ಬೆಳಗಾವಿ: ಅಥಣಿ ಪಟ್ಟಣದ ಸುಣಗಾರ ಭಟ್ಟಿ ಹಿಂಭಾಗದ ಖಣಿಯಲ್ಲಿಸ್ನಾನಕ್ಕೆ ಶನಿವಾರ ತೆರಳಿದ್ದ ಬಾಲಕ ಕಾಲುಜಾರಿ ಬಿದ್ದು ನೀರುಪಾಲಾಗಿದ್ದಾನೆ.
ಸಮರ್ಥ ಅಮೃತ ಪನಾಳಕರ (16) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಬೆಳಗ್ಗೆ 9ಕ್ಕೆ ಸುಮಾರಿಗೆ ಬಾಲಕ ಸುಣಗಾರ ಭಟ್ಟಿ ಹಿಂಭಾಗದ ಖಣಿಗೆ ಸ್ನಾನ ಮಾಡಲು ತೆರಳಿದ್ದ ಎನ್ನಲಾಗಿದೆ. ಈ ವೇಳೆ ಸಮರ್ಥ ಕಾಲು ಜಾರಿ ನೀರಿನಲ್ಲಿಮುಳುಗಿದ್ದಾನೆ. ಘಟನೆ ಕುರಿತು ಸ್ಥಳೀಯರು ತಕ್ಷಣವೇ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನಿಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.
-23ಪರಶು5
ಸಮರ್ಥ ಪನಾಳಕರ

