ತ್ಯಾಜ್ಯ ವಿಂಗಡಣೆ ಜಾಗೃತಿ
ವಿಕ ಸುದ್ದಿಲೋಕ ಸಂಡೂರು
‘‘ತ್ಯಾಜ್ಯವನ್ನು 4 ವಿಭಾಗಗಳಲ್ಲಿಮೂಲದಲ್ಲಿಯೇ ವಿಂಗಡಿಸುವ ಮೂಲಕ ಸಾರ್ವಜನಿಕರು ಕಸ ಸಂಗ್ರಹ ವಾಹನಕ್ಕೆ ನೀಡಬೇಕು,’’ ಎಂದು ಪುರಸಭೆ ಪರಿಸರ ಎಂಜಿನಿಯರ್ ಅನ್ನಪೂರ್ಣ ಹೇಳಿದರು.
ಪಟ್ಟಣದ ಪುರಸಭೆ ಬಸ್ ನಿಲ್ದಾಣದಲ್ಲಿಪುರಸಭೆಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿಮಾತನಾಡಿ,‘‘ಪಟ್ಟಣದ ಪ್ರತಿ ವಾರ್ಡ್ ನಲ್ಲಿದಿನವೂ ಕಸ ಸಂಗ್ರಹ ವಾಹನಗಳು ಬರುತ್ತವೆ. ಈ ವಾಹನಗಳಿಗೆ ತ್ಯಾಜ್ಯವನ್ನು 4 ಭಾಗದಲ್ಲಿವಿಂಗಡಿಸಿ ನೀಡಬೇಕು,’’ ಎಂದರು.
ಪುರಸಭೆಯ ಆರೋಗ್ಯ ನಿರೀಕ್ಷಕರು, ಸ್ವಚ್ಛತಾ ಮೇಲ್ವಿಚಾರಕರು, ಸಮುದಾಯ ಸಂಘಟಕರು, ಸಾರ್ವಜನಿಕರು ಇದ್ದರು.
* ಬಿಎಲ್ ವೈ 29 ಎಸ್ಡಿಆರ್ 2:
ಸಂಡೂರಿನ ಪುರಸಭೆ ಬಸ್ ನಿಲ್ದಾಣದಲ್ಲಿಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ನಡೆಯಿತು. ಪರಿಸರ ಎಂಜಿನಿಯರ್ ಅನ್ನಪೂರ್ಣ ಇದ್ದರು.

