ಹಾಲು, ಬಸ್ ದರ ಹೆಚ್ಚಳಕ್ಕೆ ಆಕ್ರೋಶ | ಜನರ ಆರ್ಥಿಕ ಸಂಕಷ್ಟ ನಿವಾರಣೆಗೆ ಆಗ್ರಹವಿಕ ಸುದ್ದಿಲೋಕ ಹೂವಿನಹಡಗಲಿ
ಹಾಲು, ಬಸ್ ದರ ಸೇರಿ ದಿನಬಳಕೆ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಜೆಡಿಎಸ್ ತಾಲೂಕು ಘಟಕದಿಂದ ಪಟ್ಟಣದಲ್ಲಿಪ್ರತಿಭಟಿಸಲಾಯಿತು.
ಪಕ್ಷದ ತಾಲೂಕಾಧ್ಯಕ್ಷ ಸೋಮ್ಲಾನಾಯ್ಕ ಮಾತನಾಡಿ, ‘‘ರಾಜ್ಯದಲ್ಲಿಭೀಕರ ಬರ ಆವರಿಸಿದ್ದು, ಜನರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರನ್ನು ಮತ್ತಷ್ಟು ಆರ್ಥಿಕ ಹೊರೆಯಲ್ಲಿಸಿಲುಕಿಸಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘‘ಕ್ಷೇತ್ರದ ಶಾಸಕ ಕೃಷ್ಣನಾಯ್ಕ ಅವರು ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಹೋಗಿದ್ದಾರೆ. ಆದರೆ, ಸಮಸ್ಯೆಗಳ ಪರಿಹಾರಕ್ಕೆ ಇನ್ನೂ ಚಾಲನೆ ದೊರೆತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿಅಭಿವೃದ್ಧಿ ಕುಂಠಿತವಾಗಿದ್ದು, ಮೂಲಸೌಲಭ್ಯಗಳಿಗೂ ಕೊರತೆ ಎದುರಾಗಿದೆ,’’ ಎಂದು ದೂರಿದರು.
ಮುಖಂಡರಾದ ಹನುಮಂತಗೌಡ, ನಬಿಸಾಬ್ , ವಿಜಯಲಕ್ಷ್ಮಿ, ಪಲ್ಲವಿ, ಮಲ್ಲಪ್ಪ ಗವಾಯಿ ಸೇರಿ ಇತರರು ಪಾಲ್ಗೊಂಡಿದ್ದರು.
ಫೋಟೋ ಕ್ಯಾಪ್ಷನ್ : 17ಎಚ್ ಡಿಎಲ್ ಪಿ1
ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ನಿಂದ ಹೂವಿನಹಡಗಲಿಯಲ್ಲಿಪ್ರತಿಭಟನೆ ನಡೆಯಿತು.