ವಿಕ ಸುದ್ದಿಲೋಕ ಸಿಂಧನೂರು ‘‘ಸಮಾಜದಲ್ಲಿಪೂರ್ವಾಗ್ರಹ ಪೀಡಿತ ಸುಳ್ಳು ಇತಿಹಾಸವನ್ನು ವ್ಯವಸ್ಥಿತವಾಗಿ ತಿರುಚಿ ಹರಡಿಸುವ ಸಂದರ್ಭದಲ್ಲಿನಿಜವಾದ ಇತಿಹಾಸ ತಿಳಿಸಿ ಸಮಾಜದ ಸ್ವಾಸ್ಥತ್ರ್ಯ ಕಾಪಾಡುವ ದೊಡ್ಡ ಜವಾಬ್ದಾರಿ ಸಂಶೋಧಕರು ಹಾಗೂ ವಿದ್ಯಾರ್ಥಿಗಳ ಮೇಲಿದೆ,’’ ಎಂದು ವಿಜಡಮ್ ಕಾಲೇಜು ಪ್ರಾಂಶುಪಾಲ ಡಾ.ಶರೀಫ್ ಹಸಮಕಲ್ ಹೇಳಿದರು.
ನಗರದ ಸರಕಾರಿ ಮಹಾವಿದ್ಯಾಲಯದಲ್ಲಿಇತಿಹಾಸ ವಿಭಾಗದಿಂದ ಹಮ್ಮಿಕೊಂಡಿದ್ದ ಎಂ.ಎ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿಮಾತನಾಡಿದರು.
‘‘ಸ್ಥಳೀಯ ಇತಿಹಾಸ ದಾಖಲಿಸುವ ಪ್ರಯತ್ನ ಇಂದಿನ ಯುವ ಇತಿಹಾಸಕಾರರ ಗುರಿಯಾಗಬೇಕು. ಭೂ ಹೋರಾಟಗಳನ್ನು, ರೈತ ಚಳುವಳಿಗಳನ್ನು, ಸೌಹಾರ್ದ ತಾಣಗಳನ್ನು ದಾಖಲಿಸಬೇಕು,’’ ಎಂದರು.
ಐಕ್ಯೂಎಸಿ ಘಟಕದ ಸಂಚಾಲಕ ಡಾ.ವೈಜನಾಥ ಸಗರಮಠ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕರಾದ ಹನುಮೇಶ, ಸೈಯದ್ ಅಜ್ಗರ್ ಹುಸೇನ್ , ಗ್ರಂಥ ಪಾಲಕರಾದ ಯಲ್ಲಪ್ಪ ಗೋನವರ ಹಾಗೂ ಇತಿಹಾಸ ವಿಭಾಗದ ಉಪನ್ಯಾಸಕರಾದ ನಾರಾಯಣ ಬೆಳಗುರ್ಕಿ, ಶೋಭಾ ತೋರಣಗಲ್ , ಡಾ.ರಾಮಪ್ಪ ಗೋನವರ, ಉಮೇಶ್ ಗುರಿಕಾರ ಇದ್ದರು.
* ಆರ್ ಸಿಎಚ್ 01ಎಸ್ ಎನ್ ಡಿ4:
ಸಿಂಧನೂರಿನ ಸರಕಾರಿ ಮಹಾವಿದ್ಯಾಲಯದಲ್ಲಿಎಂ.ಎ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು.