ಹನುಮ

Contributed byShridevi Ambekallu|Vijaya Karnataka

ಅಯೋಧ್ಯೆಯ ಶ್ರೀ ರಾಮ ಮಂದಿರದ ಬಳಿ ಇರುವ ಹನುಮಾನ್ ಘರ್ಹಿ ದೇವಸ್ಥಾನವು ಪೌರಾಣಿಕ ಹಿನ್ನೆಲೆಯ ಪುಣ್ಯಕ್ಷೇತ್ರವಾಗಿದೆ. ಇಲ್ಲಿನ ಹನುಮ ಮೂರ್ತಿ 6 ಇಂಚು ಎತ್ತರವಿದೆ. ರಾಮಜನ್ಮಭೂಮಿಯ ರಕ್ಷಣೆಗಾಗಿ ಆಂಜನೇಯ ಇಲ್ಲಿ ವಾಸಿಸುತ್ತಿದ್ದನೆಂದು ಹೇಳಲಾಗುತ್ತದೆ. ಈ ದೇವಸ್ಥಾನಕ್ಕೆ 76 ಮೆಟ್ಟಿಲುಗಳಿದ್ದು, ಏರುತ್ತಾ ಆಂಜನೇಯನ ಸ್ಮರಣೆ ಮಾಡಿದರೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

hanuman temple in ayodhya a precious pilgrimage site for devotees

ಹನುಮಾನ್ (ಘರ್ಹಿ) ದೇವಸ್ಥಾನ, ಅಯೋಧ್ಯಾ

-----

ಪುಣ್ಯಕ್ಷೇತ್ರ ಅಯೋಧ್ಯೆ ಶ್ರೀ ರಾಮಂದಿರಕ್ಕೆ ಸಮೀಪದಲ್ಲಿರುವ ಹನುಮ ದೇಗುಲ ಪೌರಾಣಿಕ ಹಿನ್ನಲೆಯ ಪುಣ್ಯಕ್ಷೇತ್ರ.

------

ಹನುಮ ಹಿಂದೂ ಧರ್ಮಗ್ರಂಥ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲಿಒಂದು. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಎಲ್ಲೆಡೆ ಪೂಜಿಸಲಾಗುತ್ತದೆ. ಆಂಜನೇಯ, ವಾಯುಪುತ್ರ, ಎಂಬೆಲ್ಲಾಹೆಸರಿನಿಂದ ಕರೆಸಿಕೊಳ್ಳುವ ಹನುಮನನ್ನು ದೇಶದೆಲ್ಲೆಡೆ ಪೂಜಿಸಲಾಗುತ್ತದೆ. ಹನುಮನ ಹೆಸರಿನಲ್ಲಿಸ್ಥಾಪಿತವಾಗಿರುವ ದೇವಾಲಗಳು ಹಲವು.

ಹನುಮಾನ್ ದೇವಸ್ಥಾನ ಅಯೋಧ್ಯೆಯಲ್ಲಿದೆ. ಎತ್ತರದ ಬೆಟ್ಟ ಪ್ರದೇಶದಲ್ಲಿದ್ದು, ಈ ದೇವಸ್ಥಾನದ ಪಕ್ಕದಲ್ಲಿಯೇ ಸರಯೂ ನದಿ ಹರಿಯುತ್ತಾಳೆ. ಭಕ್ತರು ಈ ದೇವಸ್ಥಾನವನ್ನು ತಲುಪಲು 76 ಮೆಟ್ಟಿಲುಗಳನ್ನು ಏರಬೇಕು. ಆದರೆ ಈ ದೇವಸ್ಥಾನದಲ್ಲಿರುವ ಹನುಮನ ಮೂರ್ತಿಯ ಎತ್ತರ ಕೇವಲ 6 ಇಂಚು. ಪ್ರತಿದಿನವೂ ಹೂವಿನ ಮಾಲೆಗಳಿಂದ ಅಲಂಕೃತವಾಗಿರುತ್ತದೆ. ಶ್ರೀರಾಮ ನಾಡಿನಲ್ಲಿರುವ ಈ ದೇವಸ್ಥಾನ ಪ್ರಮುಖ ಯಾತ್ರಾಸ್ಥಳಗಳಲ್ಲಿಒಂದಾಗಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಯೋಧ್ಯೆಗೆ ಭೇಟಿ ನೀಡಿದ ಪ್ರವಾಸಿಗರೂ ಇಲ್ಲಿಗೆ ಭೇಟಿ ನೀಡಿ ಹನುಮನ ದರ್ಶನ ಮಾಡಿ ಬರುತ್ತಾರೆ. ಈ ದೇವಸ್ಥಾನ ಅಯೋಧ್ಯೆಯ ಪ್ರಮುಖ ತೀರ್ಥ ಯಾತ್ರಾ ಕ್ಷೇತ್ರವಾಗಿದ್ದು ಈ ದೇವಸ್ಥಾನವನ್ನು ತಲುಪಲು ಇರುವ 76 ಮೆಟ್ಟಿಲುಗಳನ್ನು ಏರುತ್ತಾ ಆಂಜನೇಯನ ಸ್ಮರಣೆ ಮಾಡಿದರೆ ಭಕ್ತನ ಬಯಕೆ ಈಡೇರುತ್ತದೆಯಂತೆ.

ಪೌರಾಣಿಕ ಐತಿಹ್ಯ

ಗರ್ಹಿ ಅಂದರೆ ಮನೆ ಎಂದರ್ಥ. ರಾಮಜನ್ಮಭೂಮಿಯ ರಕ್ಷಣೆಗಾಗಿ ಆಂಜನೇಯ ಇಲ್ಲಿಯೇ ವಾಸಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ದೇವಸ್ಥಾನವನ್ನು ಅಯೊಧ್ಯೆಯ ನವಾಬ ನಿರ್ಮಿಸಿದ್ದು, ನಂತರ 10ನೇ ಶತಮಾನದಲ್ಲಿಹಿಂದೂ ಭಕ್ತರು ಈ ದೇವಸ್ಥಾನವನ್ನು ನವೀಕರಣ ಮಾಡಿದರು ಎಂಬುದು ಇತಿಹಾಸಗಳಿಂದ ತಿಳಿದು ಬರುತ್ತದೆ.

ಹೋಗುವುದು ಹೇಗೆ?

ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ದೇಶದ ಪ್ರಮುಖ ಧಾರ್ಮಿಕ ಕೇಂದ್ರ ಆಗಿದ್ದು ದೇಶದ ಪ್ರಮುಖ ನಗರಗಳಿಂದ ಪ್ರಯಾಣ ಬೆಳೆಸಬಹುದು. ಅಯೋಧ್ಯೆಗೆ ಹತ್ತಿರದ ವಿಮಾನ ನಿಲ್ದಾಣ ಲಖನೌ. ನಗರದಿಂದ 140 ಕಿ.ಮೀ. ದೂರದಲ್ಲಿದೆ.

----------------------------