ವಿಕ ಸುದ್ದಿಲೋಕ ಕುಂದಾಣಕನ್ನಡದ ಬೆಳವಣಿಗೆಗೆ ಪ್ರೋತ್ಸಾಹ ಅತ್ಯಾಗತ್ಯ. ಕನ್ನಡ ಮಾಧ್ಯಮದ ಶಿಕ್ಷಣ, ಪುಸ್ತಕಗಳ ಓದು, ಸಾಹಿತ್ಯ ಚಟುವಟಿಕೆಗಳು, ಕನ್ನಡದ ಡಿಜಿಟಲ್ ಬಳಕೆ ಹಾಗೂ ತಂತ್ರಜ್ಞಾನದಲ್ಲಿಕನ್ನಡದ ಅಭಿವೃದ್ಧಿಗೆ ಉತ್ತೇಜನ ನೀಡುವಂತಾಗಬೇಕು ಎಂದು ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕಾರಹಳ್ಳಿ ಗ್ರಾಪಂ ಪಿಡಿಒ ದಿಲೀಪ್ ಕುಮಾರ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಪಂಯಲ್ಲಿ71ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಶ್ರೀಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ದೈನಂದಿನ ಜೀವನ, ಶಿಕ್ಷಣ, ಆಡಳಿತ ಮತ್ತು ಸಾರ್ವಜನಿಕ ವ್ಯವಹಾರಗಳಲ್ಲಿಹೆಚ್ಚಿಗೆ ಬಳಸುವಂತೆ, ಕನ್ನಡದ ಸಾಹಿತ್ಯ ಶ್ರೀಮಂತಿಕೆ ಹಾಗೂ ಭಾಷಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರಾಜ್ಯದ ನಾನಾ ಜಿಲ್ಲೆ, ಪ್ರದೇಶ, ಜಾತಿ, ಧರ್ಮ ಮತ್ತು ಸಮುದಾಯಗಳ ಜನರನ್ನು ಕನ್ನಡ ಭಾಷೆಯ ಮೂಲಕ ಒಗ್ಗೂಡಿಸಿ, ಕನ್ನಡಿಗರಲ್ಲಿನಾಡಿನ ಬಗ್ಗೆ ಅಭಿಮಾನ ಮತ್ತು ಸಹೋದರತ್ವ ಭಾವನೆ ಬೆಳೆಸುವುದು ರಾಜ್ಯೋತ್ಸವದ ಉದ್ದೇಶದಲ್ಲೊಂದಾಗಿದೆ. ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವುದು ಪ್ರತಿ ಯುವಕರ ಮೇಲಿನ ಜವಾಬ್ದಾರಿಯಾಗಿರುತ್ತದೆ. ಯಕ್ಷಗಾನ, ಜನಪದ ಕಲೆ, ವಚನ ಸಾಹಿತ್ಯ, ದಾಸ ಸಾಹಿತ್ಯ, ಜನಪದ ಸಂಗೀತ ಹಾಗೂ ಕರ್ನಾಟಕದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಮಕ್ಕಳಿಗೆ ಕನ್ನಡ ಓದುವ ಮತ್ತು ಬರೆಯುವ ಅಭ್ಯಾಸವನ್ನು ಪೋಷಕರು ಮಾಡಬೇಕು. ಸ್ಥಳೀಯ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವುದು, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಮಹಾನೀಯರನ್ನು ಸ್ಮರಿಸುವುದು ಮತ್ತು ಗೌರವಿಸುವುದರೊಂದಿಗೆ ಕನ್ನಡಕ್ಕೆ ಆದ್ಯತೆ ನೀಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿಗ್ರಾಪಂ ಕಾರ್ಯದರ್ಶಿ ಹನುಮಂತರಾಯಪ್ಪ, ಬಿಲ್ ಕಲೆಕ್ಟರ್ ರವಿ, ಸಿಬ್ಬಂದಿ ಮತ್ತು ನೌಕರರು ಇದ್ದರು.
ಚಿತ್ರ: 1 ಕುಂದಾಣ 2
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಪಂಯಲ್ಲಿಕನ್ನಡ ರಾಜ್ಯೋತ್ಸವ ಅಂಗವಾಗಿ ಭುವನೇಶ್ವರಿ ದೇವಿಗೆ ಪಿಡಿಒ ದಿಲೀಪ್ ಕುಮಾರ್ ಪುಷ್ಪನಮನ ಸಲ್ಲಿಸಿದರು.