ನವವಿಲುಗರರಿ

Contributed byvidyarashmi.bhat@timesgroup.com|Vijaya Karnataka

ಸ್ಮಿತಾ ರಾಘವೇಂದ್ರ ಕಲ್ಲೇಶ್ವರ ತನ್ನ ಕೆಲಸದ ಒತ್ತಡದಲ್ಲಿ ತಾಯಿಯನ್ನು ಮರೆತಿದ್ದಳು. ತಾಯಿಯ ವಿಡಿಯೋ ಕರೆಯಿಂದಾಗಿ ಅವಳ ಬಾಲ್ಯದ ನೆನಪುಗಳು ಮರುಕಳಿಸಿದವು. ತಾಯಿಯ ಅಕ್ಕರೆ ಮತ್ತು ಪ್ರೀತಿ ಅವಳ ನೋವುಗಳನ್ನು ಮರೆಸಿತು. ಈ ಸಂಭಾಷಣೆ ಭಾವ-ಬದುಕಿನ ಅಂತರವನ್ನು ಕಡಿಮೆ ಮಾಡಿತು. ತಾಯಿಯ ಮಡಿಲಿನಂತೆ ಅವಳ ಹೃದಯಕ್ಕೆ ನೆಮ್ಮದಿ ದೊರಕಿತು.

motherly video call prioritizing connection with mom

ಒಂದು ವಿಡಿಯೋ ಕಾಲ್

---

ಸ್ಮಿತಾ ರಾಘವೇಂದ್ರ ಕಲ್ಲೇಶ್ವರ

----

ಅವನಿ ನಗರದ ಅಪಾರ್ಟ್ ಮೆಂಟ್ ನ ಬಾಲ್ಕನಿಯಲ್ಲಿಕುಳಿತಿದ್ದಳು. ಕೈಯಲ್ಲಿಕಾಫಿ ಕಪ್ , ಆದರೆ ರುಚಿಯೇ ಇರಲಿಲ್ಲ. ಕಚೇರಿಯ ಇಮೇಲ್ ಗಳ ಶಬ್ದ, ಡೆಡ್ ಲೈನ್ ಗಳ ಒತ್ತಡ, ಫೋನ್ ನಲ್ಲಿಮರುಮರು ಬೆಳಗುವ ನೋಟಿಫಿಕೇಶನ್ ಗಳು ಎಲ್ಲವೂ ಅವಳ ಮನಸ್ಸನ್ನು ಹಿಂಡುತ್ತಿದ್ದವು. ಏನನ್ನೂ ಯೋಚಿಸಲು ಸಣ್ಣ ಸಮಯ ಕೂಡ ಅವಳಿಗಾಗಿ ಇರಲಿಲ್ಲ. ಇನ್ನೆಷ್ಟು ದಿನ ಈ ಬದುಕಿನ ಯುದ್ಧ, ಯಾಕೋ ಮನದ ಮೂಲೆಯಲ್ಲಿಎಲ್ಲವೂ ಸಾಕು ಅನ್ನಿಸಲು ಶುರುವಾಗಿತ್ತು.

ಅದೇ ವೇಳೆ, ಮೊಬೈಲ್ ಬೆಳಕಾಯಿತು. ಅಮ್ಮನ ಪಟ, ‘ಅರೆ, ಅಮ್ಮ ವಿಡಿಯೋ ಕಾಲ್ ಮಾಡ್ತಿದ್ದಾಳೆ’, ಅಮ್ಮ ಕೊನೆಗೂ ಕಲಿತಳು ವಿಡಿಯೋ ಕಾಲ್ ಮಾಡೋಕೆ ಎಂದು ಅವಳ ಮುಖದಲ್ಲಿನಗು ಅರಳಿತು. ಫೋನ್ ಎತ್ತುತ್ತಿದ್ದಂತೆಯೇ ಅಮ್ಮನ ಧ್ವನಿ. ಪರದೆಯ ಮೇಲೆ ಮೂಡಿದ ಮುಖ, ಅವಳೊಳಗಿನ ನೋವುಗಳಲ್ಲಾಜ್ರರನೇ ಇಳಿಯುವಂತೆ ಮಾಡಿತು. ಕೆಲಸದ ಒತ್ತಡದಲ್ಲಿಅಮ್ಮನನ್ನು ನಾನು ಮರೆತೇ ಬಿಟ್ಟಿದ್ದೇನ್ನಲ್ಲಅನ್ನಿಸಿ, ‘ಅಮ್ಮಾ’ ಎಂದು ಗಿಲ್ಟಿ ಭಾವದಲ್ಲಿಕರೆದಳು.

