ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿಜರುಗುತ್ತಿರುವ ಶ್ರೀಮದ್ ಭಾಗವತ ಸಪ್ತಾಹದ ಮೂರನೇ ದಿನ ಸಂಜೆ ಸರೈ್ವಶ್ವರ ್ಯ ದೀಪ ಪೂಜೆ ವೈಭವದಿಂದ ನೆರವೇರಿತು.
ಕ್ಷೇತ್ರದ ದೇಲಂಪಾಡಿ ಗಣೇಶ ತಂತ್ರಿಗಳು ದೀಪ ಪ್ರಜ್ವಲನೆಗೈದು ದೀಪಾಲಂಕಾರಕ್ಕೆ ಚಾಲನೆ ನೀಡಿದರು. ಬಳಿಕ ಭಾಗವತ ಪ್ರವಚನಕಾರರಾದ ಬ್ರಹ್ಮಶ್ರೀ ನಾರಾಯಣ ಮೂರ್ತಿ ಗುರುಪುರಂ ಅವರು ಮಾತೆಯರಿಗೆ ಅರ್ಚನಾ ಮಂತ್ರವನ್ನು ಉಪದೇಶಿಸಿ ಪೂಜಾ ವಿಧಿವಿಧಾನಗಳನ್ನು ನಡೆಸಿ ಕೊಟ್ಟರು. ಮಾತೆಯರು ಭಕ್ತಿ ಶ್ರದ್ಧೆಯಿಂದ ದೀಪಾರ್ಚನೆ ಮಾಡಿ ಕೃತಾರ್ಥರಾದರು. ನಾಲ್ಕನೇ ದಿನ ವಿಶೇಷ ಆಕರ್ಷಣೆಯಾಗಿ ಕೃಷ್ಣ-ರಾಧೆಯರ ವೇಷ ಹಾಗೂ ಕೃಷ್ಣನ ತುಂಟಾಟ ಕಾರ ್ಯಕ್ರಮ ಜರುಗಿತು......