ಅಧಿಕ ಮಾಸ : ಕಾಲಮಾನದ ಸರಿದೂಗಿಸುವಿಕೆ
--------
*ನಾರಾಯಣ ಯಾಜಿ
-------
ಅಧಿಕ ಮಾಸವನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ? ಈ ಕೌತುಕದ ಕುರಿತ ವೈಜ್ಞಾನಿಕ ಮಾಹಿತಿ ಇಲ್ಲಿದೆ.
....
ಭಾರತೀಯ ಪಂಚಾಂಗದ ಪ್ರಕಾರ ಈ ತಿಂಗಳು ಅಧಿಕ ಜ್ಯೇಷ್ಠ ಮಾಸ. ಗ್ರೆಗೋರಿಯನ್ ಕ್ಯಾಲೆಂಡರ್ ನ ಪ್ರಕಾರ ನಾಲ್ಕು ವರ್ಷಗಳಿಗೊಮ್ಮೆ ಬರುವ ಔಛಿap ್ಗಛಿa್ಟ ಕುರಿತು ಎಲ್ಲರಿಗೂ ಅರಿವಿದೆ. ಆದರೆ ಪ್ರಾಚೀನ ಭಾರತೀಯರ ಖಗೋಲ ಜ್ಞಾನಕ್ಕೆ ಸಾಕ್ಷಿಯಾಗಿರುವ ಅಧಿಕ ಮಾಸದ ಕುರಿತು ಅಷ್ಟಾಗಿ ತಿಳಿದಿಲ್ಲ. ಕ್ಯಾಲೆಂಡರಿನಲ್ಲಿಇಸವಿಗೆ 4ರಿಂದ ಭಾಗಿಸಿದಾಗ ಶೇಷವಿಲ್ಲದ ವರ್ಷಗಳ ಇಸವಿಯ ಫೆಬ್ರವರಿ ತಿಂಗಳಲ್ಲಿಇಪ್ಪತ್ತೊಂಬತ್ತು ದಿನಗಳು ಬರುತ್ತದೆ. ಆದರೆ ಹಿಂದೂ ಪಂಚಾಂಗದ ಪ್ರಕಾರ ಬರುವ ಅಧಿಕ ಮಾಸಕ್ಕೆ ನಿರ್ದಿಷ್ಟ ತಿಂಗಳೆಂದೇನೂ ಇಲ್ಲ. ಈ ಕೌತುಕದ ಹಿಂದಿರುವುದು ನಿಖರವಾದ ಖಗೋಲ ಜ್ಞಾನವೆನ್ನುವುದು ಹೆಚ್ಚಿನವರಿಗೆ ಅರಿವಿಲ್ಲ. ಗ್ರಹಗಳ ಚಲನೆ ಅದರ ವಕ್ರಗತಿಯನ್ನು ಮತ್ತು ಕಣ್ಣಿಗೆ ಕಾಣುವ ಗ್ರಹಣಗಳ ಅವಧಿಯನ್ನು ನಿಖರವಾಗಿ ಲೆಕ್ಕ ಹಾಕಿದ ನಮ್ಮ ಸನಾತನಿಗಳಿಗೆ ಪಂಚಾಂಗವೆಂದರೆ ಮೂಗು ಮುಚ್ಚಿ ಕುಳಿತು ದೇವರ ಧ್ಯಾನ ಮಾಡುವ ಒಂದು ಸಾಧನವಲ್ಲ. ಅದು ಕಾಲದ ನಿಖರವಾದ ಅಳತೆ.
