ಕನ್ನಡ ಭಾಷೆ ಬೆಳೆಸಿ

Contributed by: skj2022vk@gmail.com|Vijaya Karnataka•
clear message about kannada language
ಕನ್ನಡ ಭಾಷೆ ಬೆಳೆಸಿ

ವಿಕ ಸುದ್ದಿಲೋಕ ಸಿಂದಗಿ
‘‘ಕನ್ನಡ ಭಾಷೆಯನ್ನು ಬೆಳೆಸಿ, ಉಳಿಸುವುದು ನಮ್ಮೆಲ್ಲರ ಕರ್ತವ್ಯ,’’ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘‘ಕನ್ನಡಿಗರೆಲ್ಲರೂ ಅಭಿಮಾನ ಹಾಗೂ ಗೌರವದಿಂದ ಆಚರಿಸುವ ಹಬ್ಬ ಕನ್ನಡ ರಾಜ್ಯೋತ್ಸವ, ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಿದ ಸಾಹಿತಿಗಳು ಹಾಗೂ ಪೂರ್ವಜರನ್ನು ನಾವೆಲ್ಲರೂ ನೆನೆಯಬೇಕು,’’ ಎಂದರು.

ತಹಸೀಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿದರು. ಜ್ಞಾನಭಾರತಿ ವಿದ್ಯಾಮಂದಿರದ ವಿದ್ಯಾರ್ಥಿಗಳು ರಾಷ್ಟಗೀತೆ ಹಾಗೂ ನಾಡಗೀತೆ ಹಾಡಿದರು.

ಕನ್ನಡದ ಮೇರು ಸಾಹಿತಿಗಳ ಭಾವಚಿತ್ರ ಹಾಗೂ ವಾದ್ಯಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿಸಾಗಿ ಅಂಬೇಡ್ಕರ್ ಭವನದಲ್ಲಿಹಮ್ಮಿಕೊಂಡಿದ್ದ ಕಾರ್ಯಕ್ರಮದ ಸ್ಥಳಕ್ಕೆ ತಲುಪಿತು. ನಾಗೇಶ ತಳವಾರ ಉಪನ್ಯಾಸ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್ .ಆಲಗೂರ, ಸಿಪಿಐ ಸುನೀಲ ಮೂಲಿಮನಿ, ಪೌರಾಯುಕ್ತ ರವಿ ಶಿರಗುಪ್ಪಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಂತೋಷ ಸಾಲಿ, ಕಸಾಪ ತಾಲೂಕು ಅಧ್ಯಕ್ಷ ವೈ.ಸಿ.ಮಯೂರ, ಪ್ರವೀಣ ಕಂಠಿಗೊಂಡ, ದಾನಪ್ಪಗೌಡ ಚನ್ನಗೊಂಡ, ಸುನಂದಾ ಯಂಪೂರೆ, ಸಿದ್ದು ಮಲ್ಲೇದ ಮತ್ತಿತರರಿದ್ದರು.

01ಎಸ್ .ಎನ್ .ಡಿ01

ಸಿಂದಗಿಯಲ್ಲಿ71ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ತಹಸೀಲ್ದಾರ್ ಕಚೇರಿ ಆವರಣದಲ್ಲಿಶಾಸಕ ಅಶೋಕ ಮನಗೂಳಿ ಧ್ವಜಾರೋಹಣ ನೆರವೇರಿಸಿದರು.