ಹಿನ್ನೆಲೆಯಲ್ಲಿಕಾಣುತ್ತಿದ್ದ ಅಮ್ಮನ ಅಡುಗೆಮನೆಯ ಮಾಸಿದ ಗೋಡೆಯ ಗೀರುಗಳು, ಅವಳು ಕುಡಿಯುತ್ತಿದ್ದ ಹಾಲಿನ ಲೋಟ, ಅದೇ ಸಕ್ಕರೆಯ ಡಬ್ಬ, ಅಮ್ಮನಿಗೆ ಎಷ್ಟು ಸಾರಿ ಹೇಳಿದರೂ ಬದಲಾಯಿಸದ, ಬಾಗಿಲಿಗೆ ಇಳಿಬಿಟ್ಟ ಅವಳೇ ಕಸೂತಿ ಮಾಡಿದ ಪರದೆ. ಅವಳ ಬಾಲ್ಯವನ್ನು ಮತ್ತು ಅಮ್ಮನ ಅದೇ ಜತನವಾದ ತಾಜಾತನದ ಪ್ರೀತಿಯನ್ನು ನೆನಪಿಸುತ್ತಿತ್ತು. ಅಲ್ಲೆಲ್ಲೋ ಕೂತು ನಮಗಾಗಿ ಕಾಯುವ ಜೀವವನ್ನು ಎಷ್ಟು ಸಲೀಸಾಗಿ ಮರೆತೇ ಬಿಡುತ್ತೀವಲ್ಲಛೀ ಬದುಕೇ ಅನ್ನಿಸಿಬಿಟ್ಟಿತು ಒಮ್ಮೆ.

ಅಮ್ಮನ ಲವಲವಿಕೆಯ ಮಾತುಗಳನ್ನು ಕೇಳಲು, ‘ಅಮ್ಮ, ಹಬ್ಬಕ್ಕೆ ಏನೆಲ್ಲಾಮಾಡಿದ್ದಿ’ ಕೇಳತೊಡಗಿದಳು. ಒಂದೊಂದೇ ಡಬ್ಬದ ಮುಚ್ಚಳ ತೆಗೆದು ತನಗಾಗಿ ಕಾಯುತ್ತಿರುವ ತಿಂಡಿಗಳ ಪಟ್ಟಿ ಕೊಟ್ಟಳು ಅಮ್ಮ.

ದಣಿದಿದ್ದರೂ ದಯೆಯಿಂದ ಹೊಳೆಯುತ್ತಿದ್ದ ಅವಳ ಕಣ್ಣುಗಳು. ನೆರಿಗೆ ಬಿದ್ದರೂ ಪ್ರೀತಿ ಅಪುತ್ರ್ಪಗೆಗೆ ಕಾಯುತ್ತಿರುವ ಅವಳ ಕೈಗಳು.

‘ಊಟ ಮಾಡಿದಿಯಾ? ಹೋಟೆಲ್ ಊಟ ಮಾಡ್ಬೇಡ ಮಗಳೇ. ಅಲ್ಲಿಏನೇನೋ ಹಾಳು ಮೂಳು ಹಾಕ್ತಾರಂತೆ. ಬರೀ ಅಂಥವೇ ವಿಡಿಯೊಗಳು ಬರ್ತಾವೆ ಮೊಬೈಲ್ ನಾಗೆ. ನಾನೂ ನೋಡೋಕೆ ಕಲ್ತಿದ್ದೀನಿ ಈಗ. ಹೊರಗೆ ಮಾತ್ರ ತಿನ್ನೋಕೆ ಹೋಗ್ಬೇಡ ಹಮ್ , ಅರೋಗ್ಯ ಕೆಡ್ತದೆ’ ಸಣ್ಣಗೆ ಗದರಿದಳು.

ಒಂದೇ ಸಮನೆ ಸುರಿಯುತ್ತಿದ್ದ ಅಮ್ಮನ ಮಾತುಗಳಿಗೆ ರೇಗುತ್ತಿದ್ದ ಅವನಿಗೆ, ಇಂದು ಅವæೕ ಮಾತುಗಳು ಅಕ್ಕರೆಯ ಮಳೆಯಂತೆ ತೋರುತ್ತಿದ್ದವು.

‘ಹೌದು ಅಮ್ಮ, ನಾನೇ ಮಾಡ್ತೀನಿ. ಹಾಳು ಮೂಳು ಏನೂ ತಿನ್ನಲ್ಲ. ನೀನೇನೂ ಯೋಚನೆ ಮಾಡ್ಬೇಡ’ ಎಂದಳು ಅವನಿ. ಅದರೆ ನಿಜವಾಗಿ ಆ ದಿನವೂ ಅವಳ ಊಟ ಪ್ಲಾಸ್ಟಿಕ್ ಬಾಕ್ಸಿನ ತಣ್ಣನೆಯ ಅನ್ನ ಟೇಬಲ್ಲಿನ ಮೇಲೆಯೇ ಇತ್ತು.

ಮಾತು ಮುಂದುವರಿದæೕ ಇತ್ತು. ಅವನಿ ಕಂಪ್ಯೂಟರ್ ಪರದೆಯಮೇಲೆ ಕಣ್ಣಿಟ್ಟು ಅಮ್ಮನಿಗೆ ಉತ್ತರಿಸುತ್ತಿದ್ದಳು.

ಸಂಭಾಷಣೆ ಮುಗಿಯುವ ಹೊತ್ತಿಗೆ ಅಮ್ಮ, ‘ಮಗಳೇ ಈ ಅಮ್ಮನ್ನ ಕಣ್ಣಲ್ಲಿಕಣ್ಣಿಟ್ಟು ನೋಡೋಕು ಪುರುಸೊತ್ತು ಇಲ್ದಂಗೆ ಕೆಲಸ ಮಾಡ್ಬೇಡವೆ’ ಎಂದು ಚಿಕ್ಕಂದಿನಲ್ಲಿಎಳೆದು ಮಡಿಲಿಗೆ ಎಳೆದು ಕೊಂಡಂತೆ, ‘ಬಾ ಸ್ವಲ್ಪ ಮಲ್ಕೋ’ ಎನ್ನುತ್ತಾ ಚಾಚಿದ ತನ್ನ ಮಡಿಲಿಗೆ ಸೆರಗು ಹಾಸಿ ತೋರಿಸಿ ಮೊಬೈಲ್ ಅನ್ನು ಮಡಿಲ ಮೇಲಿಟ್ಟು ಸವರುತ್ತಾ ತಲುಪಿತಾ ಎಂದು ಮುಗ್ಧವಾಗಿ ನಕ್ಕಳು.

ಅವನಿಗೆ ತಡೆಯಲಾರದಷ್ಟು ಕಣ್ಣೀರು ತುಂಬಿತು. ಈಗಲೂ ಕಾಪಿಟ್ಟುಕೊಂಡ ಅಮ್ಮನ ಅದೇ ಅಕ್ಕರೆ. ತಾನು ಬೆಳೆದಂತೆ ಕಳೆದುಕೊಂಡ ಬಾಂಧವ್ಯ ಅವಳನ್ನು ಮೌನವಾಗಿಸಿತು. ಅವನಿ ಕೂಡ ತನ್ನ ತಲೆಯನ್ನು ಪರದೆಗೆ ಹಚ್ಚಿ, ‘ಹೌದು ಅಮ್ಮ, ಹಾಯಾಗಿ ಬಂದು ತಲುಪಿತು’ ಅಂದಳು. ಆ ಕ್ಷಣದಲ್ಲಿ, ಭಾವ-ಬದುಕಿನ ಕಿಲೋಮೀಟರ್ ಗಳ ಅಂತರ ಅಳಿದುಹೋಯಿತು. ನೋವು- ಗದ್ದಲ-ಗಾಢತೆಗಳ ನಡುವೆ, ಪರದೆ ಸಣ್ಣ ಕಿಟಕಿಯಾಗಿ ತಾಯಿಯ ಮಡಿಲನ್ನು ಅವಳ ಹೃದಯದೊಳಗೆ ಬಿಟ್ಟಿತು.

ಅವನಿ ಅಡುಗೆ ಮಾಡಿಕೊಳ್ಳಲು ಎದ್ದು ಹೋದಳು.