ಗೋಶಾಲೆಗೆ 11 ಲಕ್ಷ ರೂ. ಅನುದಾನ

Contributed by: utkolekar@gmail.com|Vijaya Karnataka•
11 lakhs granted to goshalas
ಗೋಶಾಲೆಗೆ 11 ಲಕ್ಷ ರೂ. ಅನುದಾನ

ಶಾಸಕ ಯಶವಂತರಾಯಗೌಡ ಹೇಳಿಕೆ
ವಿಕ ಸುದ್ದಿಲೋಕ ಇಂಡಿ

‘‘ವಿಶ್ವದಲ್ಲಿಲ್ಲದಷ್ಟು ಗೋ ಸಂತತಿ ನಮ್ಮ ದೇಶದಲ್ಲಿವೆ. 30 ಸಾವಿರ ಕೋಟಿ ಗೋವುಗಳಿಗೆ ದೇಶದಲ್ಲಿಆಶ್ರಯ ನೀಡಲಾಗುತ್ತದೆ. ಅದರಂತೆ ಇಂಡಿಯಲ್ಲಿನಿರ್ಮಿಸಲಾಗುವ ಗೋ ಶಾಲೆಗೆ ಶಾಸಕರ ನಿಧಿಯಿಂದ 11 ಲಕ್ಷ ರೂ. ಅನುದಾನ ನೀಡುವೆ,’’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದ ಶಾಂತೇಶ್ವರ ಶಿಕ್ಷಣ ಸಂಸ್ಥೆಯಿಂದ ಶಾಂತೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿನಡೆದ ಒಂದು ಸಾವಿರ ವೃಕ್ಷ ಅಭಿಯಾನ ಮತ್ತು ಗೋಶಾಲೆ ಕಟ್ಟಡದ ಭೂಮಿಪೂಜೆ ಸಮಾರಂಭದಲ್ಲಿಮಾತನಾಡಿದರು.

‘‘ಗೋವಿನ ಹಾಲು ಸೇರಿದಂತೆ ಗೋ ಉತ್ಪನ್ನಗಳು ನಮ್ಮ ಶರೀರಕ್ಕೆ ರೋಗ ನಿರೋಧಕ ಶಕ್ತಿ ಒದಗಿಸುತ್ತವೆ. ಆದ್ದರಿಂದ ಗೋವುಗಳಿಗೆ ನಾವು ವಿಶೇಷ ಆದ್ಯತೆ ನೀಡಬೇಕು,’’ ಎಂದರು.

ಶಾಂತೇಶ್ವರ ಸಂಸ್ಥೆ ಆರಂಭಿಸುತ್ತಿರುವ ಗೋ ಶಾಲೆಗೆ ಒಂದು ಆಕಳು ನೀಡುವುದಾಗಿ ಪ್ರಗತಿಪರ ರೈತ ಎಸ್ .ಟಿ.ಪಾಟೀಲ ತಿಳಿಸಿದರು.

ಅಶೋಕ ಪಂಡಿತರು, ರಾಘವೇಂದ್ರ ಕುಲಕರ್ಣಿ ಮತ್ತು ಡಾ. ಜಯಪ್ರಸಾದ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಶ್ರೀಮಂತ ಇಂಡಿ, ಎಸ್ .ಬಿ. ಗೌರಿ, ಭೀಮಣ್ಣ ಕವಲಗಿ, ಪ್ರಶಾಂತ ಕಾಳೆ, ಆದರ್ಶ ಬಗಲಿ, ಡಿ.ಆರ್ . ಶಹಾ, ಮಹಾವೀರ ಧನಶೆಟ್ಟಿ, ವೆಂಕಟೇಶ ಕುಲಕರ್ಣಿ ಮತ್ತಿತರರಿದ್ದರು.

ಫೋಟೊ

17 ಇಂಡಿ 02

ಇಂಡಿಯ ಶಾಂತೇಶ್ವರ ಸಂಸ್ಥೆಯಲ್ಲಿಗೋಶಾಲೆ ಕಟ್ಟಡದ ಭೂಮಿಪೂಜೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ ನೀಡಿದರು.