ಸಲಿಂಗಕಾಮಿ ಯುವಕರ ಬ್ಲಾಕ್ ಮೇಲ್ ; ಮೂವರ ಬಂಧನ

Contributed by: tvlbdr@gmail.com|Vijaya Karnataka•
have three been arrested for extortion
ವಿಕ ಸುದ್ದಿಲೋಕ ಬೀದರ್ ಸಲಿಂಗಕಾಮಿ ಯುವಕರನ್ನು ಗ್ರಿಂಡರ್ ಗೇ ಡೇಟಿಂಗ್ ಆ್ಯಪ್ ನ ಚಾಟ್ ಮೂಲಕ ನಿರ್ಜನ ಪ್ರದೇಶಕ್ಕೆ ಕರೆಸಿ ಅಶ್ಲೀಲ ವಿಡಿಯೊ/ಚಿತ್ರಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ಸಾಮಾಜಿಕ ಜಾಲ ತಾಣದಿಂದ ಆ್ಯಪ್ ನ್ನು ಅಕ್ರಮವಾಗಿ ಬಳಸಿಕೊಂಡು, ಅಮಾಯಕ(ಸಲಿಂಗಕಾಮಿ)ಯುವಕರನ್ನು ಬ್ಲಾಕ್ ಮೇಲ್ ಮಾಡಿ ಹಣ ಕೀಳುತ್ತಿದ್ದರು. ನಗರದ ಮಾರ್ಕೆಟ್ ಪೊಲೀಸ್ ಠಾಣೆ, ಗಾಂಧಿಗಂಜ್ ಹಾಗೂ ನೂತನ ನಗರ ಠಾಣೆಗಳಲ್ಲಿಒಟ್ಟು ಈ ಕುರಿತು ನಾಲ್ವರ ವಿರುದ್ಧ 3 ಪ್ರಕರಣ ದಾಖಲಾಗಿದ್ದವು. ಪೈಕಿ ಮೂವರನ್ನು ಬಂಧಿಸಿ, ಅವರಿಂದ 12 ಸಾವಿರ ನಗದು, 4 ಮೊಬೈಲ್ ,2 ಬೈಕ್ ಸೇರಿ ಒಟ್ಟು 2.12 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ಅ.12ರಂದು ದೂರುದಾರ ವಾಜಿದ್ ಅಲಿ, ಝಾಯಿದ್ ಈ ಇಬ್ಬರು ತಮ್ಮ ಮೇಲಾದ ಘಟನೆ ಕುರಿತು ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆ ತಂಡ ರಚಿಸಲಾಗಿತ್ತು. ಈ ತಂಡವು ಅ.26ರಂದು ಪ್ರಕರಣದ ಆರೋಪಿತರನ್ನು ಮತ್ತೆ ಮಾಡಿ, ಮೂವರನ್ನು ಬಂಧಿಸಿದೆ. ಬಂಧಿತರಿಂದ 12 ಸಾವಿರ ನಗದು, 04 ಮೊಬೈಲ್ , 02 ಬೈಕ್ ಸೇರಿ 2.12 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನೊಬ್ಬ ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರೆದಿದೆ. ಈ ನಾಲ್ವರು ಆರೋಪಿತರ ಮೇಲೆ ಈಗಾಗಲೇ ಗಾಂಧಿಗಂಜ್ , ನೂತನ ನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿವೆ. ಇಂತಹ ಪ್ರಕರಣಗಳಿಂದ ಜಿಲ್ಲೆಯ ಜನತೆ ಎಚ್ಚರದಿಂದ ಇರಬೇಕು ಎಂದು ಎಸ್ಪಿ ಸೂಚಿಸಿದ್ದಾರೆ. ಸೆನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಎನ್ .ಡಿ. ಸನದಿ, ಸಿಪಿಐ ಪಾಲಾಕ್ಷಯ್ಯ ಎಂ.ಹಿರೇಮಠ, ಪಿಎಸ್ ಐ ನಿಂಗಪ್ಪ ಮಣ್ಣೂರು, ಸಿಬ್ಬಂದಿ ಆರೀಫ್ , ಪ್ರೇಮ್ , ಮುತ್ತಣ್ಣ, ಈರಾರೆಡ್ಡಿ, ಪ್ರಶಾಂತ, ಅನಿಲ್ , ಹಣಮಂತ, ಧೂಳಪ್ಪ ಅವರನ್ನೊಳಗೊಂಡ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿದೆ.