ನೂತನ ಸೇತುವೆ ನಿರ್ಮಾಣಕ್ಕೆ ಆಗ್ರಹ

Contributed bychnvksnr@gmail.com|Vijaya Karnataka

ಚನ್ನಗಿರಿ ತಾಲೂಕಿನ ಬಸವಾಪುರ ದೇಗರದಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಭದ್ರಾ ನಾಲೆ ಮೇಲ್ಬಾಗದ ಸೇತುವೆ ಕುಸಿಯುತ್ತಿದ್ದು, ಕೂಡಲೇ ಹೊಸ ಸೇತುವೆ ನಿರ್ಮಿಸುವಂತೆ ಆಗ್ರಹಿಸಿದರು. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಹೆದ್ದಾರಿ ತಡೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ರೈತರ ಸಮಸ್ಯೆ ಆಲಿಸಿ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

protest for new bridge construction as old bridge in basavapura collapse

ನೂತನ ಸೇತುವೆ ನಿರ್ಮಾಣಕ್ಕೆ ಆಗ್ರಹ

---

ಚನ್ನಗಿರಿ: ತಾಲೂಕಿನ ಬಸವಾಪುರ ದೇಗರದಹಳ್ಳಿ ಮತ್ತು ಜಮೀನುಗಳಿಗೆ ಸಂಪರ್ಕ ಕಲ್ಪಿಸುವಂತ ಸೇತುವೆ ಕುಸಿದು ಬೀಳುತ್ತಿದ್ದು, ತಕ್ಷಣ ನೂತನ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿ, ಗ್ರಾಮಸ್ಥರು ಸೋಮವಾರ ಭದ್ರಾ ನಾಲೆ ಮೇಲ್ಬಾಗದಲ್ಲಿಪ್ರತಿಭಟನೆ ನಡೆಸಿದರು.

ಈ ವೇಳೆ ರೈತ ಸಂಘದ ಮುಖಂಡ ಬಸವಾಪುರ ರಂಗನಾಥ ನಾಯಕ ಮಾತನಾಡಿ, ನಮ್ಮ ಗ್ರಾಮಗಳು ತಾಲೂಕಿನ ಕೊನೆಯ ಭಾಗದಲ್ಲಿಇರುವಂತ ಗ್ರಾಮಗಳಾಗಿದ್ದು, ಹೆಚ್ಚು ಕೃಷಿಕರೇ ಇರುವಂತ ಗ್ರಾಮಗಳಾಗಿವೆ. ಭದ್ರಾ ನಾಲೆ ಈ ಭಾಗದಲ್ಲಿಹಾದು ಹೋಗಿದ್ದು, ನಾಲೆಗೆ ನಿರ್ಮಾಣ ಮಾಡಲಾಗಿರುವ ಸೇತುವೆಯೂ ಕುಸಿಯುತ್ತಿದೆ. ಇದರ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಶಾಸಕರು ಸ್ಥಳಕ್ಕೆ ಆಗಮಿಸುವ ಮೂಲಕ ರೈತರ ಸಮಸ್ಯೆ ಆಲಿಸುವ ಮೂಲಕ ಸೂಕ್ತ ಕ್ರಮಕೈಗೊಳ್ಳಬೇಕು. ಶಾಸಕರು ಸ್ಥಳಕ್ಕೆ ಬಾರದಿದ್ದರೆ ಮಂಗಳವಾರ ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿರೈತ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

25ಸಿಎಚ್ ಎನ್ ಪಿ3

ಚನ್ನಗಿರಿ ತಾಲೂಕಿನ ಬಸವಾಪುರ ದೇಗರದಹಳ್ಳಿ ಮತ್ತು ಜಮೀನುಗಳಿಗೆ ಸಂಪರ್ಕ ಕಲ್ಪಿಸುವಂತ ಸೇತುವೆ ಕುಸಿದು ಬೀಳುತ್ತಿದ್ದು, ತಕ್ಷಣ ನೂತನ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ, ಗ್ರಾಮಸ್ಥರು ಸೋಮವಾರ ಭದ್ರಾ ನಾಲೆ ಮೇಲ್ಬಾಗದಲ್ಲಿಪ್ರತಿಭಟನೆ ನಡೆಸಿದರು.