ವಿಕ ಸುದ್ದಿಲೋಕ ಹುಣಸೂರು. ದೇಶದಲ್ಲೇ ನಮ್ಮದು ವೈಶಿಷ್ಟ ಪೂರ್ಣ ರಾಜ್ಯ, ಸಂಘರ್ಷವಿಲ್ಲದ, ಸಾಮರಸ್ಯ ಬೆಸೆಯುವ, ಸಂಪರ್ಕ ಹಾಗೂ ಆಡಳಿತ ಭಾಷೆಯಾಗಿ ಹೃದಯದ ಭಾಷೆಯಾಗಿ ಅಪ್ಪಿಕೊಳ್ಳುವ ದಿನ ಇದಾಗಿದ್ದು, ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಹಾಗೂ ಶಿಕ್ಷಣದ ಮೂಲಕ ಪ್ರಪಂಚಕ್ಕೆ ಜ್ಞಾನವನ್ನು ಪಸರಿಸುವ ಕಾರ್ಯ ಮಾಡಿದಾಗ ಮಾತ್ರ ಕನ್ನಡ ಭಾಷೆಗೆ ಅರ್ಥಬರಲಿದೆ ಎಂದು ಉಪ ವಿಭಾಗಾಧಿಕಾರಿ ಜಿ.ಡಿ.ಶೇಖರ್ ಬಣ್ಣಿಸಿದರು. ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವದಲ್ಲಿಮಾತನಾಡಿದರು. ಕನ್ನಡ ಧ್ವಜಾರೋಹಣ ನೆರವೇರಿಸಿದ ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ,‘‘ 1973ರಲ್ಲಿನಮ್ಮ ಮಣ್ಣಿನ ಮಗ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿರುವುದು ನಮಗೆಲ್ಲಹೆಮ್ಮೆಯಾಗಿದೆ. ಇಂದಿನ ವಿದ್ಯಾರ್ಥಿಗಳು ಆಂಗ್ಲ ಭಾಷೆಯ ವ್ಯಾಮೋಹಕ್ಕೊಳಗಾಗಿದ್ದು, ಮೊದಲು ತಾಯಿ ಭಾಷೆ ಕನ್ನಡ ಇರಲಿ, ಉದ್ಯೋಗ, ವ್ಯವಹಾರಕ್ಕೆ ಮಾತ್ರ ಇತರೆ ಭಾಷೆಗಳಿರಲಿ,’’ ಎಂದರು. ಕಾರ್ಯಕ್ರಮದಲ್ಲಿತಹಸೀಲ್ದಾರ್ ಜೆ.ಮಂಜುನಾಥ್ , ಪೌರಾಯುಕ್ತೆ ಎಂ.ಮಾನಸ, ಇಒ ಹೊಂಗಯ್ಯ, ಬಿಇಒ ಕಾಳನಾಯಕ, ಕಸಾಪ ಅಧ್ಯಕ್ಷ ಹರವೆಮಹದೇವ್ , ಗ್ರೇಡ್ -2 ತಹಸೀಲ್ದಾರ್ ಪುಷ್ಪ, ತೋಟಗಾರಿಕೆ ಅಧಿ ಕಾರಿ ಡಾ.ನಾಗರಾಜ್ , ಇನ್ಸ್ ಪೆಕ್ಟರ್ ಶಿವಮಾದಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿ ಕಾರಿಗಳು, ಆಚರಣಾ ಸಮಿತಿಯ ಎಸ್ .ಜಯರಾಂ, ರಾಚಪ್ಪ, ಭಾಸ್ಕರ್ , ವಿ.ಎನ್ .ದಾಸ್ , ಜಯರಾಮ್ ಮತ್ತಿತರಿದ್ದರು. ಭುವನೇಶ್ವರಿ ಮೆರವಣಿಗೆ: ನಗರದ ರಂಗನಾಥ ಬಡಾವಣೆಯಿಂದ ಹೊರಟ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆಗೆ ಶಾಸಕ ಜಿ.ಡಿ.ಹರೀಶ್ ಗೌಡ, ಉಪವಿಭಾಗಾಧಿಕಾರಿ ಶೇಖರ್ , ತಹಸೀಲ್ದಾರ್ ಮಂಜುನಾಥ್ , ಪೌರಾಯುಕ್ತೆ ಎಂ.ಮಾನಸ, ಇಒ ಹೊಂಗಯ್ಯ, ಬಿಇಒ ಕಾಳನಾಯಕ, ಕಸಾಪ ಅಧ್ಯಕ್ಷ ಹರವೆಮಹದೇವ್ ಮತ್ತಿತರರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿಮಂಗಳವಾದ್ಯ, ವೀರಗಾಸೆ, ಡೊಳ್ಳುಕುಣಿತ, ಶಾಲಾ ಮಕ್ಕಳ ಪಟಕುಣಿತ, ವಿವಿಧ ಶಾಲಾ ಕಾಲೇಜುಗಳ ಬ್ಯಾಂಡ್ ಸೆಟ್ ವಾದನ, ಮಾದರಿ ಗ್ರಾಮ ಪಂಚಾಯತಿ, ವಿಬೀ ರಾಮ್ ಜೀ ಯೋಜನೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಕುರಿತು, ಅರಣ್ಯ ಇಲಾಖೆಯ ವನ್ಯಜೀವಿಗಳ ಸಂರಕ್ಷಣೆ ಕುರಿತ ಸ್ತಬ್ಧ ಚಿತ್ರ ಗಮನ ಸೆಳೆಯಿತು.