ವಾರ, ತಿಥಿ, ನಕ್ಷತ್ರ, ಕರಣ ಮತ್ತು ಯೋಗ ಈ ಐದು ಅಂಗಗಳ ಮೂಲಕವಾಗಿ ನಮ್ಮ ಋುಷಿಗಳು ಕಾಲವನ್ನು ಪರಮಾಣುವಿನಿಂದ ಅಂದರೆ ಯಾವುದನ್ನು ವಿಭಜಿಸಲಾಗದೋ ಅಲ್ಲಿಂದ ಎನ್ನುವ ಮಾನದಿಂದ ಪ್ರಾರಂಭಿಸಿ ಪರಮ ಮಹತ್ತು ಎನ್ನುವ ಕಾಲ ಬೇಧಗಳಿಲ್ಲದ ಸ್ಥಿತಿಯ ತನಕ ಅಳೆದಿದ್ದಾರೆ. ಭಾಗವತದಲ್ಲಿಇದರ ವಿವರವಿದೆ. ವಿಜ್ಞಾನ ಇದನ್ನು ಘ್ಕಿಐ್ಞ್ಛಜ್ಞಿಜಿಠಿಛಿ ಅನಂತವೆಂದು ಹೇಳಿದೆ. ಭಾಗಿಸಲಾರದ ಮತ್ತು ಭಾಗಕಾರಕ್ಕೆ ಸಿಕ್ಕದೆ ನಡುವಿನ ಖpa್ಚಛಿ-ಆಕಾಶವನ್ನು ಅಳತೆ ಮಾಡುವ ಕ್ರಿಯೆಗೆ ಕಾಲವೆನ್ನುತ್ತಾರೆ. ಈ ಕಾಲಮಾನವನ್ನು ನಮ್ಮ ಪರಿಮಿತಿಯಲ್ಲಿಅಳೆಯಬೇಕಾದರೆ ಅದಕ್ಕೆ ಲಭ್ಯತೆ ಇರುವ ವಸ್ತು ಬೇಕು. ಈ ವಸ್ತು ತನ್ನ ಪಥದಲ್ಲಿವ್ಯತ್ಯಾಸ ಮಾಡಿಕೊಳ್ಳಕೂಡದು. ಅದಕ್ಕೆ ಸಿಕ್ಕ ವಸ್ತುವೇ ‘ಸೂರ್ಯ’. ಸೂರ್ಯ ದಿನ ರಾತ್ರಿಗಳನ್ನು ಒಂದು ನಿರ್ದಿಷ್ಟ ಸಮಯಕ್ಕೆ ಉಂಟು ಮಾಡುತ್ತಾನೆ. ಅದನ್ನು ಅರ್ಥ ಮಾಡಿಕೊಂಡ ಋುಷಿಮುನಿಗಳು ಆತನನ್ನು ಕೇಂದ್ರವನ್ನಾಗಿಸಿಕೊಂಡರು. ಎರೆಡನೆಯ ಬಾನಿನ ಕೌತುಕವೇ ಚಂದ್ರ. ಅಶ್ವಿನಿಯಿಂದ ಆರಂಭಿಸಿ ರೇವತಿಯವರೆಗಿನ 27 ನಕ್ಷತ್ರಗಳು ಚಂದ್ರನ ಪಥದ ಮೈಲುಗಲ್ಲುಗಳು. ಕಣ್ಣಿಗೆ ಕಾಣುವ ಸೂರ್ಯ ಮತ್ತು ಚಂದ್ರನ ಚಲನೆಯನ್ನು ಅನುಸರಿಸಿ ವಾರ/ದಿನಗಳಿಂದ ಪ್ರಾರಂಭಿಸಿ ವರ್ಷಗಳವರೆಗೆ ಅಳೆತೆ ಮಾಡುವ ವಿಧಾನವನ್ನು ಸೌರಮಾನ ಮತ್ತು ಚಾಂದ್ರಮಾನ ಎನ್ನುವ ರೀತಿಯಲ್ಲಿವಿಭಾಗಿಸಲಾಗಿದೆ. ಈ ವಿಧಾನದಲ್ಲಿ ಸೂರ್ಯಮಾನದ ಪ್ರಕಾರ 365.25 ದಿನಗಳಾದರೆ ಚಾಂದ್ರಮಾನದ ವರ್ಷ 354.75 ದಿನಗಳಾಗುತ್ತವೆ. ಭಾರತೀಯ ಕಾಲಗಣನೆಯಲ್ಲಿಸೂರ್ಯನ ಸುತ್ತಲೇ ಎಲ್ಲವೂ ಸುತ್ತುತ್ತವೆ ಎನ್ನುವ ಸ್ಪಷ್ಟವಾದ ಉಲ್ಲೇಖಗಳಿವೆ. ಆದರೆ ಲೆಕ್ಕಾಚಾರಕ್ಕೆ ಅನುಕೂಲವಾಗಲು ಸೂರ್ಯನ ಚಲನೆಯನ್ನು ಭೂಮಿಯ ಜಾಗದಲ್ಲಿಟ್ಟರು ಅಷ್ಟೆ. ಈ ಕಾರಣದಿಂದ ಸೌರಮಾನ ವರ್ಷಕ್ಕೂ ಚಾಂದ್ರಮಾನ ವರ್ಷಕ್ಕೂ ಪ್ರತಿವರ್ಷಕ್ಕೆ ಹತ್ತರಿಂದ ಹನ್ನೊಂದು ದಿನಗಳ ವ್ಯತ್ಯಾಸ ಬರುತ್ತದೆ. ಈ ವ್ಯತ್ಯಾಸವನ್ನು ಸರಿದೂಗಿಸಲು ಮೂರು ವರ್ಷಗಳಿಗೊಮ್ಮೆ ಒಂದು ತಿಂಗಳನ್ನು ಪಂಚಾಂಗದಲ್ಲಿಹೆಚ್ಚಿಗೆ ಸೇರಿಸಿ ಅದನ್ನು ಅಧಿಕಮಾಸವೆಂದರು. ವಶಿಷ್ಠ ಸಿದ್ಧಾಂತದ ಪ್ರಕಾರ ಅಧಿಕ ಮಾಸವು ಪ್ರತೀ 32 ತಿಂಗಳು 16 ದಿವಸ 8 ಘಟಿಯ ಅಂತರದಲ್ಲಿಬರುತ್ತದೆ.
ನಿರ್ದಿಷ್ಟ ತಿಂಗಳಲ್ಲಿಯೇ ಏಕೆ ಅಧಿಕಮಾಸ ಬರುವುದಿಲ್ಲ:
ಹಿಂದಿನ ಅಧಿಕ ಮಾಸ 2023ರಲ್ಲಿಶ್ರಾವಣ ಮಾಸದಲ್ಲಿಈ ಸಂವತ್ಸರದಲ್ಲಿಜ್ಯೇಷ್ಠ ಮಾಸವನ್ನು ಅಧಿಕ ಮಾಸವೆಂದು ಕರೆಯಲಾಗಿದೆ. ನಮ್ಮಲ್ಲಿಯೂ ನಿರ್ದಿಷ್ಟ ತಿಂಗಳನ್ನು ಅಧಿಕಮಾಸವೆಂದು ಯಾಕೆ ಗುರುತಿಸಿಲ್ಲಎನ್ನುವುದಕ್ಕೆ ಖಗೋಲ ಶಾಸ್ತ್ರದ ಲೆಕ್ಕಾಚಾರದ ಹಿನ್ನೆಲೆಯಿದೆ. ಕಾಲ ಗಣನೆಯಲ್ಲಿಅನುಕೂಲವಾಗಲಿ ಎಂದು ಚಂದ್ರನ ಗತಿಯನ್ನು ಅನುಸರಿಸಿ ತಿಥಿ, ವಾರ, ನಕ್ಷತ್ರಗಳನ್ನು ಅನುಸರಿಸಿದರೂ ಅಂತಿಮವಾಗಿ ಇವೆಲ್ಲಸೂರ್ಯನ ಚಲನೆಗೆ ಹೊಂದಿಸಿಕೊಳ್ಳುವುದನ್ನು ಈಗಾಗಲೇ ತಿಳಿದಿದ್ದೀವೆ.
ಪಂಚಾಂಗದಲ್ಲಿಚಂದ್ರಮಾನದ ತಿಂಗಳಾದ ಚೈತ್ರ, ವೈಶಾಖಗಳಂತೆ ಸೌರಮಾನದ ತಿಂಗಳಾದ ಮೇಷ ವೃಷಭ ಮಾಸಗಳನ್ನೂ ಅನುಸರಿಸುತ್ತಾರೆ. ಅಮಾವಾಸ್ಯೆಯಿಂದ ಅಮಾವಾಸ್ಯೆಯ ತನಕ ಹೇಗೆ ಚಾಂದ್ರಮಾನ ತಿಂಗಳವೋ ಅದೇ ರೀತಿ ಸಂಕ್ರಾಂತಿಯಿಂದ ಸಂಕ್ರಾಂತಿಯ ತನಕ ಸೌರಮಾನದ ತಿಂಗಳು ಬರುತ್ತವೆ. ಸೂರ್ಯ ತಿಂಗಳಿಗೊಮ್ಮೆ ಒಂದು ರಾಶಿಯನ್ನು ಬದಲಿಸುತ್ತಾನೆ. ಇದಕ್ಕೇ ಸಂಕ್ರಾಂತಿ ಎಂದು ಹೆಸರು. ಹೀಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಒಂದು ವರ್ಷದಲ್ಲಿ12 ಸಂಕ್ರಾಂತಿಗಳು ಆಗುತ್ತವೆ. ಚೈತ್ರ ಮಾಸದಿಂದ ಫಾಲ್ಗುಣ ಮಾಸದ ವರೆಗೆ ಪ್ರತಿಯೊಂದು ಮಾಸದಲ್ಲಿಒಂದು ಸಂಕ್ರಮಣ ಇರುತ್ತದೆ. ಆದರೆ 32.5 ತಿಂಗಳಾದ ಮೇಲೆ 36ನೆಯ ತಿಂಗಳೊಳಗೆ ಬರುವ ಯಾವುದೋ ಮಾಸದಲ್ಲಿಸಂಕ್ರಾಂತಿಯೇ ಇರುವುದಿಲ್ಲ. ಹಿಂದಿನ ತಿಂಗಳಲ್ಲಿಅಮಾವಾಸ್ಯೆಯ ದಿನ ಸಂಕ್ರಾಂತಿ ಇರುತ್ತದೆ. ಮತ್ತು ಮುಂದಿನ ತಿಂಗಳಲ್ಲಿಪ್ರತಿಪದೆಗೆ ಸಂಕ್ರಾಂತಿ ಇರುತ್ತದೆ. ಒಂದು ಚಾಂದ್ರಮಾನ ಮಾಸದಲ್ಲಿಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸದಿದ್ದರೆ (ಸಂಕ್ರಮಣ ಇಲ್ಲದಿದ್ದರೆ), ಆ ಹೆಚ್ಚುವರಿ ತಿಂಗಳನ್ನು ‘ಮಲ ಮಾಸ’ ಅಥವಾ ‘ಅಧಿಕ ಮಾಸ’ ಎಂದು ಕರೆಯುತ್ತಾರೆ. ಈ ವರ್ಷ ವೈಶಾಖ ಕಳೆದ ಮೇಲೆ ಬರುವ ಪ್ರತಿಪದೆಯಿಂದ ಅಮಾಸ್ಯೆಯ (ತಾ. 17/05/2026 ರಿಂದ 15/06/2026) ನಡುವೆ ಸಂಕ್ರಾಂತಿ ಇಲ್ಲ. ಹಾಗಾಗಿ ಈ ಮಾಸವನ್ನು ಅಧಿಕ ಜ್ಯೇಷ್ಠವೆಂದು ಕರೆದಿದ್ದಾರೆ. ಅದಕ್ಕೂ ಮುಂದಿನ ತಿಂಗಳೇ ನಿಜ ಜ್ಯೇಷ್ಠ ತಿಂಗಳು.
ಮಹತ್ವದ ಸಂಗತಿಯೆಂದರೆ ಈ ಅಧಿಕ ಮಾಸವು ಯಾವತ್ತಿಗೂ ಮಾರ್ಗಶೀರ್ಷದಿಂದ ಮಾಘ ಮಾಸದ ತನಕ ಬರುವುದಿಲ್ಲ. ಆದರೆ ಸುಮಾರು 250 ವರ್ಷಗಳಿಗೊಮ್ಮೆ ಕಾರ್ತಿಕ ಮಾಸದಲ್ಲಿಅಧಿಕಮಾಸ ಬರುತ್ತದೆ. 1963 ರಲ್ಲಿಒಮ್ಮೆ ಕಾರ್ತಿಕ ಮಾಸದಲ್ಲಿಅಧಿಕ ಮಾಸವಿತ್ತು.
ಕ್ಷಯ ಮಾಸ:
ಅಧಿಕ ಮಾಸವಿರುವಂತೆಯೇ ಒಮ್ಮೊಮ್ಮೆ ಕ್ಷಯ ಮಾಸವೂ ಬರುತ್ತದೆ. ಅಂದರೆ ಯಾವ ತಿಂಗಳಲ್ಲಿಯಾದರೂ ಎರಡು ಅಮಾವಾಸ್ಯೆಯ ನಡುವೆ ಎರಡು ಸಂಕ್ರಾಂತಿ ಬರುವುದುಂಟು. ಸಂಕ್ರಾಂತಿಯ ಬಿಂದು ಬರುವ ಸ್ವಲ್ಪ ಮೊದಲು ಅಮಾವಾಸ್ಯೆ ಮುಕ್ತಾಯವಾದರೆ ಆ ತಿಂಗಳನ್ನು ಕ್ಷಯ ಮಾಸವೆನ್ನುತ್ತಾರೆ. ಸುಮಾರು 141 ವರ್ಷಗಳಿಗೊಮ್ಮೆ ಕ್ಷಯ ಮಾಸವು ಬರುತ್ತದೆ. ಕೊನೆಯದಾಗಿ 1982-83 ರಲ್ಲಿಮಾಘ ಮಾಸದಲ್ಲಿ ಕ್ಷಯ ಮಾಸ ಬಂದಿತ್ತು. ಅಂತಹ ವರ್ಷದಲ್ಲಿಎರಡು ಅಧಿಕ ಮಾಸಗಳು ಬರುತ್ತವೆ. ಮೊದಲನೆಯದು ಕ್ಷಯ ಮಾಸಕ್ಕಿಂತ ಎರಡು ಮೂರು ತಿಂಗಳು ಮೊದಲು, ಅದನ್ನು ಸಂಸರ್ಪ ಮಾಸವೆನ್ನುತ್ತಾರೆ. ಇನ್ನೊಂದನ್ನು ಮಲ ಮಾಸವೆನ್ನುತ್ತಾರೆ. 1982ರ ಆಶ್ವೀಜ ಮಾಸ ಮೊದಲ ಅಧಿಕ ಮಾಸವಾದರೆ ಇನ್ನೊಂದು ಪಾಲ್ಗುಣ ಮಾಸ ಅಧಿಕ ಮಾಸವಾಗಿತ್ತು. ಸಂಕ್ಷಿಪ್ತವಾಗಿ ವಿವರಿಸಬೇಕೆಂದರೆ ಅಧಿಕ ಮಾಸವೆಂದರೆ ಸಂಕ್ರಾಂತಿ ರಹಿತ ಚಾಂದ್ರಮಾನ ಮಾಸ. ಕ್ಷಯ ಮಾಸವೆಂದರೆ ಎರಡು ಸಂಕ್ರಾಂತಿಗಳು ಒಂದು ಚಾಂದ್ರಮಾನ ಮಾಸದಲ್ಲಿಬರುವುದು.
ಅಧಿಕ ಮಾಸದಲ್ಲಿದೇವರ ಆರಾಧನೆಯ ಜೊತೆಗೆ ನಮ್ಮ ಪ್ರಾಚೀನ ಋುಷಿಗಳ ಖಗೋಳ ಜ್ಞಾನಕ್ಕೂ ಗೌರವವನ್ನು ಸಲ್ಲಿಸೋಣ.
ಲೇಖಕರು: ಅಧ್ಯಾತ್ಮ ಚಿಂತಕರು

