ಹಾಲಿನ ದರ ಹೆಚ್ಚಳಕ್ಕೆ ಖಂಡನೆ

Contributed by: peerasab995@gmail.com|Vijaya Karnataka•
milk price hike protest in ballari
*ಎಸ್ ಯುಸಿಐ ಪಕ್ಷದಿಂದ ಪ್ರತಿಭಟನೆ

ಹಾಲಿನ ದರ ಹೆಚ್ಚಳಕ್ಕೆ ಖಂಡನೆ
ವಿಕ ಸುದ್ದಿಲೋಕ ಬಳ್ಳಾರಿ

ಹಾಲಿನ ದರ ಹೆಚ್ಚಳ ಖಂಡಿಸಿ ನಗರದ ರಾಯಲ್ ವೃತ್ತದಲ್ಲಿಎಸ್ ಯುಸಿಐ ಪಕ್ಷದಿಂದ ಭಾನುವಾರ ಪ್ರತಿಭಟನೆ ನಡೆಯಿತು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎ.ದೇವದಾಸ್ ಮಾತನಾಡಿ, ‘‘ರಾಜ್ಯ ಸರಕಾರ ಹಾಲಿನ ದರವನ್ನು ಪ್ರತಿ ಲೀಟರ್ ಗೆ 8ರೂ., ರಂತೆ ಹೆಚ್ಚಳ ಮಾಡಿರುವ ನಿರ್ಧಾರವನ್ನು ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಹೈನುಗಾರರ ಸಮಸ್ಯೆಯನ್ನು ಪರಿಹರಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು,’’ ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡ ಡಾ.ಪ್ರಮೋದ್ ಮಾತನಾಡಿ, ‘‘ಸರಕಾರ ಹಾಲು ಉತ್ಪಾದಕರ ಮತ್ತು ಗ್ರಾಹಕರ ಇಬ್ಬರ ಹಿತವನ್ನು ಪರಿಗಣಿಸಬೇಕು. ಮೇವು, ಪಶು ಆಹಾರ ಇತ್ಯಾದಿಗಳನ್ನು ರಿಯಾಯಿತಿ ದರದಲ್ಲಿಪೂರೈಸಬೇಕು. ಕೆಎಂಎಫ್ ನಲ್ಲಿರುವ ದುಂದುವೆಚ್ಚ ತಡೆಗಟ್ಟಬೇಕು. ಉತ್ಪಾದನೆಯ ವೆಚ್ಚ ಕಡಿಮೆ ಮಾಡುವ ಬದಲಿಗೆ ದರ ಹೆಚ್ಚಳವನ್ನೇ ಪರಿಹಾರ ಎಂದು ಪರಿಗಣಿಸಿದರೆ ಆಗ ಹಣದುಬ್ಬರದ ವಿಷಚಕ್ರಕ್ಕೆ ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಹಾಲು ಮಕ್ಕಳಿಗೆ ಸೇರಿದಂತೆ ಎಲ್ಲರಿಗೂ ಅವಶ್ಯಕ ಪೌಷ್ಟಿಕ ಆಹಾರವಾದ ಕಾರಣ ಸರಕಾರ ತಕ್ಷಣವೇ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕು,’’ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿಪಕ್ಷದ ಮುಖಂಡರಾದ ಎಂ.ಎ.ಎನ್ . ಮಂಜುಳಾ, ಆರ್ .ಸೋಮಶೇಖರ್ ಗೌಡ, ಡಿ.ನಾಗಲಕ್ಷ್ಮಿ, ಗೋವಿಂದ್ , ಈಶ್ವರಿ, ಸುರೇಶ್ , ವಿಜಯಲಕ್ಷ್ಮಿ, ಜೆ.ಪಿ.ರವಿಕಿರಣ್ , ಜಗದೀಶ್ , ಗುರಳ್ಳಿ ರಾಜ ಹಾಗೂ ಕಾರ್ಯಕರ್ತರು ಇದ್ದರು.

---

01 ಬಿಎಲ್ ವೈ ಪೀರಾಸಾಬ್ 07

ಹಾಲಿನ ದರ ಹೆಚ್ಚಳ ಖಂಡಿಸಿ ಬಳ್ಳಾರಿಯ ರಾಯಲ್ ವೃತ್ತದಲ್ಲಿಎಸ್ ಯುಸಿಐ ಪಕ್ಷದಿಂದ ಪ್ರತಿಭಟನೆ ನಡೆಯಿತು.