ಶಿವಶರಣರ ಸಮಾವೇಶ
ಗದಗ: ಹಿಂದೂ ಸರ್ವ ಸಮಾಜಗಳ ಒಕ್ಕೂಟದ ಜಿಲ್ಲಾಘಟಕದಿಂದ ಮೇ 31ರಂದು ಸಂಜೆ 5 ಗಂಟೆಗೆ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸಂಚಾಲಕ ರಾಜು ಖಾನಪ್ಪನವರ ತಿಳಿಸಿದರು.
ಸೋಮವಾರ ನಗರದ ಶ್ರೀ ಮಹಾವೀರ ಗೋಸೇವಾ ಸಮಿತಿ ಸಭಾಂಗಣದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘ಕೊಲ್ಹಾಪುರದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿಈ ಸಮಾವೇಶ ನಡೆಯಲಿದೆ. ನಾಡಿನ 300ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಕ್ಕೆ ನಗರದ ಭೂಮರೆಡ್ಡಿ ವೃತ್ತದಿಂದ ವಿದ್ಯಾದಾನ ಸಮಿತಿ ಮೈದಾನದವ ವರೆಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿಸಾವಿರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಲಿದ್ದಾರೆ’ ಎಂದರು.

