ರಾಮನಗರ: ದಾಸಶ್ರೇಷ್ಠರಾದ ಕನಕದಾಸರ ಜಯಂತಿಯನ್ನು ಇದೇ ನ. 27ರಂದು ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಆರ್ . ಚಂದ್ರಯ್ಯ ಅವರು ಸೂಚಿಸಿದರು.ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಹಮ್ಮಿಕೊಳ್ಳಲಾಗಿದ್ದ ಕನಕದಾಸರ ಜಯಂತಿ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೆರವಣಿಗೆ ಕಾರ್ಯಕ್ರಮಕ್ಕೆ ಐದು ಜಾನಪದ ಕಲಾತಂಡಗಳನ್ನು ಪ್ರಾಯೋಜಿಸುವುದು, ಲಘು ಉಪಹಾರ ವ್ಯವಸ್ಥೆ, ನಿರೂಪಣೆ ಹಾಗೂ ಉಪನ್ಯಾಸ ವ್ಯವಸ್ಥೆ ಮಾಡುವಂತೆ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ಅವರಿಗೆ ತಿಳಿಸಿದರು.
ಜಯಂತಿ ದಿನದಂದು ಕನಕದಾಸರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಇರಿಸಿ ಮೆರವಣಿಗೆ ಮಾಡುವಂತೆ ಸಭೆಯಲ್ಲಿಭಾಗವಹಿಸಿದ್ದ ಸಮುದಾಯದ ಮುಖಂಡರು ಕೋರಿದಾಗ, ಬೆಳ್ಳಿರಥಕ್ಕೆ ಹೂವು ಹಾಗೂ ತಳಿರು ತೋರಣದಿಂದ ಅಲಂಕರಿಸಿ ಡಾ. ಬಿ.ಆರ್ . ಅಂಬೇಡ್ಕರ್ ಭವನದಿಂದ ಜಿಲ್ಲಾಪಂಚಾಯಿತಿ ಸಭಾಂಗಣದವರೆಗೆ ಮೆರವಣಿಗೆ ಮಾಡಲಾಗುವುದು. ಈ ಸಂದರ್ಭದಲ್ಲಿಜನಪದ ಕಲಾತಂಡಗಳು ಭಾಗವಹಿಸಲಿದ್ದು, ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಸ್ವಚ್ಛತೆಯನ್ನು ನಗರಸಭೆ ನಿರ್ವಹಿಸಬೇಕು. ವೇದಿಕೆ ಕಾರ್ಯಕ್ರಮಕ್ಕೆ ತೋಟಗಾರಿಕೆ ಇಲಾಖೆ ಹೂಕುಂಡಗಳ ವ್ಯವಸ್ಥೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿಆಶಾ-ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳೆಯರು, ಪೌರಕಾರ್ಮಿಕರು, ಜಿಲ್ಲಾಮತ್ತು ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸುವ ಬಗ್ಗೆ ನಾನಾ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಸಾರ್ವಜನಿಕರು ಹಾಗೂ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿಕಾರ್ಯಕ್ರಮದಲ್ಲಿಭಾಗವಹಿಸಬೇಕು ಹಾಗೂ ಸಂಬಂಧಿಸಿದ ಎಲ್ಲಇಲಾಖೆಗಳು ಪರಸ್ಪರ
ಸಮನ್ವಯದಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಅವರು ತಿಳಿಸಿದರು. ಕುರುಬ ಸಮುದಾಯದ ಮುಖಂಡರಾದ ರೇಣುಕಪ್ಪ ಅವರು ಮಾತನಾಡಿ,
ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ಆಯೋಜಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿಸಮುದಾಯದ ಮುಖಂಡರುಗಳಾದ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ರೈಡ್ ನಾಗರಾಜು, ಕಾರ್ಯದರ್ಶಿ ನಾರಾಯಣ, ಸಿದ್ದೇಗೌಡ ಕುಂಬಾಪುರ, ಉಮೇಶ್ , ಮಹೇಶ್ , ನಾರಾಯಣ, ಹರಳಪ್ಪ, ರಾಮಕೃಷ್ಣಯ್ಯ ಸೇರಿದಂತೆ ಜಿಲ್ಲಾಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.