಕೋಲಾರ ಪ್ರಥಮ ದರ್ಜೇ ಕಾಲೇಜಿನಲ್ಲಿಅನೇಕರು ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನದಲ್ಲಿಇದ್ದಾರೆ. ಈ ಕಾಲೇಜಿಗೆ ಎಂಟು ದಶಕಗಳ ಇತಿಹಾಸವಿದೆ ಬೆಂಗಳೂರು ವಿವಿ ಏಷ್ಯಾದಲ್ಲೆಸಾಕಷ್ಟು ಪ್ರಖ್ಯಾತಿಯನ್ನ ಹೊಂದಿದೆ. ಜಾಗತಿಕ ಮಟ್ಟದಲ್ಲಿಹೆಸರು ಮಾಡಿದೆ ಎಂದರೆ ಅದಕ್ಕೆ ಕೋಲಾರ ಪ್ರಥಮ ದರ್ಜೆ ಕಾಲೇಜಿನಲ್ಲಿಪ್ರತಿಭಾನ್ವಿತ ವಿದ್ಯಾರ್ಥಿಗಳು ಕಾರಣವಾಗಿದ್ದಾರೆ. ವಿವಿಯಲ್ಲಿವಿದ್ಯಾಭ್ಯಾಸ ಮಾಡಲು ಅವಕಾಶ ಸಿಕ್ಕಿದೆ ಕಠಿಣ ಶ್ರಮದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಅದನ್ನು ವಿದ್ಯಾರ್ಥಿಗಳು ಮನಗೊಂಡು ಓದಿನ ಬಗ್ಗೆ ಹಾಗೂ ಗುರಿ ಮುಟ್ಟುವ ಧ್ಯೇಯದೊಂದಿಗೆ ಇದ್ದಾಗ ಯಶಸ್ಸಿನ ಶಿಖರ ಏರಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನಾ ದ್ವೀತಿಯ ವರ್ಷದ ವಿದ್ಯಾರ್ಥಿನಿ ಕೀರ್ತನ ಆರ್ . ಭರತನಾಟ್ಯ ಗಮನ ಸೆಳೆಯಿತು ವಿವಿಧ ವಿಭಾಗಗಳ ಓದಿನಲ್ಲಿಹಾಗೂ ಕ್ರೀಡೆಯಲ್ಲಿಭಾಗಬಹಿಸಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿಎಂಎಎಲ್ಸಿ ಎಂ.ಎಲ್ ಅನಿಲ್ ಕುಮಾರ್ , ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಪ್ರಾಂಶುಪಾಲ ಮುನಿಸ್ವಾಮಪ್ಪ, ಕೋಮುಲ್ ನಿರ್ದೇಶಕರಾದ ಚಂಜಿಮಲೆ ರಮೇಶ್ , ಶಂಷೀರ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಪ್ಸರ್ , ಕುಡಾ ಅಧ್ಯಕ್ಷ ಮಹ್ಮದ್ ಅನೀಫ್ , ಅಂತಾರಾಷ್ಟ್ರೀಯ ದೇಹದಾಢ್ರ್ಯ ಪಟು ಎ.ವಿ.ರವಿ, ಪ್ರಾಧ್ಯಾಪಕರು ಮುಂತಾದವರಿದ್ದರು.
=
ಕೋಟ್
ತಾಳ್ಮೆ, ಕಠಿಣ ಪರಿಶ್ರಮ, ತೆಗೆದುಕೊಳ್ಳುವ ನಿರ್ಧಾರ ಈ ಮೂರನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಗುರಿಯನ್ನು ಇಟ್ಟುಕೊಂಡು ಪ್ರಯತ್ನ ಪಟ್ಟರೆ ನಿಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ.
ಎಂ.ಮಲ್ಲೇಶ್ ಬಾಬು, ಕೋಲಾರ ಸಂಸದ
=
ಫೋಟೋಕ್ಯಾಪ್ಷನ್ : ಕೋಲಾರದ ಟಿ ಚನ್ನಯ್ಯ ರಂಗಮಂದಿರದಲ್ಲಿಸೋಮವಾರ ಹಮ್ಮಿಕೊಂಡಿದ್ದ ಬಾಲಕರ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. (25ಕೆಪಿಎಚ್ 2)

