ಪದ್ಯಕಾಲ1

Contributed byvidyarashmi.bhat@timesgroup.com|Vijaya Karnataka

ಬಜಾರಿಗೆ ಬಂದ ಕಬೀರರ ಅನುಭವಗಳನ್ನು ಈ ಕವಿತೆ ವಿವರಿಸುತ್ತದೆ. ಜನಜಾತ್ರೆಯಲ್ಲಿ ಅವರು ಏಕಾಂತವನ್ನು ಕಂಡುಕೊಂಡರು. ತಮ್ಮ ಸಂಗೀತದಿಂದ ಜನರನ್ನು ಮಂತ್ರಮುಗ್ಧರನ್ನಾಗಿಸಿದರು. ಸಂಪತ್ತು ಮತ್ತು ಸುಖಕ್ಕಾಗಿ ಬೇಡಿಕೆಗಳ ನಡುವೆಯೂ ಅವರು ತಮ್ಮ ದಾರಿಯಲ್ಲಿ ಸಾಗಿದರು. ಮೋಡಗಳು, ಸೂರ್ಯಾಸ್ತ, ಹಕ್ಕಿಗಳ ಗೂಡು ಸೇರುವ ದೃಶ್ಯಗಳ ನಡುವೆ ಅವರು ಜಗದ ಸತ್ಯವನ್ನು ಅರಿತರು. ಭ್ರಮೆ ಮತ್ತು ಮಾಯೆಯಲ್ಲ, ಈ ಜಗತ್ತು ಸತ್ಯದ ಅವತಾರ ಎಂದು ಅವರು ಹೇಳಿದರು.

devotee kabir journey through the true world

ಬಜಾರಿಗೆ ಬಂದ ಕಬೀರ

--

ಜಿ.ಪಿ.ಬಸವರಾಜು

--

ಬಜಾರಿಗೆ ಬಂದ ಕಬೀರ

ಜನಜಾತ್ರೆ ಹೆಜ್ಜೆಯೂರಲೂ

ಇರಲಿಲ್ಲತಾವು; ಯಾರೋ

ತಳ್ಳಿದರು, ನೂಕಿದರು ಮತ್ತಾರೊ

ಏಕತಾರಿ ಮಿಡಿಯಿತು ಮೆಲು

ದನಿಯಲ್ಲಿ; ಹುಚ್ಚುಹುಡುಗನ

ಕಣ್ಣಲ್ಲಿನಕ್ಕ ಕಬೀರ;

ತರಂಗಗಳೆದ್ದು ತುಂಬಿತು ನಾದ

ನಾದಕ್ಕೆ ತಲೆಬಾಗಿ ಬಂದನೊಬ್ಬ

ನೂಕು ನುಗ್ಗಲಲ್ಲೇ ಕೈಮುಗಿದ,

ಚಿಪುತ್ರ್ಪಬಾಳೆಯ ಹಣ್ಣ ಕೊಟ್ಟು

ದಾರಿಬಿಟ್ಟರು ಜನ ನಿರಾಳ ಕಬೀರ

ನಕ್ಕು ನುಡಿಸಿದ ತನ್ನೊಳದನಿಯ

ಹಾಡಿಗೆ ಜನ ಮರಳು, ಕಾಡಿದರು

ಬೇಡಿದರು, ‘ಬಾಬಾ ಕೊಡು ನಮಗೆ

ಸಕಲ ಸಂಪತ್ತು, ಕೊನೆಗಾಲದ ಸುಖ’ ,

ಮೆಲ್ಲಗೆ ಕಾಲ್ತೆಗೆದ ಕಬೀರ ಅಲ್ಲಿಂದ

ಒಂಟಿ ಪಯಣದ ಹಾದಿ, ತೋರಿತ್ತು

ಬೆಟ್ಟದ ತುಟ್ಟ ತುದಿಯ, ದಣಿವಿಲ್ಲ,

ದಾಹ ಇದ್ದೇ ಇತ್ತು, ಮೀಟುವ ತಂತಿಯ

ಆಟ ನಡೆದೆ ಇತ್ತು ಅಂತರಂಗದಲ್ಲಿ

ತೇಲುತ್ತ ತೇಲುತ್ತ ಬಂದ ಮೋಡಗಳು

ಮೈಸವರಿ ಹೋದವು ಮರುಳು ಮಾಡಿ

ಇಳಿಮುಖದ ಸೂರ್ಯ ಮರೆಯಾಗಿ

ಬಾನು ತುಂಬಿತು ಬಣ್ಣಬಣ್ಣಗಳಲ್ಲಿ

ಗೂಡತ್ತ ಹೊರಟವು ದಣಿದ ಹಕ್ಕಿ

ಎದೆಯ ತೆರೆಯುತ್ತ ಎಲ್ಲತುಂಬುತ್ತ

ಅಂದ ಕಬೀರ: ಭ್ರಮೆಯಲ್ಲ, ಮಾಯೆ

ಅಲ್ಲಈ ಜಗದ ವ್ಯಾಪಾರ, ಸತ್ಯದವತಾರ

ನೀರಗುಳ್ಳೆಯೂ ನಿಜ, ಹುಲ್ಲುಕಡ್ಡಿಯೂ,

ನೂಕು ನುಗ್ಗಲು ನಿಜ, ಅಲ್ಲಿಂದ ಎದ್ದುಬಂದ

ಏಕಾಂತವೂ ನಿಜ, ಈ ಜಗವೆಂಬುದು ನಿಜ

( ಕಬೀರರ ಒಂದು ಭಜನ್ ಕೇಳಿ )