ಬಿಜೆಪಿಯಿಂದ ಭದ್ರಾ ಮೇಲ್ದಂಡೆ ಅನುಷ್ಠಾನ ಸಾಧ್ಯ

Contributed bysukesh2365@gmail.com|Vijaya Karnataka

ಬಿಜೆಪಿ ಅಧಿಕಾರಕ್ಕೆ ಬಂದರೆ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ಹೇಳಿದ್ದಾರೆ. ತಮ್ಮ ಅವಧಿಯಲ್ಲಿ ತಂದ ಅನುದಾನದಲ್ಲಿ ಆರಂಭವಾದ ಕಾಮಗಾರಿಗಳನ್ನು ಈಗಿನ ಶಾಸಕರು ಪೂರ್ಣಗೊಳಿಸುತ್ತಿದ್ದಾರೆ ಎಂದರು. ಸಿರಿಗೆರೆ ಡಾ.ಶಿವಮೂರ್ತಿ ಶ್ರೀಗಳ ಆಶೀರ್ವಾದದಿಂದ ಕೆರೆ ತುಂಬಿಸುವ ಯೋಜನೆ, ಬಸ್ ನಿಲ್ದಾಣ, ಸಮುದಾಯ ಭವನಗಳ ನಿರ್ಮಾಣ ತಮ್ಮ ಅವಧಿಯಲ್ಲಿ ಆಗಿದೆ ಎಂದು ತಿಳಿಸಿದರು.

bjp name for implementation of bhadr dam project

ಬಿಜೆಪಿಯಿಂದ ಭದ್ರಾ ಮೇಲ್ದಂಡೆ ಅನುಷ್ಠಾನ ಸಾಧ್ಯ

---

ಜಗಳೂರು: ರಾಜ್ಯದಲ್ಲಿಬಿಜೆಪಿ ಅಧಿಕಾರಕ್ಕೆ ಬಂದಾಗ ಮಾತ್ರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಲು ಸಾಧ್ಯ. ಕಾಂಗ್ರೆಸ್ ಸರಕಾರ ಏನೂ ಮಾಡುವುದಿಲ್ಲಎಂದು ಮಾಜಿ ಶಾಸಕ ಎಸ್ .ವಿ. ರಾಮಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿಶನಿವಾರ ತಾಲೂಕು ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ನನ್ನ ಅವಧಿಯಲ್ಲಿಕ್ಷೇತ್ರಕ್ಕೆ ಅನುದಾನ ತರಲಾಗಿತ್ತು. ಅಂದು ಭೂಮಿ ಪೂಜೆ ಮಾಡಿದ್ದ ಕಾಮಗಾರಿಗಳನ್ನು ಈಗಿನ ಕಾಂಗ್ರೆಸ್ ಶಾಸಕರು ಪೂರ್ಣಗೊಳಿಸಿ ಉದ್ಘಾಟನೆ ಮಾಡುತ್ತಿದ್ದಾರೆ. ಸಿರಿಗೆರೆ ಡಾ.ಶಿವಮೂರ್ತಿ ಶ್ರೀಗಳ ಆಶೀರ್ವಾದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡಲಾಗಿತ್ತು. ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆ, ಪಟ್ಟಣದಲ್ಲಿರುವ ಖಾಸಗಿ ಬಸ್ ನಿಲ್ದಾಣ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಮಿನಿ ಬಸ್ ನಿಲ್ದಾಣ ಮಾಡಲಾಗಿದೆ. ನಾನಾ ಸಮುದಾಯದ ಐದು ಸಮುದಾಯ ಭವನಗಳು, ಎರಡು ವಾಲ್ಮೀಕಿ ಭವನಗಳು ನಿರ್ಮಿಸಲಾಗಿದೆ. ಈಗಿನ ಶಾಸಕರು ಏನು ಅಭಿವೃದ್ದಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ. ಮರುಳಾರಾಧ್ಯ ಮಾತನಾಡಿದರು. ಬಿಜೆಪಿ ಮುಖಂಡ ಅನಿತ್ , ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ , ಮುರುಳಿ, ಮಂಡಲ ಮಾಜಿ ಅಧ್ಯಕ್ಷ ಎಚ್ .ಸಿ ಮಹೇಶ್ , ಶಿವಕುಮಾರ್ ಸ್ವಾಮಿ, ಡಿ.ವಿ ನಾಗಪ್ಪ, ಜಿಪಂ ಮಾಜಿ ಸದಸ್ಯರಾದ ಎಸ್ .ಕೆ.ಮಂಜುನಾಥ್ , ಎಚ್ .ನಾಗರಾಜ್ , ಜಯಲಕ್ಷ್ಮೇ ಮಹೇಶ್ , ತಾಪಂ ಮಾಜಿ ಸದಸ್ಯ ಸಿದ್ದೇಶ್ , ಪಪಂ ಮಾಜಿ ಅಧ್ಯಕ್ಷ ಜೆ.ವಿ. ನಾಗರಾಜ್ , ಮಹಿಳಾ ಘಟಕದ ಅಧ್ಯಕ್ಷ ರೇಖಾ ಶಿವಕುಮಾರ್ , ಮಂಜುನಾಯ್ಕ, ಧರ್ಮನಾಯ್ಕ, ಸಂಪತ್ ಕುಮಾರ್ ಇದ್ದರು.

---

23ಜೆಎಲ್ ಆರ್ ಚಿತ್ರಎ

ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿಬಿಜೆಪಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ನಡೆಯಿತು.