ಚೂರು ಸುದ್ದಿ 1

Contributed by: Vinayaka Naik P|Vijaya Karnataka•
1
ಪೊಲೀಸ್ ಕ್ರೀಡಾಕೂಟ 20ರಿಂದ

ದಾವಣಗೆರೆ: ಕರ್ನಾಟಕರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾಪೊಲೀಸ್ ವಾರ್ಷಿಕ ಕ್ರೀಡಾಕೂಟ-2026 ಅನ್ನು ನ.20 ರಿಂದ 22ರ ವರೆಗೆ ನಗರದ ಜಿಲ್ಲಾಪೊಲೀಸ್ ಕವಾಯತು ಮೈದಾನದಲ್ಲಿಆಯೋಜಿಸಲಾಗಿದೆ. ನ.20ರಂದು ಬೆಳಗ್ಗೆ 8 ಗಂಟೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಚಿನ್ನದ ಪದಕ ವಿಜೇತ ಎನ್ .ಎಸ್ . ನಾಗರಾಜ್ ರಾವ್ ಕ್ರೀಡಾಕೂಟ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪೂರ್ವ ವಲಯ ಐಜಿಪಿ ಎನ್ . ಸತೀಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಎಸ್ಪಿ ಎಚ್ .ಟಿ. ಶೇಖರ್ ತಿಳಿಸಿದ್ದಾರೆ.
-----

ವಿಕಲಚೇತನರ ಕ್ರೀಡಾಕೂಟ

ದಾವಣಗೆರೆ: ವಿಶ್ವ ವಿಕಲಚೇತನರ ದಿನಾಚರಣೆ-2026ರ ಪ್ರಯುಕ್ತ ನ.20 ರಂದು ನಗರದ ಮೋತಿ ವೀರಪ್ಪಕಾಲೇಜು ಮೈದಾನದಲ್ಲಿಜಿಲ್ಲೆಯ ವಿಕಲಚೇತನರಿಗಾಗಿ ನಾನಾ ಕ್ರೀಡಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಕೇಂದ್ರ ಸಂಖ್ಯೆ : 08192- 263939 ಹಾಗೂ ಆಯಾ ತಾಲೂಕಿನ ತಾಪಂ ಕಚೇರಿ ಸಂಪರ್ಕಿಸಬಹುದು.

------

ಸಾಲ ಸೌಲಭ್ಯಕ್ಕೆ ಅರ್ಜಿ

ದಾವಣಗೆರೆ: 2020-21ನೇ ಸಾಲಿನ ಎಸ್ .ಎಫ್ .ಸಿ. ಮುಕ್ತನಿಧಿಯ ಶೇ.24.10 ಯೋಜನೆ ಹಾಗೂ ಟಿ.ಎಸ್ .ಪಿ. ಅನುದಾನದಡಿ ಮಲೇಬೆನ್ನೂರು ಪುರಸಭೆ ವ್ಯಾಪ್ತಿಯ ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮಲೇಬೆನ್ನೂರು ಪುರಸಭೆ ಕಾರ್ಯಾಲಯ ಅಥವಾ ದೂ: 08192-268858ಕ್ಕೆ ಸಂಪರ್ಕಿಸಬಹುದು.

-------

ಆಕ್ಷೇಪಣೆ ಆಹ್ವಾನ

ದಾವಣಗೆರೆ: ಹಿರಿಯ ಉಪನೋಂದಣಿ ಕಚೇರಿ, ದಾವಣಗೆರೆ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ 2026-27ನೇ ಸಾಲಿನ ಮಾರ್ಗದರ್ಶಿ ಸೂಚಿ ಮಾರುಕಟ್ಟೆ ಬೆಲೆಯನ್ನು ಪರಿಷ್ಕರಿಸಲಾಗಿದೆ. ಸಾರ್ವಜನಿಕರು ತಮ್ಮ ಲಿಖಿತ ಆಕ್ಷೇಪಣೆ ಹಾಗೂ ಸಲಹೆ ಸಲ್ಲಿಸಲು ನ.14 ರಿಂದ ಮುಂದಿನ 15 ದಿನಗಳಗೆ ಅವಕಾಶ ಕಲ್ಪಿಸಲಾಗಿದೆ. ಮಾಹಿತಿಗಾಗಿ ಅಥವಾ ಆಕ್ಷೇಪಣೆ ಸಲ್ಲಿಸಲು ದಾವಣಗೆರೆ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.