ಅಲ್ಪಸಂಖ್ಯಾತರ ನರ್ಸಿಂಗ್ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

Contributed by: stevan.rego@timesofindia.com|Vijaya Karnataka•
Vijay Karnataka
ಮಂಗಳೂರು: ಈ ಸಾಲಿನಲ್ಲಿಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್ , ಜೈನ್ , ಸಿಖ್ , ಬೌದ್ಧ, ಮತ್ತು ಪಾರ್ಸಿ) ಸಮುದಾಯದ ಬಿ.ಎಸ್ಸಿ ನರ್ಸಿಂಗ್ ಮತ್ತು ಜಿ.ಎನ್ .ಎಂ ನರ್ಸಿಂಗ್ ಕೋರ್ಸ್ ಗಳಲ್ಲಿವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನ. ವಿದ್ಯಾರ್ಥಿಗಳು ಠಿಠಿps://sಛಿvasಜ್ಞಿdh್ಠ.ka್ಟ್ಞaಠಿaka.ಜಟv.ಜ್ಞಿ/ಖಛಿvasಜ್ಞಿdh್ಠ/ಈಛಿpa್ಟಠಿಞಛ್ಞಿಠಿಖಛ್ಟಿvಜ್ಚಿಛಿs್ದÀರಿಲ ಮೂಲಕ ಆನ್ ಲೈನ್ ನಲ್ಲಿಅರ್ಜಿಯನ್ನು ಸಲ್ಲಿಸಬಹುದು. ಕೋರ್ಸ್ ನ ಅವಧಿಗೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯ 2.50 ಲಕ್ಷ ರೂ. ಮೀರಿರಬಾರದು. ವಿದ್ಯಾರ್ಥಿಗಳು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸೀಡಿಂಗ್ ಹಾಗೂ ಎನ್ .ಪಿ.ಸಿ.ಐ ಮ್ಯಾಪಿಂಗ್ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಇಲಾಖೆಯ ವೆಬ್ ಸೈಟ್ hಠಿಠಿps://dಟಞ.ka್ಟ್ಞaಠಿaka.ಜಟv.ಜ್ಞಿ ಅಥವಾ ಸಹಾಯವಾಣಿ8277799990ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಜಿಲ್ಲಾಅಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.