22ಎಸ್ ಎಚ್ ಟಿ1:
ರೈತ ಸಲಹಾ ಸಮಿತಿ ಸಭೆ
ವಿಕ ಸುದ್ದಿಲೋಕ ಶಿರಹಟ್ಟಿ
ಸ್ಥಳೀಯ ಕೃಷಿ ಇಲಾಖೆ ಕಚೇರಿಯಲ್ಲಿಆತ್ಮ ಯೋಜನೆಯಡಿ ರೈತ ಸಲಹಾ ಸಮಿತಿ ಸಭೆ ಮತ್ತು ತಾಂತ್ರಿಕ ಸಭೆ ಜರುಗಿತು.
ಈ ಸಂದರ್ಭದಲ್ಲಿಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ಸಮತೋಲನ ರಸಗೊಬ್ಬರಗಳ ಉಪಯೋಗದ ಕುರಿತು, ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ 16 ಪೋಷಕಾಂಶಗಳ ಅಗತ್ಯವಿರುತ್ತದೆ. ಆದರೆ ರೈತರು ಕೇವಲ 2 ರಿಂದ 3 ಪೋಷಕಾಂಶಗಳನ್ನು ಮಾತ್ರ ಭೂಮಿಗೆ ನೀಡುತ್ತಿದ್ದಾರೆ. ಯಾವುದೇ ಒಂದು ಪೋಷಕಾಂಶ ಕೊರತೆಯಾದರೂ ಸಸ್ಯಗಳು ಸಮೃದ್ಧಿಯಾಗಿ ಬೆಳೆಯಲಾರವು. ಆದ್ದರಿಂದ ಲಘುಪೋಷಕಾಂಶಗಳನ್ನು ಕಾಲಕಾಲಕ್ಕೆ ಭೂಮಿಗೆ ಒದಗಿಸಬೇಕು. ಜತೆಗೆ ರಸಗೊಬ್ಬರದ ಮಿತ ಬಳಕೆ ಮಾಡಿ, ಹೆಚ್ಚು ಕಾಂಪ್ಲೆಕ್ಸ್ ಗೊಬ್ಬರ ಬಳಸಬೇಕು. ಈ ವರ್ಷದ ಮುಂಗಾರು ಹಂಗಾಮಿನಲ್ಲಿಗೋವಿನ ಜೋಳ ಬದಲಾಗಿ ಉದ್ದು ಬೆಳೆಗಳನ್ನು ಬೆಳೆಯಬೇಕೆಂದರು.
ಸೀಮಾ ಸವಣೂರ, ಬಸವರಾಜ ನಾವಿ, ನೀಲನಗೌಡ್ರ ಪಾಟೀಲ, ಎಂ.ಎಸ್ .ಪೂಜಾರ, ದೇವರಾಜ ಮುಂತಾದವರು ಉಪಸ್ಥಿತರಿದ್ದರು.
ಫೋಟೋ: 22ಎಸ್ ಎಚ್ ಟಿ1:
ಶಿರಹಟ್ಟಿ ಕೃಷಿ ಇಲಾಖೆ ಕಚೇರಿಯಲ್ಲಿಆತ್ಮ ಯೋಜನೆಯಡಿ ರೈತ ಸಲಹಾ ಸಮಿತಿ ಸಭೆ ಮತ್ತು ತಾಂತ್ರಿಕ ಸಭೆ ನಡೆಯಿತು.

