Pension Protest Against Nda Government From Political Perspective
ಕನಿಷ್ಠ ಐದು ಸಾವಿರ ರೂ.ಪಿಂಚಣಿ ನೀಡಿ
Contributed by: Vinayaka Naik P|Vijaya Karnataka•
ಕಿಕ್ಕರ್ : ರಾಷ್ಟ್ರೀಯ ಸಂಘರ್ಷ ಸಮಿತಿಯಡಿ ಪಿಂಚಣಿದಾರರು ಪ್ರತಿಭಟನೆ
---ಕನಿಷ್ಠ ಐದು ಸಾವಿರ ರೂ.ಪಿಂಚಣಿ ನೀಡಿ
ವಿಕ ಸುದ್ದಿಲೋಕ ದಾವಣಗೆರೆ
ಹೆಚ್ಚಿನ ಪ್ರಮಾಣದಲ್ಲಿ ಪಿಂಚಣಿ ವಂತಿಗೆ ನೀಡಿರುವ ಎಲ್ಲಾಅಸಂಘಟಿತ ಕಾರ್ಮಿಕರಿಗೆ ಕನಿಷ್ಠ 5 ಸಾವಿರ ರೂ. ಪಿಂಚಣಿ ನೀಡಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಕೆಬಿ ಬಡಾವಣೆಯ ಪಿಎಫ್ ಕಚೇರಿ ಎದುರು ಬುಧವಾರ ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿಇಪಿಎಸ್ -95 ಪಿಂಚಣಿದಾರರು ಪ್ರತಿಭಟನೆ ನಡೆಸಿ, ಸ್ಥಳೀಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಖಾಸಗಿ ಹಾಗೂ ಸಾರ್ವಜನಿಕ ವಲಯದ ನಿಗಮ, ಮಂಡಳಿ ಸಹಕಾರ ವಲಯದಲ್ಲಿಮೂರ್ನಾಲ್ಕು ದಶಕಗಳ ಕಾಲ ಅಸಂಘಟಿತ ಕಾರ್ಮಿಕರಾಗಿ ಸೇವೆ ಸಲ್ಲಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಆದರೆ, 1995ರಂದು ಕೇಂದ್ರ ಸರಕಾರ ಸಾಮಾಜಿಕ ಭದ್ರತೆಯಡಿ ಪಿಂಚಣಿ ಯೋಜನೆ ಆರಂಭಿಸಿ, ಕನಿಷ್ಠ ಪಿಂಚಣಿ ಒಂದು ಸಾವಿರ ರೂ. ನೊಂದಾಯಿಸಕೊಂಡು ಅದರಂತೆ ನಮ್ಮಿಂದ ವಂತಿಗೆ ರೂಪದಲ್ಲಿಸಂಗ್ರಹಿಸಿದೆ. ಆದರೆ, 2014ರಿಂದ ಎಲ್ಲಾವಲಯದ ನಿವೃತ್ತ ಕಾರ್ಮಿಕರಿಗೆ ನ್ಯಾಯಯುತ ಪಿಂಚಣಿ ನೀಡದೆ ಕೇವಲ ಒಂದು ಸಾವಿರ ರೂ. ಮಾತ್ರ ಪಿಂಚಣಿ ನೀಡುತ್ತಿದೆ. ಈ ಮೊತ್ತದಲ್ಲಿವೃದ್ಧ ಪಿಂಚಣಿದಾರರಿಗೆ ದುಬಾರಿ ಯುಗದಲ್ಲಿಕುಟುಂಬ ನಡೆಸುವುದೇ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.
ಕನಿಷ್ಠ ಪಿಂಚಣಿ 7500 ರೂ. ಜತೆಗೆ ಡಿಎ ಹಾಗೂ ವೈದ್ಯಕೀಯ ಸೌಕರ್ಯ ಕಲ್ಪಿಸಬೇಕು. ಅವಲಂಬಿತ ವಿಧವೆಯರಿಗೆ ಪೂರ್ಣ ಪ್ರಮಾಣದ ಪಿಂಚಣಿ ನೀಡಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ 5 ಸಾವಿರ ರೂ. ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿಸಂಘಟನೆಯ ಎಂ.ಶಾಂತಪ್ಪ, ಎಚ್ .ಎನ್ . ಮರುಳಸಿದ್ದಯ್ಯ, ಸಿ.ಜಿ. ಈಶ್ವರಪ್ಪ, ಎಂ.ಬಿ. ತಂಗಂಡಗಿ, ದತ್ತಪ್ಪ ಶೆಟ್ಟರ್ , ಪುಟಗನಾಳ್ ಮಂಜುನಾಥ್ , ಎನ್ .ಇ. ಬಸವರಾಜ, ವಿಜಯಕುಮಾರ್ , ಶ್ರೀಹರಿ ಜಾದೂಗಾರ ಇತರರು ಪಾಲ್ಗೊಂಡಿದ್ದರು.
-----
ಫೋಟೋ ಬರಲಿದೆ
ಪಿಂಚಣಿ ವಂತಿಗೆ ನೀಡಿರುವ ಎಲ್ಲಾಅಸಂಘಟಿತ ಕಾರ್ಮಿಕರಿಗೆ ಕನಿಷ್ಠ 5 ಸಾವಿರ ರೂ. ಪಿಂಚಣಿ ನೀಡಬೇಕೆಂದು ಆಗ್ರಹಿಸಿ ದಾವಣಗೆರೆಯಲ್ಲಿಬುಧವಾರ ಪಿಂಚಣಿದಾರರು ಪ್ರತಿಭಟನೆ ನಡೆಸಿದರು.