ಬೊಮ್ಮನಹಳ್ಳಿ : ಮೆಟ್ರೋ ನಿಲ್ದಾಣಕ್ಕೆ ‘ ಬಿಳೇಕಹಳ್ಳಿ - ಐಐಎಂಬಿ ಮೆಟ್ರೋ ನಿಲ್ದಾಣ‘ ಎಂದು ಹೆಸರಿಡುವಂತೆ ಆಗ್ರಹಿಸಿ ಬಿಳೇಕಹಳ್ಳಿ ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರು ಬಿಎಂಆರ್ ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಬಿಳೇಕಹಳ್ಳಿ ಕೇವಲ ಊರಿನ ಹೆಸರಲ್ಲ, ಇದು ಸ್ಥಳೀಯ ಅಸ್ಮಿತೆಯ ಪ್ರತೀಕವಾಗಿದೆ. ದಶಕಗಳಿಂದ ಗುರುತಿಸಿಕೊಂಡಿರುವ ಊರಿನ ಹೆಸರನ್ನು ಮೆಟ್ರೊ ನಿಲ್ದಾಣದಲ್ಲೂಉಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ನಿಲ್ದಾಣದ ಹೆಸರಿನಲ್ಲಿ ಐಐಎಂಬಿ ಉಳಿಸಿಕೊಳ್ಳುವುದಕ್ಕೂ ತಮ್ಮ ವಿರೋಧವಿಲ್ಲಎಂದು ಸ್ಪಷ್ಟಪಡಿಸಿರುವ ಗ್ರಾಮಸ್ಥರು, ಪ್ರತಿಷ್ಠಿತ ಸಂಸ್ಥೆಗೂ ಗೌರವ ನೀಡಿ, ಊರಿನ ಹೆಸರಿಗೂ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.